ತನ್ನ ತಂದೆ ಸೈಫ್ ಆಲಿ ಖಾನ್ ರ 5000 ಕೋಟಿ ಸಂಪತ್ತಿಗೆ ತೈಮೂರ್ ವಾರಸನಾಗುವುದು ಅಸಾಧ್ಯ: ಕಾರಣ ಇಲ್ಲಿದೆ

ತೈಮೂರ್ ಆಲಿ ಖಾನ್ ಪಟೌಡಿ ಈ ಬಾಲಕನು ದೇಶದಲ್ಲಿ ಯಾವುದೇ ಸೆಲೆಬ್ರೆಟಿ ಗಿಂತ ಕಡಿಮೆ ಏನಿಲ್ಲ ಎನ್ನುವಷ್ಟರ ಮಟ್ಟಿಗೆ ಮಾದ್ಯಮಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾನೆ. ಇದಕ್ಕೆ ಒಂದು ಕಾರಣ ಆತನ ಮುದ್ದಾದ ಫೋಟೋಗಳೆಂದು ಹಲವರು ಹೇಳಿದರೂ ಕೂಡಾ ವಾಸ್ತವ‌ದಲ್ಲಿ ಇದಕ್ಕೆ ಪ್ರಮುಖ ಕಾರಣ ಈತನ ತಂದೆ ತಾಯಿ ಎನ್ನುವುದು ನಿಜ. ತಂದೆ ಬಾಲಿವುಡ್ ನ ಸೂಪರ್ ಸ್ಟಾರ್ ನಟ ಸೈಫ್ ಆಲಿಖಾನ್ ಆದರೆ, ತಾಯಿ ಕೂಡ ಬಾಲಿವುಡ್‌ನ ಸ್ಟಾರ್ ನಟಿ ಕರೀನಾ ಕಪೂರ್ ಎಂಬುದೇ ತೈಮೂರ್ ನ ಜನಪ್ರಿಯತೆಗೆ ಕಾರಣ ಎನ್ನಬಹುದು. ತೈಮೂರ್ ನ ತಂದೆ ನಟ ಸೈಫ್ ಅಲಿ ಖನ್ ಪಟೌಡಿ ವಂಶದ ನವಾಬ ಎನ್ನುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಅವರ ಬಳಿ ಅಪಾರವಾದ ಸಂಪತ್ತು ಇರುವ ವಿಷಯ ಕೂಡಾ ಅನೇಕ ಬಾರಿ ಸುದ್ದಿಯಾಗಿದೆ. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ ನಟ ಸೈಫ್ ಅಲಿ ಖಾನ್ ತಮ್ಮ ಅಪಾರವಾದ ಆಸ್ತಿಗೆ ನನ್ನ ಮಗ ತೈಮೂರ್ ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಸೈಫ್ ಆಲಿಖಾನ್ ಆಸ್ತಿಯ ವಿಷಯದಲ್ಲಿ ಇರುವ ವಿ ವಾ ದಗಳು. ಸೈಫ್ ಅಲಿ ಖಾನ್ ಅವರ ಎಲ್ಲಾ ಚರ ಮತ್ತು ಸ್ಥಿರಾಸ್ತಿಗಳು ಶ ತ್ರು ಸಂಪತ್ತಿನ ಅಧಿನಿಯಮದ ಅಡಿಯಲ್ಲಿ ಬರುತ್ತಿದ್ದು,
ಇದರ ಅನ್ವಯ ಸೈಪ್ ಅಲಿ ಖಾನ್ ಅವರ ವಂಶಜರು ಆಸ್ತಿಯ ಮೇಲೆ ಹಕ್ಕನ್ನು ಚಲಾಯಿಸುವಂತೆಯೇ ಆಗಲೀ ಹಾಗೂ ಅವರು ತಮ್ಮ ಉತ್ತರಾಧಿಕಾರಿಯನ್ನು ಘೋಷಣೆ ಮಾಡಲು ಕೂಡ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಹಾಗೇನಾದರೂ ಒಂದು ವೇಳೆ ಅವರು ಆ ರೀತಿ ಮಾಡಬೇಕೆಂದರೆ ಮೊದಲು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆಯನ್ನು ಹೂಡಬೇಕಾಗುತ್ತದೆ ಎನ್ನಲಾಗಿದೆ.

ಸೈಫ್ ಅಲಿ ಖಾನ್ ಅವರ ಮುತ್ತಜ್ಜ ಹರಿಯಾಣ ಭೂಪಾಲ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಂಪತ್ತನ್ನು ಹೊಂದಿದ್ದು, ಇದರ ಮೌಲ್ಯ ಸರಿ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳು ಎನ್ನಲಾಗಿದೆ. ಕಾಲಾಂತರದಲ್ಲಿ ಈ ಆಸ್ತಿಯ ವ್ಯವಹಾರವನ್ನು ಸೈಫ್ ಅವರ ತಂದೆ ನೋಡಿಕೊಳ್ಳುತ್ತಿದ್ದರು. ಆದರೆ ಅವರ ನಿಧನದ ನಂತರ ಆಸ್ತಿಯ ನಿರ್ವಹಣೆಗೆ ಸಂಪೂರ್ಣ ಜವಾಬ್ದಾರಿಯು ಸೈಫ್ ಅಲಿ ಖಾನ್ ಅವರ ತಾಯಿ ಬಾಲಿವುಡ್ ನ ಹಿರಿಯ ನಟಿ ಶರ್ಮಿಳಾ ಟಾಗೋರ್ ಅವರಿಗೆ ಸೇರಿತ್ತು. ಕೆಲವು ವರ್ಷಗಳ ಕಾಲ ಸಂಪತ್ತಿನ ನಿರ್ವಹಣೆಯನ್ನು ಮಾಡಿದ ಶರ್ಮಿಳಾ ಟಾಗೋರ್ ಆನಂತರ ಆಸ್ತಿ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ಮಗಳು ಸೈಫ್ ಅವರ ಸಹೋದರಿ ಸಬಾ ಗೆ ಹಸ್ತಾಂತರ ಮಾಡಿದರು.

ನವಾಬ್ ಪಟೌಡಿ ಅವರ ಆಸ್ತಿಯ ವಿಲ್ ಬಗ್ಗೆ ಇನ್ನೂ ಯಾವುದೇ ವಿಷಯ ಕೂಡಾ ಬಹಿರಂಗವಾಗಿಲ್ಲ ಎನ್ನುವುದು ಕೂಡಾ ವಾಸ್ತವ. ಇದೇ ಕಾರಣದಿಂದಾಗಿ ಅವರು ತಮ್ಮ ಆಸ್ತಿಯಲ್ಲಿ ತಮ್ಮ ಮೂರು ಜನ ಮಕ್ಕಳಿಗೆ ಆಸ್ತಿಯನ್ನು ಹೇಗೆ ಹಂಚಿಕೆ ಮಾಡಿದ್ದಾರೆ ಎನ್ನುವ ವಿಷಯ ಯಾರಿಗೂ ತಿಳಿದಿಲ್ಲ. ನವಾಬ್ ಪಟೌಡಿ ಅವರ ಆಸ್ತಿಯ ವಿಚಾರದಲ್ಲಿ ಮೊದಲಿನಿಂದಲೂ ಕೂಡಾ ಸಾಕಷ್ಟು ವಿ ವಾ ದಗಳು ಇದ್ದು, ಪ್ರಸ್ತುತ ಭೂಪಾಲ್ ನಲ್ಲಿರುವ ಅವರ ಸಮಸ್ತ ಆಸ್ತಿಗಳು ಕೂಡ ಶ ತ್ರು ಸಂಪತ್ತಿನ ನಿಯಮದ ಅಡಿಗೆ ಸೇರಿಹೋಗಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಗೃಹ ಸಚಿವಾಲಯದ ಶ ತ್ರು ಆಸ್ತಿ ಇಲಾಖೆ ಈ ಆಸ್ತಿಯ ಬಗ್ಗೆ ದೀರ್ಘಕಾಲದಿಂದ ತನಿಖೆಯನ್ನು ನಡೆಸಿದೆ.

ಇತಿಹಾಸದ ಪುಟಗಳಲ್ಲಿನ ಪ್ರಕಾರ ಭೋಪಾಲ್‌ನ ನವಾಬ್ ಹಮೀದುಲ್ಲಾ ಅವರಿಗೆ ಗಂಡು ಮಗನಿಲ್ಲದ ಕಾರಣ ಅವರು ತನ್ನ ಹಿರಿಯ ಮಗಳು ಆಬಿದಾಳನ್ನು ತನ್ನ ಆಸ್ತಿಯ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಆದರೆ ಆಕೆ ಪಾಕಿಸ್ತಾನದಲ್ಲಿ ನೆಲೆಸಿದಳು. ನಂತರ ಹಮೀದುಲ್ಲಾ ತಮ್ಮ ಎರಡನೇ ಮಗಳು ಸಾಜಿದಾ ಈ ಆಸ್ತಿಯ ಉತ್ತರಾಧಿಕಾರಿಯಾದಳು. ಸಾಜಿದಾ, ಇಫ್ತಿಯಾರ್ ಅಲಿಯನ್ನು ಮದುವೆಯಾದರು. ಸಾಜಿದಾ ಅವರ ಮಗನ ಹೆಸರು ಮನ್ಸೂರ್ ಅಲಿ ಖಾನ್ ಪಟೌಡಿ. ಮನ್ಸೂರ್ ಅಲಿ ಖಾನ್ ನಟಿ ಶರ್ಮಿಳಾ ಟ್ಯಾಗೋರ್ ಅವರನ್ನು ವಿವಾಹವಾದರು. ಮನ್ಸೂರ್ ಮತ್ತು ಶರ್ಮಿಳಾ ಅವರ ಮಗನೇ ಸೈಫ್ ಅಲಿ ಖಾನ್. ಸಜೀದಾ ಅವರ ಮೊಮ್ಮಗ ಮತ್ತು ಹಮೀದುಲ್ಲಾ ಅವರ ಮರಿಮಗ.

ಸೈಫ್ ಮೊದಲು ನಟಿ ಅಮೃತಾ ಸಿಂಗ್ ರನ್ನು ಮದುವೆಯಾಗಿದ್ದು, ಅವರಿಗೆ ಇಬ್ರಾಹಿಂ ಮತ್ತು ಸಾರಾ ಇಬ್ಬರು ಮಕ್ಕಳಿದ್ದು ಅವರೂ ಕೂಡಾ ಆಸ್ತಿಯ ವಾರಸುದಾರರಾಗಿದ್ದಾರೆ. ಸೈಫ್ ಅಮೃತಾಗೆ ವಿ ಚ್ಚೇದನ ನೀಡಿದ ನಂತರ ಸೈಫ್ ಕರೀನಾ ಅವರನ್ನು ಎರಡನೇ ವಿವಾಹವಾಗಿದ್ದು ತೈಮೂರು ಕರೀನಾ ಸೈಫ್ ಮಗನಾಗಿದ್ದು, ಈಗ ಎರಡನೇ ಮಗನ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಸೈಫ್ ಬಯಸಿಯೂ ಕೂಡಾ ತಮ್ಮ ಪೂರ್ವಜರ ಆಸ್ತಿಗೆ ತೈಮೂರ್ ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.