VIDEO : ತನ್ನ ಜೀವದ ಕುಡಿಯನ್ನು ಉಳಿಸಲು ಹಾವಿನ ಜೊತೆ ಸೆಣಸಾಡಿದ ತಾಯಿ ಇಲಿಯ ವಿಡಿಯೊ ನೋಡಿ!
ತಾಯಿಯನ್ನು ದೇವರು ನಿರ್ಮಿಸಿದ ಅದ್ಭುತಗಳಲ್ಲಿ ಒಂದು. ಜಗತ್ತಿನ ಮೇಲಿರುವ ಪ್ರತಿಯೊಂದು ಜೀವರಾಶಿಯ ತಾಯಿಯು ತನ್ನ ಜೀವದ ಕುಡಿಗಾಗಿ ಶ್ರಮಿಸುತ್ತಲೇ ಇರುತ್ತದೆ. ಕೆಲವೇ ದಿವಸಗಳ ಹಿಂದೆ ಹಂದಿಯು ತನ್ನ ಮರಿಯ ಮೇಲೆ ಹ’ಲ್ಲೆ ಮಾಡಿದ ಹುಲಿಯ ಹಿಡಿತದಿಂದ ತನ್ನ ಮರಿಗೆ ಸುರಕ್ಷಿತವಾಗಿ ಉಳಿಸಿಕೊಂಡು ಬಂದಿತ್ತು. ಅಷ್ಟೇ ಏಕೆ ಒಂದು ಬಾತುಕೋಳಿ ತನ್ನ ಮರಿಯ ಮೇಲಾಗುತ್ತಿರುವ ಮೊಸಳೆಯ ಹ’ಲ್ಲೆ ತಡೆಯಲು ಹೋಗಿ ತನ್ನ ಪ್ರಾ’ಣವನ್ನೇ ಕೊಟ್ಟಿತು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಲಿಯ ವಿಡಿಯೋ ಒಂದು ಇದೇ ರೀತಿಯ ಕಾರಣಕ್ಕಾಗಿ ವೈರಲ್ ಆಗುತ್ತಿದೆ. ಹಾಗೆ ನೋಡಲಾಗಿದೆ ಹಾವು ಮುಂಗುಸಿಯ ವೈ’ರ’ತ್ವದ ಹಾಗೆ ಹಾವು ಇಲಿಯ ವೈ’ರ’ತ್ವವು ಮೊದಲಿನಿಂದಲೇ ಇದೆ. ಹಾವಿನ ಆಹಾರಗಳಲ್ಲಿ ಇಲಿಯು ಒಂದಾಗಿದೆ. ಆದರೆ ಈ ವಿಡಿಯೋದಲ್ಲಿ ಇಲಿಯು ಹಾವಿನ ತಲೆ ಕೆಡಿಸಿದೆ.
ತನ್ನ ಮರಿಯನ್ನು ಹಾವಿನಿಂದ ರಕ್ಷಿಸಿಕೊಳ್ಳಲು ಇಲಿಯು ಮಾಡಿದ ಪ್ರಯತ್ನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಲಾಗಿ ದೊಡ್ಡದಾದ ಹಾವೊಂದು ಆದರೆ ಮರಿಯನ್ನು ಬಾಯಿಯಲ್ಲಿ ಹಿಡಿದುಕೊಂಡು ಓಡುವುದನ್ನು ನೋಡಿದ ತಾಯಿ ಇಲಿಯು ತನ್ನ ಮರಿಗಳನ್ನು ರಕ್ಷಿಸುವ ಸಲುವಾಗಿ ಹಾವಿನ ಬೆನ್ನಟ್ಟಿದೆ.
ಇಲಿಯು ಕೊನೆಗೆ ಹಾವಿನ ಬಾಲವನ್ನು ಕಚ್ಚಿ ತನ್ನ ಮರಿಯ ರಕ್ಷಣೆಯನ್ನು ಮಾಡಿಕೊಳ್ಳುತ್ತದೆ : ಈ ವಿಡಿಯೋವನ್ನು ಟ್ವಿಟರ್ನಲ್ಲಿ ಇಂಡಿಯನ್ ಫಾರೆಸ್ಟ್ ಆಫೀಸರ್ ಆದ ಸುಶಾಂತ್ ನಂದಾ ಅವರು ಮೊದಲ ಬಾರಿಗೆ ಶೇರ್ ಮಾಡಿದ್ದರು. ನಂತರ ಎಲ್ಲ ಕಡೆ ವೈರಲ್ ಆಯಿತು. ಸಾವಿನ ದವಡೆಯಲ್ಲಿ ರುವ ತನ್ನ ಮರಿಯನ್ನು ತಾಯಿ ಇಲಿಯು ಸ್ವಲ್ಪವೂ ಹೆದರದೆ ಧೈರ್ಯದಿಂದ ರಕ್ಷಿಸಿದ ಪರಿಯನ್ನು ನೋಡಿ ನೆಟ್ಟಿಗರು ಹೊಗಳಿಕೆಯ ಸುರಿಮಳೆಯನ್ನೇ ಗೈದಿದ್ದಾರೆ.
If you haven’t seen what mothers courage is… It rescues it baby from the snakes mouth. Unbelievable.. pic.twitter.com/Roo2WSkMa3
— Crazy Creator (@CrazyCreator14) June 6, 2021
ಇಲಿಯು ಮೃತ್ಯುವಿನ ದವಡೆಯಲಿರುವ ತನ್ನ ಮರಿಯನ್ನು ರಕ್ಷಿಸಿದ್ದು ನಿಜಕ್ಕೂ ಶ್ಲಾಘನೀಯ. ಈ ವಿಡಿಯೋವನ್ನು ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಭರ್ಜರಿಯಾಗಿ ವೈರಲ್ ಆಗಿದ್ದು, ವಿಡಿಯೊ ಹಳೆಯದಾದರೂ ಮತ್ತೆ ವೈರಲ್ ಆಗುತ್ತಿರುವುದು ಇಲಿಯ ಧೈರ್ಯ ನೆಟ್ಟಿಗರಿಗೆ ಇಷ್ಟ ಆಗುತ್ತಿರುವುದಕ್ಕೆ ಸಾಕ್ಷಿ. ವಿಡಿಯೊ ಮೇಲಿದೆ ನೋಡಿ…
-Team Infotrend