ತನ್ನ ಪ್ರಾಣ ಉಳಿಸಿದ ರಿಕ್ಷಾ ಚಾಲಕನಿಗೆ ಯುವತಿ 8 ವರ್ಷಗಳ ನಂತರ ಧನ್ಯವಾದ ಹೇಳಿದ ರೀತಿಯೇ ಅದ್ಭುತ

ಈ ಭೂಮಿಯ ಮೇಲೆ ಒಳ್ಳೆಯ ಜನರು ಇನ್ನೂ ಇದ್ದಾರೆ. ಬೇರೆಯವರು ಕಷ್ಟದಲ್ಲಿ ಅಥವಾ ತೊಂದರೆಯಲ್ಲಿ ಇದ್ದಾರೆ ಎಂದರೆ ಅವರ ನೆರವಿಗೆ ಧಾವಿಸುವ, ತಮ್ಮಿಂದ ಆದ ನೆರವನ್ನು ನೀಡುವ ಹೃದಯವಂತರು ನಮ್ಮ ಮಧ್ಯೆ ಇದ್ದಾರೆ. ಮಾನವೀಯತೆಯ ಇಂತಹುದೇ ಒಂದು ನಿದರ್ಶನವನ್ನು ನೀಡುವ ಘಟನೆಯೊಂದು ಈಗ ಎಲ್ಲರ ಮುಂದೆ ಬಂದಿದೆ. ಹೌದು ನಾವು ಕಷ್ಟದಲ್ಲಿರುವಾಗ ಆ ದೇವರ ಮೇಲೆ ನಂಬಿಕೆಯಿಟ್ಟರೆ ದೈವವು ಯಾವುದಾದರೊಂದು ರೂಪದಲ್ಲಿ ನಮಗೆ ಸಹಾಯವನ್ನು ನೀಡುತ್ತದೆ ಎಂಬುದು ಕೂಡಾ ಅನೇಕರ ನಂಬಿಕೆಯಾಗಿದೆ. ಇಂದು ನಾವು ಕೂಡಾ ಇಂತಹ ದೇವದೂತರಂತಹ ವ್ಯಕ್ತಿಗಳ ಬಗ್ಗೆ ಹೇಳಲು ಹೊರಟಿದ್ದು, ಈ ವಿಷಯ ತಿಳಿದ ಮೇಲೆ ನೀವು ಕೂಡಾ ಈ ಭೂಮಿಯಲ್ಲಿ ಒಳ್ಳೆಯ ಜನರಿದ್ದಾರೆಂದು ಒಪ್ಪುವಿರಿ.

ನಾವು ಹೇಳಲು ಹೊರಟಿರುವ ವ್ಯಕ್ತಿಯು ರಿಕ್ಷಾ ಚಾಲನೆ ಮಾಡಿ ಜೀವನ ನಡೆಸುವ ಒಬ್ಬ ಬಡ ವ್ಯಕ್ತಿ. ಈ ರಿಕ್ಷಾ ಚಾಲಕನ ಹೆಸರು ಬಬ್ಲೂ. ಬಬ್ಲೂ ಕಳೆದ ಹಲವು ವರ್ಷಗಳಿಂದ ರಿಕ್ಷಾ ಚಾಲನೆ ಮಾಡಿ ತಮ್ಮ ಪರಿವಾರವನ್ನು ಪೋಷಿಸುತ್ತಿದ್ದಾರೆ. ಹೀಗೆ ಎಂಟು ವರ್ಷಗಳ ಹಿಂದೆ ಒಮ್ಮೆ ಬಬ್ಲೂ ತಮ್ಮ ಆಟೋದಲ್ಲಿ ಹೋಗುವಾಗ ವ್ಯಕ್ತಿಯೊಬ್ಬರು ಆಟೋವನ್ನು ನಿಲ್ಲಿಸಿ ಬಬ್ಲೂ ಅವರಿಗೆ ತನ್ನ ಮಗಳನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಅವಳ ಶಾಲೆಗೆ ತಲುಪಿಸುವಂತೆ ಹೇಳಿದ್ದಾರೆ. ಬಬ್ಲೂ ಸರಿ ಎಂದು ಆ ಹುಡುಗಿಯನ್ನು ಶಾಲೆಯ ಕಡೆಗೆ ಕರೆದೊಯ್ದಿದ್ದಾರೆ. ರಿಕ್ಷಾ ಸ್ವಲ್ಪ ದೂರ ಹೋಗುತ್ತಿದ್ದಂತೆ ಹುಡುಗಿ ಅಳಲು ಆರಂಭಿಸಿದ್ದಾಳೆ.

ಇದನ್ನು ಗಮನಿಸಿದ ಬಬ್ಲೂ ಆಟೋ ನಿಧಾನ ಮಾಡಿದ ಕೂಡಲೇ ಹುಡುಗಿ ಆಟೋ ಇಳಿದು ರೈಲ್ವೆ ಹಳಿಗಳ ಕಡೆ ಓಡಿಹೋಗಿದ್ದಾಳೆ, ಬಬ್ಲೂ ಕೂಡಾ ಆ ಹುಡುಗಿಯ ವರ್ತನೆ ನೋಡಿ ಶಾ ಕ್ ಆಗಿ ಅವರು ಕೂಡಾ ಅವಳ ಹಿಂದೆಯೇ ಓಡಿದಾಗ, ಹುಡುಗಿ ರೈಲ್ವೆ ಹಳಿಗಳ ಮಧ್ಯೆ ನಿಂತು ಆ ತ್ಮ ಹ ತ್ಯೆಗೆ ಪ್ರಯತ್ನ ಮಾಡುತ್ತಿರುವುದನ್ನು ಬಬ್ಲೂ ಗಮನಿಸಿದ್ದಾರೆ. ಬಬ್ಲೂ ಅವಳನ್ನು ಕಾರಣವೇನೆಂದು ಕೇಳಿದರೂ ಆ ಹುಡುಗಿ ಬಾಯಿ ಬಿಡಲೇ ಇಲ್ಲ, ಅದು ಮಾತ್ರವೇ ಅಲ್ಲದೇ ಅವಳು ಬಬ್ಲೂ ಅವರನ್ನೇ ಬೈ ದು ಅ ಪ ಮಾನ ಮಾಡಿದ್ದಾಳೆ‌. ಆದರೂ ಬೇಸರ ಮಾಡಿಕೊಳ್ಳದ ಬಬ್ಲೂ ಆ ಹುಡುಗಿಯನ್ನು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಗೆ ಬಂದ ಹುಡುಗಿ ಆಗಲೂ ಕೂಡಾ ಬಬ್ಲೂ ಅವರನ್ನು ಮನಬಂದಂತೆ ಬೈ ದು ನಿನ್ನ ಕೆಟ್ಟ ಮುಖ ಇನ್ನೊಂದು ಸಲ ತೋರಿಸಬೇಡ ಎಂದಿದ್ದಾಳೆ.

ಬಬ್ಲೂ ಅದಕ್ಕೂ ಬೇಸರ ಪಡೆದೆ ಹುಡುಗಿಯನ್ನು ಸುರಕ್ಷಿತವಾಗಿ ಅವಳ ಮನೆ ತಲುಪಿಸಿದ ತೃಪ್ತಿಯಿಂದ ಮನೆಗೆ ಬಂದಿದ್ದಾರೆ. ಈ ಘಟನೆ ನಡೆದ ಎಂಟು ವರ್ಷಗಳ ತರುವಾಯ ಒಮ್ಮೆ ಬಬ್ಲೂ ಅವರಿಗೆ ರಿಕ್ಷಾ ಆ್ಯ ಕ್ಸಿ ಡೆಂ ಟ್ ಆಗಿದೆ. ಆ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ಬಬ್ಲೂ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಪ್ರಜ್ಞೆ ಮರಳಿದ ಬಬ್ಲೂ ಎದುರಲ್ಲಿ ನಿಂತಿದ್ದರು ಒಬ್ಬ ಡಾಕ್ಟರ್. ಬಬ್ಲೂಗೆ ಚಿಕಿತ್ಸೆ ನೀಡಿದ್ದ ಆ ಡಾಕ್ಟರ್ ಅನ್ನು ನೋಡಿದ ಬಬ್ಲೂ ಅವರು ಆಕೆಯನ್ನು ಎಲ್ಲೋ ನೋಡಿರುವುದಾಗಿ ನೆನಪಿಸಿಕೊಂಡಿದ್ದಾರೆ‌.

ಆಗ ಆ ಹುಡುಗಿ ಎಂಟು ವರ್ಷಗಳ ಹಿಂದೆ ಆ ತ್ಮ ಹ ತ್ಯೆ ಮಾಡಿಕೊಳ್ಳಲು ಹೋಗಿದ್ದ ತನ್ನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟ ಇವರು ಕೂಡಾ ನನಗೆ ತಂದೆ ಸಮಾನರು ಎಂದು ಎಲ್ಲರಿಗೂ ಹೇಳಿದ್ದಾಳೆ. ಅವರು ಅಂದು ನನ್ನನ್ನು ಹಾಗೆ ಬಿಟ್ಟು ಹೋಗಿದ್ದರೆ ನಾನು ಇಂದು ಡಾಕ್ಟರ್ ಆಗುತ್ತಿರಲಿಲ್ಲವೆಂದು ಹುಡುಗಿ ಹೇಳಿದ್ದಾಳೆ. ಆ ಯುವತಿಯ ಮಾತು ಕೇಳಿ, ಅಂದು ತನ್ನನ್ನು ಮನಸ್ಸಿಗೆ ಬಂದಂತೆ ಬೈ ದು ಅ ಪ ಮಾನ ಮಾಡಿದ್ದ ಅದೇ ಹುಡುಗಿ ಇಂದು ಎಲ್ಲರ ಮುಂದೆ ತನ್ನ ತಂದೆ ಎಂದು ಕರೆದಾಗ ಬಬ್ಲೂ ನಿಜಕ್ಕೂ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಬ್ಲೂ ಅವರ ಈ ಕಥೆ ಕೇಳಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.