ತನ್ನ ಮುಂದೆ ನಿಂತು ಸಂತಸದಿಂದ ಡ್ಯಾನ್ಸ್ ಮಾಡುತ್ತಿದ್ದ ಶ್ರೀಮಂತ ಮಗುವನ್ನು ನೋಡಿ ಈ ಬಡ ಮಗು ಮಾಡಿದ್ದೇನು? ನೋಡಿ ಅದ್ಭುತವಾದ ವಿಡಿಯೋ!!!!

ಮಕ್ಕಳ ಮನಸ್ಸು ದೇವರ ಮನೆ ಇದ್ದ ಹಾಗೆ. ಅವರ ಮನದಲ್ಲಿ ಯಾವುದೇ ರೀತಿಯ ಅಸೂಯೆ ಇರುವದಿಲ್ಲ. ನಿಷ್ಕಲ್ಮಶ ಭರಿತ ಮನಸ್ಸು ಮಕ್ಕಳಾದಾಗಿರುತ್ತೆ. ಚಿಕ್ಕವರಿದ್ದಾಗ ನಾವು ಯಾವುದೇ ವಿಚಾರ ಮಾಡದೆ ಏನನ್ನು ಅರಿಯದೆ ಪ್ರತಿಯೊಬ್ಬರ ಜೊತೆಗೂಡಿ ಆಟ ಆಡುತ್ತೇವೆ. ಆದರೆ ಅದೇ ವಯಸ್ಸು ಹೆಚ್ಚುತ್ತಾ ಹೋದಂತೆ ತಿಳುವಳಿಕೆ ಬರುತ್ತಿದ್ದ ಹಾಗೆ ಮನದಲ್ಲಿ ಕಲಹದ ವಾತಾವರಣ ನಿರ್ಮಾಣ ವಾಗುತ್ತೆ, ನಮ್ಮ ಮನೆ, ನಮ್ಮ ಕುಟುಂಬ, ನಮ್ಮ ಸಮಾಜ ಅನ್ನೋ ಭಾವನೆ ನಿರ್ಮಾಣವಾಗುತ್ತಿದ್ದ ಹಾಗೆ ಅದರ ಜೊತೆಗೆ ಅಸೂಯೆ ಸಹ ನಿರ್ಮಾಣವಾಗುತ್ತದೆ ಅಲ್ಲದೆ ಮೇಲು ಕೀಳೆಂಬ ಭಾವನೆಯು ಸಹ ಉಂಟಾಗುತ್ತದೆ. ಆದರೆ ಮಕ್ಕಳು ಶ್ರೀಮಂತ ಬಡವ ಎಂಬ ಬೇಧಭಾವ ಅರಿಯದೆ ಒಬ್ಬರಿಗೊಬ್ಬರು ಸಂತೋಷದಿಂದ ಆಟ ಆಡುತ್ತಾರೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಇಬ್ಬರು ಮಕ್ಕಳು ಒಬ್ಬರಿಗೊಬ್ಬರು ಅಪ್ಪಿಕೊಂಡು ಪರಸ್ಪರ ಸ್ನೇಹ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ. ಈ ವೀಡಿಯೋದಲ್ಲಿ ನೀವು ನೋಡಬಹುದು ಯಾವುದೋ ಒಂದು ಜಾತ್ರೆಯ ಸಮಯದಲ್ಲಿ ಅಲ್ಲಲ್ಲಿ ಆಟ ಆಡುವ ಆಟಿಕೆಗಳನ್ನು ಇದ್ದಿರುತ್ತವೆ. ಒಂದು ಶ್ರೀಮಂತ ಕುಟುಂಬ ಸದಸ್ಯರು ಅಂದರೆ ದಂಪತಿಗಳು ಹಾಗೂ ಅವರ ಚಿಕ್ಕ ಮಗು ಎಲ್ಲರೂ ಕೂಡಿಕೊಂಡು ಜಾತ್ರೆಯನ್ನು ನೋಡುತ್ತಿರುತ್ತಾರೆ ಅಷ್ಟರಲ್ಲಿ ಆ ಮಗುವಿಗೆ ಮತ್ತೊಂದು ಚಿಕ್ಕ ಮಗು ಕಾಣುತ್ತದೆ ಆಗ ಈ ಶ್ರೀಮಂತ ಮಗು ನೋಡಿ ತುಂಬಾ ಸಂತೋಷಪಟ್ಟು ಕುಣಿಯುತ್ತಿರುತ್ತದೆ ಇದನ್ನು ಕಂಡು ಮುಂದೆ ನಿಂತ ಮಗು ಹೋಗಿ ಆತನನ್ನು ಜೋರಾಗಿ ಅಪ್ಪಿಕೊಂಡು ಸ್ನೇಹ ಭಾವನೆ ವ್ಯಕ್ತ ಪಡಿಸುತ್ತದೆ. ಇದನ್ನು ನೋಡಿದ ದಂಪತಿಗಳು ಆಶ್ಚರ್ಯ ಗೊಳ್ಳುತ್ತಾರೆ ಏಕೆಂದರೆ ಆ ಮಗು ಒಂದು ಬಡ ಮಗುವಾಗಿತ್ತು ಅಂದರೆ ಜಾತ್ರೆಯಲ್ಲಿ ಬಲೂನ್ ಮಾರುವ ಕುಟುಂಬದ ಮಗು ಅದಾಗಿತ್ತು. ಮಕ್ಕಳು ಒಬ್ಬರಿಗೊಬ್ಬರು ಅಪ್ಪಿಕೊಂಡ ದೃಶ್ಯ ನೋಡಿದರೆ ಇವರು ಮೊದಲಿನಿಂದಲೂ ಏನೋ ಸ್ನೇಹಿತರು ಇದ್ದಾರೆ ಅನ್ನೋತರ ಭಾಸವಾಗುತ್ತದೆ.

ವಿಡಿಯೋ ನೋಡಿ

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ mahi_choudhary_50k ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಬಹಳಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ ಸಹ ಮಾಡಿದ್ದಾರೆ.