ತನ್ನ ಸೈಕಲ್ ಕಳ್ಳತನವಾಗಬಾರದೆಂದು ‘ಎಲ್ಲಿಲ್ಲದ’ ಐಡಿಯಾ ಮಾಡಿದ ಜಪಾನಿ ವ್ಯಕ್ತಿ! ನೀವು ಅಚ್ಚರಿ ಪಡೋದು ಗ್ಯಾರಂಟಿ!

ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವಸ್ತುಗಳನ್ನು ಬಿಟ್ಟು ಹೋದಾಗ ಮರಳಿ ಬರುವವರೆಗೂ ನಮ್ಮ ಮನಸ್ಸು ಕಳವಳದಲ್ಲಿರುತ್ತೆ. ಯಕಚ್ಚಿತ್ ಮಂದಿರದ ಹೊರಗಡೆ ಚಪ್ಪಲಿಗಳನ್ನು ಬಿಟ್ಟು ಒಳಗೆ ದೇವರ ದರ್ಶನಕ್ಕೆ ಹೋಗಿ ಬರುವಷ್ಟರಲ್ಲಿಯೇ ಚಪ್ಪಲಿಗಳು ಎಷ್ಟೋ ಸಲ ಮಂಗಮಾಯವಾಗುತ್ತವೆ. ಇನ್ನು ಸೈಕಲ್ ಗಳಂತಹ ದೊಡ್ಡ ಮತ್ತು ತುಂಬಾ ಉಪಯೋಗಕ್ಕೆ ಬರುವ ವಸ್ತುಗಳನ್ನು ಕೇಳಬೇಕೆ.

ಸೂರ್ಯ ಉದಯಿಸುವ ನಾಡು ಎಂದೇ ಪರಿಚಿತವಾದ ಜಪಾನ್ ದೇಶದಲ್ಲಿ ಜನರು ಸೈಕಲ್ ಗಳ ಉಪಯೋಗ ತುಂಬಾ ಮಾಡುತ್ತಾರೆ. ಇದೇ ಕಾರಣದಿಂದ ಈ ದೇಶದಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಸೈಕಲ್ ಕಳ್ಳತನವಾಗುತ್ತವೆ. ಹಿಂದಿನ ವರ್ಷ ಒಟ್ಟು 35,395 ಸೈಕಲ್ ಗಳು ಕಳ್ಳತನವಾಗಿದ್ದವು. ಇವುಗಳಲ್ಲಿ 42 ಪ್ರತಿಶತ ಸೈಕಲ್ ಗಳು ಸರಿಯಾಗಿ ಲಾಕ್ ಅಳವಡಿಸಲಾಗಿದ್ದರೂ ಕಳ್ಳತನವಾಗಿದ್ದವು.

ನಮಗೆ ಪ್ರಿಯವಾದ ಮತ್ತು ತುಂಬಾ ಅವಶ್ಯಕೆತೆಯಿರುವ ವಸ್ತುಗಳನ್ನು ಕಳೆದುಕೊಳ್ಳುವದು ಯಾರಿಗೂ ಇಷ್ಟವಿರುವದಿಲ್ಲ. ಬದಲಾಗಿ ಆ ವಸ್ತುಗಳ ಸಂರಕ್ಷಣೆಯ ಬಗ್ಗೆ ತುಂಬಾ ಜಾಗರೂಕವಾಗಿರುತ್ತೇವೆ. ಹಾಗೆಯೇ ಜಪಾನಿನ ಈ ವ್ಯಕ್ತಿಯೊಬ್ಬ ತನ್ನ ಸೈಕಲ್ ಕಳ್ಳತನವಾಗದೆ ಕಳ್ಳರಿಂದ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಸೈಕಲ್ ಸೀಟಿನ ಮೇಲೆ ಪಕ್ಷಿಯ ಮಲದ ಸ್ಪೀಕರ್ ನ್ನು ಅಂಟಿಸಿದ್ದಾನೆ.

ಜಪಾನಿನ ಪತ್ರಿಕೆಯಾದ ಯುನಿಲ್ಯಾಡ್ ನೀಡಿದ ವರದಿಯ ಪ್ರಕಾರ ಮೋಟೋಕಿ ರೋಗಾ ಹೆಸರಿನ 30 ವರ್ಷದ ವ್ಯಕ್ತಿ ತನ್ನ ಸೈಕಲ್ ಕಳವು ಆಗಬಾರದೆಂದು ಈ ವಿನೂತನ ಐಡಿಯಾವನ್ನು ಕಂಡು ಹಿಡಿದ.

ಸೈಕಲ್ ಸೀಟ್ ಮೇಲೆ ಪಕ್ಷಿಯ ಮಲದ ರೀತಿಯ ಸ್ಪೀಕರ್ ಇರುವದರಿಂದ ತನ್ನ ಸೈಕಲ್ ಕಳ್ಳತನವಾಗುವದಿಲ್ಲವೆಂಬ ಭರವಸೆ ಈತನಿಗಿತ್ತು. ಆದ್ದರಿಂದ ಈ ಐಡಿಯಾ ವರ್ಕಔಟ್ ಆಯಿತು ಎಂದು ಹೇಳುತ್ತಾನೆ. ಸ್ಪೀಕರ್ ಇದು ಆತನ ಅಭ್ಯಾಸದ ಒಂದು ಭಾಗವಾಗಿತ್ತು. ಕಾರಣ ಅನೇಕ ಮೋಟಾರ್ ಸೈಕಲ್ ಗಳ ಮೇಲೆ ಈ ಐಡಿಯಾ ಒಳ್ಳೆಯ ಕೆಲಸ ಕೊಟ್ಟಿದ್ದರಿಂದ ಈ ಪ್ರಯೋಗವನ್ನು ತನ್ನ ಸೈಕಲ್ ಮೇಲೆ ಮಾಡಿದ. ಇದು ತುಂಬಾ ಪರಿಣಾಮಕಾರಕವಾಯಿತು.

ಈತನ ಈ ಐಡಿಯಾ ಸಫಲವಾಯಿತು ಎಂದು ತಿಳಿದಾಗ ಆತ ಸಾಮಾಜಿಕ ಕಾರ್ಯಕ್ಕಾಗಿ ನಾಗರಿಕರ ಮಾಧ್ಯಮದಿಂದ 200,000 ಜಪಾನಿ ಯೆನ್ ಸಹಿತ ಕಲೆಹಾಕುವ ಉದ್ದೇಶವಿಟ್ಟನು. ಜನರು ತುಂಬು ಮನಸ್ಸಿನಿಂದ ಇದಕ್ಕೆ ಬೆಂಬಲ ಸೂಚಿಸಿದರು. ಹೀಗಾಗಿ ಜನರಿಂದ ಈ ಸಮಾಜ ಕಾರ್ಯಕ್ಕೆ 450,000 ಇಷ್ಟೋಂದು ಜಪಾನಿ ಯೆನ್ ಕಲೆಕ್ಟ್ ಆಯಿತು. ಈ ಬಗ್ಗೆ ಮೋಟೋಕಿ ರೋಗಾ ಭಾವುಕರಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾರೆ. ಈ ಹಣದಿಂದ ಸಾಮಾಜಿಕ ಕಾರ್ಯಕ್ಕೆ ದೊಡ್ಡ ಸಹಕಾರ, ಆಧಾರ ಮತ್ತು ಲಾಭವಾಗುವದು ಎಂದು ಹೇಳುತ್ತಾನೆ.