ತನ್ನ ಮದುವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಫುಲ್ ಗರಂ, ರಚಿತಾ ಹೇಳಿದ್ದೇ ಬೇರೆ!

ಸ್ಯಾಂಡಲ್ ವುಡ್ ಕ್ವೀನ್ ರಚಿತಾ ರಾಮ್ ಅವರು ಸೋಶಿಯಲ್ ಮಿಡಿಯಾದಲ್ಲಿ ಒಂದಲ್ಲ ಒಂದು ವಿಷಯದ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ರಚಿತಾ ರಾಮ್ ಅವರು ತಮ್ಮ ಮದುವೆಯ ವಿಷಯದ ಬಗ್ಗೆ ಮತ್ತೆ ಚರ್ಚೆಯಲ್ಲಿದ್ದಾರೆ. ಆದರೆ ಇದು ಖುದ್ದು ರಚಿತಾ ರಾಮ್ ಅವರಿಗೆನೇ ಗೊತ್ತಿಲ್ಲ. ಕೆಲವು ದಿನಗಳ ಹಿಂದೆ ರಚಿತಾ ರಾಮ್ ಅವರು ನಟ ದನ್ವೀರ್ ಜೊತೆಗೆ ತಗೆದುಕೊಂಡ ಒಂದು ಫೋಟೋವನ್ನು ಶೇರ್ ಮಾಡಿದ್ದರು. ಅದನ್ನು ನೋಡಿ ರಚಿತಾ ರಾಮ್ ಅವರ ಅಭಿಮಾನಿಗಳು ಅವರ ಮದುವೆಯು ದನ್ವೀರ್ ಜೊತೆಗೆ ಆಗುತ್ತಿದೆ ಅಂತ ತಿಳಿದುಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲವೊಬ್ಬರು ರಚಿತಾ ರಾಮ್ ಅವರನ್ನು ‘ಗೌಡರ್ ಹುಡುಗಾನೆ ಸಿಕ್ಕಿದ್ದಾನೆ ಅಂತನೂ ಕಾಮೆಂಟ್ ಮಾಡಿದ್ದಾನೆ.

ಈ ವೈರಲ್ ಸುದ್ದಿಯ ಕುರಿತು ನಟ ದನ್ವೀರ್ ಸಹ ಕೆಲವು ದಿವಸಗಳ ಹಿಂದೆ ಹೀಗೆ ಹೇಳಿದ್ದರು” ನಾನು ಮತ್ತು ರಚಿತಾ ಬೆಸ್ಟ್ ಫ್ರೆಂಡ್ ಆಗಿದ್ದೇವೆ ನಮ್ಮಿಬ್ಬರ ನಡುವೆ ಯಾವುದೇ ಪ್ರಕಾರದ ಸಂಬಂಧವಿಲ್ಲ ದಯವಿಟ್ಟು ಈ ಪ್ರಕಾರದ ಸುಳ್ಳು ಸುದ್ದಿ ಹರಡಿಸಬೇಡಿ” ಎಂದು ಹೇಳಿದ್ದಾರೆ.

ಬಹಿರಂಗವಾದ ಈ ಸುಳ್ಳು ಸುದ್ದಿಯಿಂದ ಬೇಸರವಾಗಿ ಸ್ವತಃ ರಚಿತಾ ರಾಮ ಅವರು ಸಹ ಈ ಕುರಿತು ಅಭಿಮಾನಿಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಅವರು ಹೇಳಿದ್ದೇನೆಂದರೆ, ” ನನ್ನ ಮತ್ತು ದನ್ವೀರ್ ನಡುವೆ ಒಂದು ಉತ್ತಮವಾದ ಸ್ನೇಹದ ಸಂಬಂಧವಿದೆ. ನಾನು ಮತ್ತು ದನ್ವೀರ್ ಅವರು ಒಂದು ಕಾರ್ಯಕ್ರಮದಲ್ಲಿ ತಗೆದುಕೊಂಡ ಫೋಟೋ ಅದು. ಅದನ್ನು ನೋಡಿ ಮದುವೆಯ ವಿಷಯಕ್ಕೆ ಹೋಲಿಸಬೇಡಿ. ಇದರಿಂದ ನನಗೆ ಮತ್ತು ನಮ್ಮ ಪರಿವಾರದವರಿಗೆ ತುಂಬಾ ನೋವಾಗುತ್ತೆ. ಆದುದರಿಂದ ಏನು ಅರಿಯದೆ ಈ ತರಹದ ಸುಳ್ಳು ಸುದ್ದಿಯನ್ನು ಹರಡಿಸಬೇಡಿ. ನನ್ನ ಮದುವೆಯೂ ಫಿಕ್ಸ್ ಆದರೆ ಸ್ವತಃ ನಾನೇ ನಿಮಗೆ ತಿಳಿಸುತ್ತೇನೆ. ನಿಮ್ಮ ಪ್ರೀತಿ ಹೀಗೆ ನನ್ನ ಮೇಲಿರಲಿ” ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ….