ತನ್ನ ಮಾಲಿಕನನ್ನು ಕಂಡು ಕುಣಿದು ಕುಪ್ಪಳಿಸಿದ ಡಾಗ್ ಕೇರ್ ನಲ್ಲಿ ಇದ್ದ ನಾಯಿಮರಿ; ‘ಸೂಪರ್’ ಎಂದ ನೆಟ್ಟಿಗರು! ನೋಡಿ ಈ Video

ಪುಟ್ಟ ಮಕ್ಕಳಿಗೆ ಅವರ ತಂದೆ-ತಾಯಿ ಎಂದರೆ ಬಹಳ ಇಷ್ಟ. ಅದರಲ್ಲೂ ಮಕ್ಕಳನ್ನು ಶಾಲೆಗೋ, ಬೇಬಿ ಕೇರ್ ಗೋ ಸೇರಿಸಿದ ಮೇಲೆ ಶಾಲೆಯ ಅವಧಿ ಮುಗಿದ ಮೇಲೆ ಮಕ್ಕಳನ್ನು ಕರ್ಕೊಂಡು ಹೋಗೋದಿಕ್ಕೆ ಅಂತ ಅವರ ತಂದೆ ತಾಯಿ ಸ್ಕೂಲ್ ಹತ್ತಿರ ಬಂದ ತಕ್ಷಣ ಸಹಜವಾಗಿ ಮಕ್ಕಳಲ್ಲಿ ಒಂದು ಖುಷಿ ಅನ್ನೋದು ತುಂಬಿರುತ್ತೆ. ಕೆಲವು ಸಂದರ್ಭಗಳಲ್ಲಿ ಆ ಮಕ್ಕಳು ಖುಷಿಯಿಂದ ಕುಣಿದಾಡೋದನ್ನು ಕೂಡ ನಾವು ನೋಡಿರುತ್ತೇವೆ. ಇಂತಹದೇ ಒಂದು ಪ್ರೀತಿ, ಸಂತೋಷ, ವಾತ್ಸಲ್ಯಗಳು ಪ್ರಾಣಿಗಳಲ್ಲಿ ಕೂಡ ಇರುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ಪ್ರಾಣಿಗಳು ಕೂಡ ತಮ್ಮನ್ನು ಸಾಕಿದವರ ಮೇಲೆ ಬಹಳ ಪ್ರೀತಿಯನ್ನು ಇಟ್ಟುಕೊಂಡಿರುತ್ತವೆ ಹಾಗೂ ಅವುಗಳ ಮನಸ್ಸು ಕೂಡಾ ಮಕ್ಕಳ ಮನಸ್ಸಿನ ಹಾಗೆ ಇರುತ್ತೆ ಅಂದ್ರೆ ನಂಬೋಕೆ ಕಷ್ಟ, ಅಥವಾ ಹೀಗೆಲ್ಲಾ ಇರಬಹುದಾ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ.

ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ನಿಜಕ್ಕೂ ನಮಗೂ ಕೂಡ ಆಶ್ಚರ್ಯ ಆಗುತ್ತೆ. ಈ ವಿಡಿಯೋದ ವಿಶೇಷತೆ ಏನು ಅಂತೀರಾ, ಇದರಲ್ಲಿ ಒಂದು ನಾಯಿಮರಿಗೆ ತನ್ನನ್ನು ಸಾಕಿದವರ ಮೇಲೆ ಎಷ್ಟು ಪ್ರೀತಿ ಇದೆ ಮತ್ತು ಅವರು ಎದುರುಗಡೆ ಬಂದಾಗ ಅದಕ್ಕೆ ಎಷ್ಟು ಖುಷಿಯಾಗುತ್ತೆ ಅನ್ನೋದನ್ನ ಅದರ ವರ್ತನೆಯಲ್ಲಿ ನಾವು ನೋಡಬಹುದಾಗಿದೆ. ನಿಜವಾಗಲೂ ಈ ವಿಡಿಯೋ ನೋಡಿದಾಗ ನಮಗೆ ಒಂದು ಕ್ಷಣ ಆಶ್ಚರ್ಯ ಆಗುತ್ತೆ, ಒಂದು ನಾಯಿಮರಿ ತನ್ನನ್ನು ಸಾಕಿದವರ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಾ ಪ್ರಶ್ನೆ ಕೂಡ ಮೂಡುತ್ತೆ, ಹಾಗಾದ್ರೆ ಈ ವಿಡಿಯೋದಲ್ಲಿ ಆ ನಾಯಿ ಮರಿ ಮಾಡಿದ್ದಾದ್ರೂ ಏನೂ ಅಂತೀರಾ, ಹಾಗಿದ್ರೆ ಮುಂದೆ ಓದಿ ನೋಡಿ.

ವೈರಲ್ ಆಗಿರೋ ವಿಡಿಯೋದಲ್ಲಿ ನಾಯಿಮರಿಯ ಮಾಲೀಕರು ಅದನ್ನು ಒಂದು ಡಾಗ್ ಕೇರ್ ಸೆಂಟರ್ನಲ್ಲಿ ಬಿಟ್ಟು ಹೋಗಿದ್ದಾರೆ. ಅವರು ಮತ್ತೆ ಅದನ್ನು ಕರ್ಕೊಂಡು ಹೋಗೋದಿಕ್ಕೆ ಅಂತ ಬಂದಾಗ ಅವರು ಬಂದಿದ್ದನ್ನು ನೋಡಿ ನಾಯಿಮರಿಗೆ ಎಷ್ಟು ಖುಷಿಯಾಗಿದೆ ಅಂದರೆ ಅದು ತನ್ನ ಮಾಲೀಕರನ್ನು ನೋಡಿದ ತಕ್ಷಣ ಬಹಳ ಅಂದ್ರೆ ಬಹಳ ಸಂತೋಷದಿಂದ ಎದ್ದು ಕುಣಿಯೋದಿಕ್ಕೆ ಪ್ರಾರಂಭ ಮಾಡಿದೆ. ನಾಯಿಮರಿ ಸಂತಸದಿಂದ ಕುಣಿಯೋದನ್ನು ನಾವು ಈ ವಿಡಿಯೋದಲ್ಲಿ ನೋಡಿದಾಗ, ಒಂದು ಸಣ್ಣ ಮಗು ಎಷ್ಟು ಖುಷಿಯಿಂದ ಕುಣಿಯುತ್ತೋ, ಅದೇ ರೀತಿಯಾಗಿ ಈ ನಾಯಿ ಮರಿ ನಮಗೆ ಕಾಣುತ್ತೆ.

ನಾಯಿ ಮರಿಗೆ ನಿಜಕ್ಕೂ ತನ್ನ ಮಾಲಿಕರ ಮೇಲೆ ಇರುವಂತಹ ಅಪರಿಮಿತ ಎನಿಸೋ ಪ್ರೀತಿಯನ್ನು ಅದರ ಕುಣಿತವು ನಮಗೆ ತಿಳಿಸಿಬಿಡುತ್ತದೆ. ಬಹುಶಃ ನಿಸ್ವಾರ್ಥ ಹಾಗೂ ನಿರ್ಮಲವಾದ ಪ್ರೀತಿ ಅಂದ್ರೆ ಇದೇ ಇರಬಹುದು ಅನಿಸೋದು ಕೂಡಾ ಉಂಟು. ನಿಜಕ್ಕೂ ನಾಯಿಮರಿಯ ಈ ವರ್ತನೆಯ ಬಹಳ ಅಪರೂಪದ ವೀಡಿಯೋವನ್ನು ನೋಡಿದಾಗ ನಮಗೂ ಕೂಡಾ ಖುಷಿ ಎನಿಸುತ್ತೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿರುವ ಈ ವಿಡಿಯೋ ಈಗಾಗಲೇ 26 ಸಾವಿರಕ್ಕಿಂತ ಅಧಿಕ ಜನರಿಂದ ವೀಕ್ಷಿಸಲ್ಪಟ್ಟಿದೆ, ಸುಮಾರು 2200 ಜನಕ್ಕಿಂತ ಅಧಿಕ ಮಂದಿ ಈ ವಿಡಿಯೋಗೆ ಲೈಕ್ ನೀಡಿದ್ರೆ, 200 ಕ್ಕೂ ಅಧಿಕ ಮಂದಿ ಇದನ್ನು ರೀಟ್ವೀಟ್ ಕೂಡಾ ಮಾಡಿದ್ದಾರೆ.

ವಿಡಿಯೋ ನೋಡಿ

ವಿಡಿಯೋ ನೋಡಿದ ಅನೇಕ ಮಂದಿ ಅದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು ಇದನ್ನು ನೋಡಿ, ನಿಜವಾದ ಪ್ರೀತಿ ಮತ್ತು ನಿಷ್ಠೆ ಎಂದರೆ ಇದೆ ಎಂದಿದ್ದಾರೆ. ಇನ್ನೊಬ್ಬರು ಟ್ವೀಟ್ ಮಾಡಿ ಇದೊಂದು ಡ್ಯಾನ್ಸರ್ ಡಾಗ್ ಎಂದು ನಾಯಿ ಮರಿಯನ್ನು ಹೊಗಳಿದ್ದಾರೆ, ಮತ್ತೊಬ್ಬರು ನಾಯಿ ಮರಿಯ ಈ ಮುದ್ದಾದ ಆಡ ನೋಡಿದರೆ ಸಣ್ಣ ಮಕ್ಕಳು ನೆನಪಾಗುತ್ತಾರೆ ಎಂದಿದ್ದಾರೆ. ಇನ್ನೊಬ್ಬರು ಈ ವಿಡಿಯೋ ನೋಡಿದಾಗ ಸರ್ಕಸ್ ನಲ್ಲಿ ನಾಯಿಗಳು ಡ್ಯಾನ್ಸ್ ಮಾಡುತ್ತಿದ್ದ ದಿನಗಳು ನೆನಪಾದವು ಎಂದಿದ್ದಾರೆ. ಒಟ್ಟಾರೆ ನಾಯಿ ಮರಿಯ ಮುದ್ದಾದ ವಿಡಿಯೋ ಬಹಳಷ್ಟು ಜನರ ಮೆಚ್ಚುಗೆ ಪಡೆದಿದೆ.