ತನ್ನ ಪತ್ನಿಯೊಂದಿಗೆ ಅನೇಕ ವರ್ಷಗಳ ವರೆಗೆ ಕುರುಡನಾಗಿ ಇದ್ದ ಪತಿ; ನಿಜಾಂಶ ತಿಳಿದ ನಂತರ…

ಜಗತ್ತಿನಲ್ಲಿ ಅನೇಕ ರೀತಿಯ ವಿಚಾರಗಳಿಂದ ಕೂಡಿದ, ವಿಭಿನ್ನ ಸಂಸ್ಕಾರಗಳಿಂದ ಕೂಡಿದ, ಬೇರೆ ಬೇರೆ ಸಾಮಾಜಿಕ ವ್ಯವಸ್ಥೆಗಳಿಂದ ನಡೆದುಬಂದ ಜನರಿದ್ದಾರೆ. ಯಾರ್ಯಾರ ತಲೆಯಲ್ಲಿ ಯಾವ ಯಾವ ರೀತಿಯ ವಿಚಾರಗಳು ಮೂಡುತ್ತದೆ ಎಂಬುದು ಹೇಳಲಿಕ್ಕೆ ಸಾಧ್ಯವಿಲ್ಲ.

ಕೆಲವರು ತಮ್ಮ ಸಹಪಾಠಿಯೊಂದಿಗೇನೆ ಅವರಿಗೆ ಗೊತ್ತಿಲ್ಲದಂತೆ ತುಂಬಾ ವಿಚಿತ್ರವಾಗಿದೆ ಅಥವಾ ಅದ್ಭುತವಾಗಿದೆ ನಡೆದುಕೊಳ್ಳುತ್ತಾರೆ. ಕೆಲವೊಂದು ಸಲ ತಮ್ಮ ಲೈಫ್ ಪಾರ್ಟ್ನರ್ ಅವರ ಪರೀಕ್ಷೆಯನ್ನೇ ತೆಗೆದುಕೊಳ್ಳುತ್ತಿರುತ್ತಾರೆ. ಪರೀಕ್ಷೆ ಫಲಿತಾಂಶ ಧನಾತ್ಮಕವಾಗಿ ಬಂದಾಗ ಗೊತ್ತಾಗುತ್ತೆ ನನಗಾಗಿ ಮಿಡಿಯುವ ಜೀವ ನನಗೆ ಎಷ್ಟೊಂದು ಸರಿ ಎನ್ನುವುದು.

ವ್ಯಕ್ತಿಯ ಸ್ವರೂಪವನ್ನು ನೋಡಿ ಮದುವೆಯಾಗುವುದಕ್ಕಿಂತ ಸ್ವಭಾವವನ್ನು ನೋಡಿ ಮದುವೆಯಾಗುವುದು ಯಾವತ್ತೂ ಉತ್ತಮ. ಏಕೆಂದರೆ ಸ್ವರೂಪವು ಅಥವಾ ಸೌಂದರ್ಯ ಕಾಲಸರಿದಂತೆ ಬದಲಾಗುತ್ತದೆ. ಆದರೆ ಸ್ವಭಾವವು ಎಂದಿಗೂ ಬದಲಾಗುವುದಿಲ್ಲ.

ಇದೇ ವಿಷಯಕ್ಕೆ ಆಧರಿಸಿದ ಒಂದು ಕಥೆಯನ್ನು ಇಲ್ಲಿ ಹೇಳುತ್ತಿದ್ದೇವೆ. ಬೆಂಗಳೂರಿನ ಒಬ್ಬ ಶ್ರೀಮಂತ ವ್ಯಕ್ತಿ ಮತ್ತು ಬಡರೈತನ ಮಗಳ ನಡುವಿನ ಪ್ರೇಮ ಕಥೆ ಇಲ್ಲಿ ವಿವರಿಸಲಾಗಿದೆ. ಇದನ್ನು ಓದಿದ ಮೇಲೆ ನಿಮಗೂ ಪ್ರೀತಿಯೆಂದರೆ ಇವರಿಬ್ಬರ ಹಾಗೆ ಇರಬೇಕು ಎಂದೆನ್ನದೆ ಇರಲಾರಿರಿ.

ಬೆಂಗಳೂರಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಶಿವಂ ಹೆಸರಿನ ಹುಡುಗನೊಬ್ಬ ಒಂದು ದಿನ ಹುಡುಗಿಯೊಬ್ಬಳನ್ನು ನೋಡಿದ. ಆಕೆಯನ್ನು ನೋಡಿದ ತಕ್ಷಣ ಮದುವೆಯಾದರೆ ಈಕೆಯನ್ನೇ ಮದುವೆಯಾಗಬೇಕು ಎಂಬ ಬಯಕೆಯನ್ನು ಹೊತ್ತು ಆಕೆಯ ಎಲ್ಲ ಮಾಹಿತಿಯನ್ನು ಪಡೆದುಕೊಂಡನು. ಮಾಹಿತಿಯಲ್ಲಿ ಆ ಸಾಮಾನ್ಯ ಹುಡುಗಿಯು ಒಬ್ಬ ರೈತನ ಮಗಳು ಇದ್ದದ್ದು ಗೊತ್ತಾಯಿತು.

ನೋಡಲು ಎಷ್ಟು ಸುಂದರವಾಗಿದ್ದಳೋ ಅಷ್ಟೇ ಬುದ್ಧಿವಂತೆಯೂ ಆಗಿದ್ದಳು. ಶಿವಮ್ ಶ್ರೀಮಂತ ಕುಟುಂಬದಲ್ಲಿ ಬೆಳೆದ ಹುಡುಗನಾಗಿದ್ದ. ಆತ ವಿಚಾರ ಮಾಡಿದ ಏನೇ ಆದರೂ ಈಕೆಯನ್ನೆ ಮದುವೆಯಾಗಬೇಕೆಂಬ ಪಣತೊಟ್ಟು ಆಕೆಯನ್ನು ಪ್ರಪೋಸ್ ಮಾಡಿದನು. ಹುಡುಗನ ಎಲ್ಲ ಬ್ಯಾಗ್ರೌಂಡ್ ಕೇಳಿದ ನಂತರ ಹುಡುಗಿಯು ಆತನ ಜೊತೆಗೆ ಮದುವೆ ಯಾಗಲು ಸ್ಪಷ್ಟವಾಗಿ ನಿರಾಕರಿಸಿದಳು. ಆಕೆಗೆ ತಾನು ಒಂದು ಬಡತನದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತ ವರ್ಗದ ಹುಡುಗನ ಜೊತೆಗೆ ಮದುವೆಯಾಗುವುದು ಸರಿಯಾಗುವುದಿಲ್ಲ ಎಂದು ತಿಳಿದು ಶಿವಮನಿಗೆ ನಿರಾಕರಿಸಿದಳು.

ಆದರೆ ಶಿವಮ್ ಕೇಳುವವನಿರಬೇಕಲ್ಲ, ಆತ ನೇರ ಆ ರೈತನ ಮನೆಗೆ ಹೋಗಿ ಆಕೆಯ ತಂದೆಯನ್ನು ಭೇಟಿಯಾಗಿ ತನ್ನ ವಿಷಯವನ್ನೆಲ್ಲ ಹೇಳಿ ನಿಮ್ಮ ಮಗಳನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಂಡು ಜೀವನಪೂರ್ತಿ ಆಕೆಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭಾಷೆ ಕೊಟ್ಟು ಮನೆಯವರನ್ನು ಮದುವೆಗೆ ಒಪ್ಪಿಸಿಕೊಂಡನು. ಮಗಳ ಭವಿಷ್ಯ ಚೆನ್ನಾಗಿರಲಿ ಎಂದು ತಿಳಿದು ಮನೆಯವರು ಕೂಡ ಮಗಳಿಗೆ ಸರಿಯಾಗಿ ಬುದ್ಧಿ ಹೇಳಿ ಶ್ರೀಮಂತರ ಮನೆ ಸೊಸೆಯಾಗುವ ಭಾಗ್ಯವನ್ನು ಯಾಕೆ ಬಿಡುತ್ತೀ ಎಂದು ತಿಳಿಹೇಳಿ ಆಕೆಗೆ ಮದುವೆಗಾಗಿ ಒಪ್ಪಿಸಿದರು.

ಮದುವೆಯಾದ ನಂತರ ಇಬ್ಬರೂ ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷದಲ್ಲಿದ್ದರು. ವರ್ಷಗಳು ತಿಂಗಳುಗಳಾಗಿ, ತಿಂಗಳುಗಳು ವಾರಗಳಾಗಿ, ವಾರಗಳು ದಿನಗಳಾಗಿ, ದಿನಗಳು ಕ್ಷಣಗಳಾಗಿ ಜಾಲಿಯಲ್ಲಿ ಕಳೆಯತೊಡಗಿದವು.

ಇಬ್ಬರ ಸುಖಮಯ ಜೀವನ ಆನಂದದಲ್ಲಿ ನಡೆದಿರುವಾಗ ಯಾರ ದೃಷ್ಟಿ ತಾಗಿತೋ ಏನೋ ಆ ಹುಡುಗಿಗೆ ಆಕಸ್ಮಿಕವಾಗಿ ಯಾವುದೋ ಒಂದು ತ್ವಚೆಯ ರೋಗ ಕಂಡುಬಂತು. ರೋಗಕ್ಕೆ ಸಂಬಂಧಿಸಿದಂತೆ ಅನೇಕ ಉಪಚಾರಗಳು ನಡೆದವು. ಗಂಡನಾದವನು ಆಕೆಗಾಗಿ ತುಂಬಾ ಹಣವನ್ನು ಸಹಿತ ಖರ್ಚು ಮಾಡತೊಡಗಿದನು. ಅದರಿಂದ ಯಾವುದೇ ಲಾಭವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಆಕೆಯ ಸೌಂದರ್ಯ ಮಾತ್ರ ದಿನದಿಂದ ದಿನಕ್ಕೆ ಕ್ಷೀಣಿಸತೊಡಗಿತು. ಇಷ್ಟೆಲ್ಲಾ ನಡೆದಿರುವಾಗ ಹುಡುಗಿಯು ತನ್ನ ಸೌಂದರ್ಯ ಕ್ಷೀಣಿಸುತ್ತಿರುವದರ ಬಗ್ಗೆ ಚಿಂತೆ ಮಾಡಲು ಶುರುಮಾಡಿದಳು. ನನ್ನ ಪತಿ ನನ್ನ ಸೌಂದರ್ಯಕ್ಕೆ ಮರುಳಾಗಿ ಮದುವೆಯಾಗಿದ್ದಾನೆ. ಈ ಸಂದರ್ಭದಲ್ಲಿ ಎಲ್ಲಿ ನನಗೆ ಬಿಟ್ಟು ಹೋಗುತ್ತಾನೆ ಎಂಬ ಭ್ರಾಂತಿಯಿಂದ ಮತ್ತಷ್ಟು ಚಿಂತೆಗೀಡಾದಳು. ಈ ಚಿಂತೆ ಆಕೆಯನ್ನು ಮತ್ತಷ್ಟು ಕೃಷ ಮಾಡತೊಡಗಿತು.

ಅದೇ ಸಮಯಕ್ಕೆ ಒಂದು ದಿನ ಹುಡುಗನ ದೊಡ್ಡ ಅಪಘಾತವಾಯಿತು. ಅಪಘಾತದಲ್ಲಿ ಆತನ ತಲೆಗೆ ಪೆಟ್ಟಾಗಿ ಎರಡು ಕಣ್ಣುಗಳು ಕುರುಡಾದವು. ಹುಡುಗಿ ಇದೆಂಥಾ ಕಷ್ಟವೆಂದು ತಿಳಿದು ಹುಡುಗನ ಕಾಳಜಿ ಮತ್ತು ವ್ಯವಸ್ಥೆಯನ್ನು ಮಾಡತೊಡಗಿದಳು. ಹುಡುಗನ ಕಣ್ಣುಗಳು ಕುರುಡಾಗಿದ್ದರಿಂದ ಹುಡುಗಿಯ ಚಿಂತೆ ತಕ್ಕಮಟ್ಟಿಗೆ ದೂರವಾಗಿತ್ತು. ಈಗ ನನ್ನ ಸೌಂದರ್ಯ ಕಡಿಮೆಯಾದರೂ ಸಹ ನನ್ನ ಗಂಡ ಮಾತ್ರ ನನ್ನನ್ನು ಬಿಡುವುದಿಲ್ಲ ಎಂಬ ಭಾವನೆ ಆಕೆಯಲ್ಲಿ ಮೂಡಿತ್ತು.

ಆಕೆಯ ರೋಗ ಮಾತ್ರ ಕಡಿಮೆಯಾಗಿರಲಿಲ್ಲವಾದರೂ ಇಬ್ಬರ ಜೀವನ ಮಾತ್ರ ತುಂಬಾ ಚೆನ್ನಾಗಿ ನಡೆದಿತ್ತು. ಈ ಮಧ್ಯದಲ್ಲಿ ಆಚೆಗೆ ಆಗಿರತಕ್ಕಂತ ಚರ್ಮರೋಗವು ಮತ್ತಷ್ಟು ಉಲ್ಬಣಿಸಿತು. ನಂತರ ಅದರಲ್ಲಿಯೇ ಆಕೆಗೆ ಒಂದು ದಿನ ಮೃತ್ಯು ಸಂಭವಿಸಿತು. ಹುಡುಗ ಶಿವಮ ಮಾತ್ರ ಒಬ್ಬಂಟಿಗನಾದನು. ಆಕೆಯ ನೆನಪುಗಳು ಆತನನ್ನು ಮತ್ತಷ್ಟು ಬಲಹೀನನ್ನಾಗಿ ಮಾಡತೊಡಗಿದವು. ಇದಕ್ಕೆ ಬೇಸತ್ತು ಆತ ಪಟ್ಟಣವನ್ನು ತೆರೆದು ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬೇಕೆಂದು ನಿರ್ಧರಿಸಿದನು. ಪಟ್ಟಣವನ್ನು ಬಿಟ್ಟು ಹೋಗಲು ರೆಡಿಯಾದಾಗ ನೆರೆಮನೆಯ ಮಿತ್ರ ನಿನಗೆ ಎರಡು ಕಣ್ಣುಗಳಿಲ್ಲ ನೀನು ಇಂಥ ಪರಿಸ್ಥಿತಿಯಲ್ಲಿ ಎಲ್ಲಿಗೆ ಹೋಗುವೆ ಮತ್ತು ಉಳಿದ ಆಯುಷ್ಯವನ್ನು ಯಾವ ರೀತಿ ಕಳೆಯುವೆ ಎಂದು ಕೇಳಿದನು.

ಈ ಪ್ರಶ್ನೆಗೆ ಹುಡುಗ ಶಿವಂ ಕೊಟ್ಟ ಉತ್ತರವನ್ನು ಕೇಳಿ ನೆರೆಮನೆಯ ಯುವಕ ದಿಗ್ಭ್ರಾಂತನಾದನು. ನೀನು ನನ್ನ ಬಗ್ಗೆ ಕಾಳಜಿ ವಹಿಸಿದಕ್ಕಾಗಿ ನಾನು ನಿನಗೆ ಋಣಿಯಾಗಿದ್ದೇನೆ. ನನ್ನ ಕಣ್ಣುಗಳು ಎಂದಿಗೂ ಕುರುಡಾಗಿಲ್ಲ ಅವು ಚೆನ್ನಾಗಿಯೇ ಇವೆ. ನಾನು ಬರೀ ಕುರುಡನಂತೆ ನಟಿಸುತ್ತಿದ್ದೆ. ನನ್ನ ಹೆಂಡತಿಯನ್ನು ಆರೋಗ್ಯವಂತಳನ್ನಾಗಿ ಮಾಡುವುದಕ್ಕಾಗಿ ಮತ್ತು ಆಕೆಯ ಸೌಂದರ್ಯ ನಷ್ಟವಾಗುವ ಚಿಂತೆ ಯಲ್ಲಿ ನನ್ನ ಪತ್ನಿ ಇರಬಾರದೆಂದು ಯೋಚಿಸಿ ಈ ರೀತಿಯ ಕುರುಡನ ನಟನೆ ಮಾಡಿದೆ.

ನನ್ನ ಪತ್ನಿಗೆ ತನ್ನ ಮೇಲೆ ಗಂಡನ ಪ್ರೀತಿ ಇಲ್ಲವೆಂದು ಅನಿಸಕೂಡದು ಎಂಬ ಭಾವನೆಯಿಂದ ಹೀಗೆ ಮಾಡಿದೆ. ಇದರಿಂದ ನನ್ನ ಹೆಂಡತಿಯು ಜೀವಿಸಿದ ಕೊನೆಯ ದಿನಗಳನ್ನು ಸಂತೋಷದಲ್ಲಿಡಲು ಪ್ರಯತ್ನಿಸಿದೆ ಎಂದು ಹೇಳಿ ಶಿವಂ ಅಲ್ಲಿಂದ ನಡೆದನು. ಆದರೆ ಆತ ತನ್ನ ಪತ್ನಿಗಾಗಿ ಮಾಡಿದ ತ್ಯಾಗ, ಪ್ರೀತಿ ನೋಡಿ ವ್ಯಕ್ತಿಯ ಕಣ್ಣುಗಳಿಂದ ಅಶ್ರುಗಳನ್ನು ಹರಿದು ಬಂದವು.