ತನ್ನ ಮಹಿಳಾ ಸಿಬ್ಬಂದಿಯ ಖಾಸಗಿ ಅಂಗ ಸ್ಪರ್ಶಿಸಲು ಮುಂದಾದ ಫಿಲಿಪೈನ್ಸ್ ಅಧ್ಯಕ್ಷ: ವೈರಲ್ ಆಯ್ತು ವೀಡಿಯೋ

ಫಿಲಿಫೈನ್ಸ್ ನ ದೇಶದ ಅಧ್ಯಕ್ಷರಾಗಿರುವ ರೊಡ್ರಿಡೋ ದುತೆರ್ತೆ ಒಂದಲ್ಲ ಒಂದು ವಿ ವಾ ದಗಳಿಂದ ಸದಾ ಚರ್ಚೆಯಲ್ಲಿ ಇರುವುದು ಮಾತ್ರವೇ ಅಲ್ಲದೇ, ಸದಾ ಒಂದಲ್ಲಾ ಒಂದು ವಿಷಯದಿಂದಾಗಿ ಅವರು ಟೀಕೆಗಳನ್ನು ಎದುರಿಸುತ್ತಾರೆ. ಈಗ ಅವರ ಹೊಸ ವಿಡಿಯೋ ಬಂದು ವೈರಲಾಗಿದ್ದು, ಅದನ್ನು ನೋಡಿದ ಸಾರ್ವಜನಿಕರುಅಧ್ಯಕ್ಷರ ಕುರಿತಾಗಿ ತೀವ್ರವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ಅಧ್ಯಕ್ಷರ ಭವನ ಮಾತ್ರ ಈ ವೈರಲ್ ವೀಡಿಯೋದಲ್ಲಿ ಅಂತಹ ತಪ್ಪೇನೂ ಇಲ್ಲ ಎನ್ನುವ ಮೂಲಕ ತಿಪ್ಪೆಯನ್ನು ಸಾರಿಸುವ ಕೆಲಸವನ್ನು ಕೂ ಡಾ ಮಾಡಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ರೊಡ್ರಿಡೋ ದುತೆರ್ತೆ ತಮ್ಮ ಮನೆಯ ಮಹಿಳಾ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತನೆ ಮಾಡಿರುವ ಸಂಗತಿ ಬಹಿರಂಗವಾಗಿದೆ.‌ ದುತೆರ್ತೆ ಅವರು ಮಹಿಳಾ ಸಹಾಯಕಿಯ ಖಾಸಗಿ ಅಂಗವನ್ನು ಮುಟ್ಟುವ ಪ್ರಯತ್ನವನ್ನು ಮಾಡಿದ್ದಾರೆ.‌

ಈ ವಿಡಿಯೋದಲ್ಲಿ ಗಮನಿಸಿದಾಗ ಅವರ ಮನೆಯ ಮಹಿಳಾ ಸಹಾಯಕಿಯೊಬ್ಬರು 1 ಕಪ್ ಅಕ್ಕಿಯ ಆಮೇಲೆ ಒಂದು ಮೇಣದ ಬತ್ತಿಯನ್ನು ಹಿಡಿದುಕೊಂಡು ಅವರ ಬಳಿ ಬರುತ್ತಾಳೆ. ಆಕೆ ಅಲ್ಲಿಗೆ ಬಂದ ಕೆಲವು ಸೆಕೆಂಡುಗಳ ನಂತರ ದುತೆರ್ತೆ ಆ ಮಹಿಳಾ ಸಿಬ್ಬಂದಿ ಖಾಸಗಿ ಅಂಗವನ್ನು ಸ್ಪರ್ಶ ಮಾಡುವ ಪ್ರಯತ್ನ ಪಡುತ್ತಾರೆ. ಆದರೆ ಕೂಡಲೇ ಅವರ ಉದ್ದೇಶವನ್ನು ಅರಿತ ಆಕೆ ಹಿಂದಕ್ಕೆ ಸರಿಯುತ್ತಾರೆ. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆದ ನಂತರ ಜನರು ಸಾಕಷ್ಟು ಟೀಕೆಗಳನ್ನು ಮಾಡುವಾಗಲೇ, ಅಧ್ಯಕ್ಷರ ಭವನದ ಕಡೆಯಿಂದ ವಿಡಿಯೋ ಕುರಿತಾದ ಸ್ಪಷ್ಟನೆ ನೀಡುವ ಪ್ರತಿಕ್ರಿಯೆ ಹೊರ ಬಂದಿದೆ.

ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಭವನದ ವಕ್ತಾರರು ಆ ವೀಡಿಯೋದಲ್ಲಿ ಕಾಣುತ್ತಿರುವ ದೃಶ್ಯದ ಸಂದರ್ಭದಲ್ಲಿ ಅಧ್ಯಕ್ಷರು ತಮಾಷೆಯಿಂದ ಇರಲು ಅಥವಾ ಆಕೆಯೊಡನೆ ತಮಾಷೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಅಷ್ಟೇ, ಅದಕ್ಕೆ ಬದಲಾಗಿ ಅಲ್ಲಿ ಇನ್ನಾವುದೇ ಕೆಟ್ಟ ಆಲೋಚನೆ ಇರಲಿಲ್ಲ ಎಂದಿದ್ದಾರೆ. ಈ ಹಿಂದೆ ರೊಡ್ರಿಡೋ ದುತೆರ್ತೆ ದಕ್ಷಿಣ ಕೊರಿಯಾದಲ್ಲಿ ಭಾಷಣದ ಮಧ್ಯೆ ವಿದೇಶಿ ಫಿಲಿಪಿನೋ ಕಾರ್ಯಕರ್ತೆಯೊಬ್ಬರನ್ನು ತುಂಬಿಸಿ ಆಗಲೂ ದೊಡ್ಡಮಟ್ಟದ ಟೀಕೆಗೆ ಕಾರಣರಾಗಿದ್ದರು.
ಇವರು ತಾವು ನೀಡುವಂತಹ ಚಿತ್ರ-ವಿಚಿತ್ರ ಹೇಳಿಕೆಗಳಿಂದ ಆಗಾಗ ಮಾಧ್ಯಮಗಳ ಸುದ್ದಿಯಲ್ಲಿ ಮಂಚೂಣಿಯಲ್ಲಿ ಇರುತ್ತಾರೆ.

ಕಳೆದ ವರ್ಷ ಅವರು ನೀಡಿದ್ದ ಒಂದು ವಿವಾದಿತ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅವರು ಗಡಿಯಲ್ಲಿ ಕರ್ತವ್ಯ ನಿರತರಾಗಿರುವ ಉನ್ನತ ಮಟ್ಟದ ಅಧಿಕಾರಿಗಳು ಒಂದು ವೇಳೆ ಮಾ ದ ಕ ವಸ್ತುಗಳ ಸಾಗಾಣಿಕೆ ಮಾಡುತ್ತಿರುವವರನ್ನು ಕಂಡರೆ, ಅಂತಹವರನ್ನು ಕಂಡಲ್ಲೇ ಕ ಗುಂಡಿಟ್ಟು ಕೊ ಲ್ಲ ಬಹುದು ಎನ್ನುವ ಸಾರ್ವಜನಿಕ ಆದೇಶವನ್ನು ನೀಡಿದ್ದರು. ಅದು ಸಾಲದೆಂಬಂತೆ 2021ರಲ್ಲಿ ತಮ್ಮ ಮಗಳಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಸಲಹೆಯನ್ನು ನೀಡುತ್ತಾ ಅಧ್ಯಕ್ಷರ ಸ್ಥಾನ ಮಹಿಳೆಯರಿಗೆಲ್ಲ ಎನ್ನುವ ಮೂಲಕ ಮತ್ತೊಂದು ವಿ ವಾ ದವನ್ನು ಹುಟ್ಟು ಹಾಕಿದ್ದರು.

ವಿಡಿಯೋ ನೋಡಿ

ಕೊರೊನಾ ಸಮಯದಲ್ಲಿ ದೇಶದಲ್ಲಿ ಲಾಕ್ ಡೌನ್ ವಿಧಿಸಿದಾಗ, ಯಾರಾದರೂ ಲಾಕ್ ಡೌನ್ ನಿಯಮವನ್ನು ಮೀರಿ ಮನೆಯಿಂದ ಹೊರಗೆ ಬಂದರೆ ಅವರ ಮೇಲೆ ಗುಂಡು ಹಾರಿಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಮತ್ತೊಂದು ಸಂದರ್ಭದಲ್ಲಿ ಜನರು ಧರಿಸುವ ಮಾಸ್ಕ್ ಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎನ್ನುವ ವಿಚಾರದಲ್ಲಿ ಸಲಹೆಯನ್ನು ನೀಡುತ್ತಾ, ಜನರು ತಾವು ಧರಿಸುವ ಮಾಸಿಕಗಳನ್ನು ಪೆಟ್ರೋಲ್ ನಿಂದ ಶುದ್ಧಗೊಳಿಸಿ ಕೊಂಡು ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು.