ತನ್ನ ಜೊತೆಗಿದ್ದ ಹಲ್ಲಿಯ ಮೇಲೆ ಹಾವು ಅ#ಟ್ಯಾಕ್ ಮಾಡಿದಾಗ, ಈ ಹಲ್ಲಿ ಹಾವಿನ ಜೊತೆಗೆ ಏನು ಮಾಡಿತು ನೋಡಿ!!!

ಇಂದಿನ ಕಾಲದಲ್ಲಿ ಸಹಾಯ ಮಾಡುವ ಜನರು ಸಿಗುವದು ತುಂಬಾ ವಿರಳ. ಅದರಲ್ಲಿ ನಿಸ್ವಾರ್ಥದಿಂದ ಸಹಾಯ ಮಾಡುವ ಜನರೂ ಸಿಗುವದು ಇನ್ನೂ ವಿರಳ. ನಮಗೆ ಒಬ್ಬ ವ್ಯಕ್ತಿ ಸಹಾಯ ಮಾಡುತ್ತ್ತಿದ್ದಾನೆ ಅಂದರೆ ಅದರ ಹಿಂದೆ ಏನೋ ಅವನ ಸ್ವಾರ್ಥ ವಿರುತ್ತದೆ. ಹೀಗಾಗಿ ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುವನೆ ನಿಜವಾದ ಸ್ನೇಹಿತ ಅಂತ ನಾವು ಎಷ್ಟೋ ಸಲ ಕೇಳಿದ್ದೇವೆ ಮತ್ತು ಓದಿದ್ದೇವೆ. ನಾವು ಒಬ್ಬರನ್ನು ನಿಸ್ವಾರ್ಥ ದಿಂದ ಸಹಾಯ ಮಾಡಿದರೆ ನಮಗೆ ಕಷ್ಟದ ಸಮಯದಲ್ಲಿ ಯಾರೊಬ್ಬರೂ ಖಂಡಿತವಾಗಿಯೂ ಸಹಾಯಕ್ಕೆ ಬಂದೆ ಬರುತ್ತಾರೆ ಇದು ಸೃಷ್ಟಿಯ ನಿಯಮವು ಸಹ ಹೌದು.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವೀಡಿಯೋ ನೋಡಿದರೆ ಸ್ನೇಹಿತರ ಬೆಲೆ ಗೊತ್ತಾಗುವದು. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಹಾವು ಅಲ್ಲಿದ್ದ ಹಲ್ಲಿಯನ್ನು ಅ#ಟ್ಯಾಕ್ ಮಾಡಿ ಇನ್ನೇನು ತನ್ನ ಅಹರವಾಗಿಸಿಕೊಳ್ಳಬೇಕು ಅನ್ನೋವಷ್ಟರಲ್ಲಿ ಅಲ್ಲಿಂದ ಮತ್ತೊಂದು ಹಲ್ಲಿ ಬಂದು ಹಾವಿನ ಜೊತೆಗೆ ಹೋರಾಟ ಮಾಡುತ್ತದೆ. ಆದರೆ ಹಾವಿನ ಶಕ್ತಿ ಹಲ್ಲಿಗಿಂತಲೂ ಹೆಚ್ಛಾಗಿರುವದರಿಂದ ಹಾವು ಅದರಿಂದ ತಪ್ಪಿಸಿಕೊಂಡು ಮತ್ತೆ ಆ ಹಲ್ಲಿಯನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆ. ಪಾಪ ಹಾವಿನ ಕೈಗೆ ಸಿಲುಕಿಕೊಂಡ ಹಲ್ಲಿ ಹಾವಿನಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರು ಸಹ ಅದರಿಂದ ಸಾಧ್ಯವಾಗುವದಿಲ್ಲ. ತನ್ನ ಜೊತೆಗಿದ್ದ ಹಲ್ಲಿಯೂ ಸಹ ತನ್ನ ಬಾಯಲ್ಲಿ ಹಿಡಿದು ಹಾವನ್ನು ದೂರ ತಳ್ಳುವ ಪ್ರಯತ್ನ ಸಹ ವಿಫಲವಾಗುತ್ತದೆ. ಹೀಗಾಗಿ ಕೆಲವೊಮ್ಮೆ ನಾವು ಎಷ್ಟೇ ಸಹಾಯ ಮಾಡಿದರು ಸಹ ಅದು ಉಪಯೋಗಕ್ಕೆ ಬರುವದಿಲ್ಲ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ nature_animal_bird ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋನೋಡಿ ಎಷ್ಟೋ ನೆಟ್ಟಿಗರು ಆ ಎರಡು ಹಲ್ಲಿಗಳ ನಡುವೆ ಇದ್ದ ಬಾಂಧವ್ಯದ ಕುರಿತು ಹಾಡಿ ಹೋಗಳುತ್ತಿದ್ದಾರೆ.