ತನ್ನ ಮರಿಗಳ ಸಾವಿನ ಸೇಡು ತೀರಿಸಿಕೊಂಡ ಕರಡಿ; ಕರಡಿ ಮಾಡಿದ ಪ್ರತಿ ದಾಳಿಯಲ್ಲಿ ಇಬ್ಬರು ಬಲಿ!
ತನ್ನ ಮರಿಗಳ ಮೇಲೆ ಮಾಡಿದ ಹಲ್ಲೆಯನ್ನು ಯಾವ ಪ್ರಾಣಿ ತಾಯಿಯು ಸಹಿಸುವದಿಲ್ಲ. ತನ್ನ ಮರಿಗಳ ಮೇಲೆ ಬಂದ ಸಂಕಟವನ್ನು ಯಾವಾಗಲೂ ತಾಯಿಯಾದ ಪ್ರಾಣಿಗಳು ತಮ್ಮ ಮೈಮೇಲೆ ತೆಗೆದುಕೊಳ್ಳುತ್ತವೆ. ಇಂತಹುದೇ ಒಂದು ಪ್ರಸಂಗ ನೆರೆಯ ಮಹಾರಾಷ್ಟ್ರದ ಬುಲಢಾಣಾ ಜಿಲ್ಲೆಯ ಸೋನಾಳಾ ವನ ಪರಿಕ್ಷೇತ್ರದಲ್ಲಿ ಬರುವ ಆಲೆವಾಡಿ ಪರಿಸರದಲ್ಲಿ ಘಟಿಸಿದೆ.
ಆಘಾತಕಾರಿ ವಿಷಯವೇನೆಂದರೆ ಘಟನೆ ನಡೆದ ಸ್ಥಳದಿಂದ ಸ್ವಲ್ಪ ಅಂತರದಲ್ಲಿಯೇ ಕರಡಿಯ ಎರಡೂ ಮರಿಗಳ ಮೇಲೆ ಕೊಡಲಿಯಿಂದ ಯಾರೋ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಕಾರಣದಿಂದ ಕರಡಿ ರೋಷಗೊಂಡು ತನ್ನ ಮರಿಗಳನ್ನು ಕೊಂದವರ ಮೇಲೆ ಹಲ್ಲೆ ಮಾಡಿ ಅವರಿಗೆ ಜೀವ ಸಹಿತ ಕೊಂದಿದೆ.

ಈ ಘಟನೆ ಗುರುವಾರದಂದು ಬೆಳಕಿಗೆ ಬಂದಿದೆ. ಘಟನೆ ನಡೆದಲ್ಲಿಯೇ ಕರಡಿಯ ಎರಡು ಮರಿಗಳು ಸಹಿತ ಸತ್ತು ಬಿದ್ದಿವೆ. ಇದೇ ಕಾರಣದಿಂದ ತಾಯಿ ಕರಡಿ ವ್ಯಕ್ತಿಗಳ ಕೊಲೆ ಮಾಡಿರಬಹುದು ಎಂಬ ಸಂಶಯ ವ್ಯಕ್ತ ಮಾಡಲಾಗುತ್ತಿದೆ.
ಕಾಡಿನಲ್ಲಿ ಗುರುವಾರ ಮುಂಜಾನೆ ಅಶೋಕ್ ಮೋತಿರಾಮ್ ಗವತೆ (52) ಹಾಗೂ ಮಾನಾ ಬಂಡುರಾಮ್ ಗವತೆ (42) ಇವರು ಮೇಳಘಾಟ್ ವ್ಯಾಘ್ರ ಪ್ರಕಲ್ಪದ ಪರಿಸರದಲ್ಲಿ ಹೋದಾಗ ಕರಡಿ ಅವರ ಮೇಲೆ ಹಲ್ಲೆ ಮಾಡಿದೆ. ಈ ಹಲ್ಲೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕರಡಿ ಒಬ್ಬನ ಮುಖವನ್ನು ಛಿನ್ನ ವಿಛಿನ್ನ ಮಾಡಿದೆ. ಇದರಿಂದ ತಾಯಿ ಕರಡಿ ತುಂಬಾ ರೋಷದಲ್ಲಿರಬಹುದು ಎನಿಸಿದೆ.

ಈ ಪ್ರಕರಣದಲ್ಲಿ ವನವಿಭಾಗವು ಘಟನೆಯಾದ ಜಾಗಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿ ಅಕೋಟ್ ವ್ಯಾಘ್ರ ಪ್ರಕಲ್ಪದಲ್ಲಿ ದೂರು ದಾಖಲಿಸಿದೆ. ಕರಡಿಯ ಮರಿಗಳ ಕೊಲೆ ಮಾಡಿ ಅವುಗಳ ಉಗುರುಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತೆ. ಇದೇ ಕಾರಣದಿಂದ ಕರಡಿ ಮರಿಗಳ ಹತ್ಯೆ ಮಾಡಲಾಗಿರಬಹುದೆಂದು ಸಂಶಯ ವ್ಯಕ್ತ ಮಾಡಿದ್ದಾರೆ.