ತನ್ನ ಹವ್ಯಾಸವನ್ನೇ ತನ್ನ ಉದ್ದಿಮೆ ಮಾಡಿಕೊಂಡ ಯುವತಿ ಇಂದು 7000 ಕೋಟಿ ರೂಗಳ ಒಡತಿ!
ಜೀವನದಲ್ಲಿ ಎಷ್ಟು ಜನರು ತಮ್ಮ ಹವ್ಯಾಸವನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿದೆ. ಈ ಪ್ರಶ್ನೆ ಬಂದರೆ ಉತ್ತರ ಸಹಜವಾಗಿಯೇ ಬಹಳ ಕಡಿಮೆ ಎಂದೇ ನಾವು ಹೇಳಬಹುದು. ಆರಂಭದಲ್ಲಿ ಪಾಯಲ್ ಕಡಕಿಯಾ ಕೂಡಾ ಎಲ್ಲರಂತೆ ಒಂದು ಕಾರ್ಪೊರೇಟ್ ಜಗತ್ತಿನಲ್ಲೇ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಆಸೆಯನ್ನು ಹೊಂದಿದ್ದರು. ಆದರೆ ಅವರ ಅದೃಷ್ಟ ಅವರನ್ನು ಬೇರೆಲ್ಲಿಗೂ ಕರೆದುಕೊಂಡು ಹೋಗುವ ಯೋಜನೆಯೊಂದನ್ನು ಅದಾಗಲೇ ಸಿದ್ಧಪಡಿಸಿತ್ತು. ಮೂರು ವರ್ಷದ ಪುಟ್ಟ ಬಾಲಕಿಯಾಗಿದ್ದಾಗಲೇ ಪಾಯಲ್ ಭಾರತೀಯ ಹಾಡುಗಳಿಗೆ ಹೆಜ್ಜೆಗಳನ್ನು ಹಾಕಿ ಕುಣಿಯುವ ಆಸಕ್ತಿಯನ್ನು ತೋರಿಸುತ್ತಿದ್ದರು. ಅದು ಆಕೆಯ ಮನಸ್ಸಿಗೆ ಇಷ್ಟವಾದ ಹವ್ಯಾಸ ಕೂಡಾ ಆಗಿತ್ತು. ಇಂತಹ ಆಸಕ್ತಿಯನ್ನು ಉಳ್ಳಂತಹ ಪಾಯಲ್ ಹೇಗೆ ತನ್ನದೇ ಆದ ಉದ್ಯಮವನ್ನು ಹೇಗೆ ಸ್ಥಾಪಿಸಿದರು ಹಾಗೂ ಕೋಟಿಗಳ ಉದ್ದಿಮೆಯನ್ನು ನಿಲ್ಲಿಸಿದರೆಂದು ತಿಳಿಯೋಣ ಬನ್ನಿ.
ಪಾಯಲ್ ಅವರ ಪೋಷಕರಿಬ್ಬರೂ ಕೂಡಾ ಕೆಮಿಸ್ಟ್ ಗಳಾಗಿದ್ದಾರೆ. ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಳ್ಳುವ ಆಸಕ್ತಿಯಿಂದ ಅವರು ಭಾರತದಿಂದ ಅಮೆರಿಕಾಕ್ಕೆ ತೆರಳಿದರು. ಪಾಯಲ್ ಅವರಿಗೆ ಬಾಲ್ಯದಿಂದಲೇ ಬಾಲಿವುಡ್ ಹಾಡುಗಳಿಗೆ ನೃತ್ಯವನ್ನು ಮಾಡುವುದು ಬಹಳ ಇಷ್ಟ ಪಡುತ್ತಿದ್ದರು. ಪಾಯಲ್ ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅರ್ಥಶಾಸ್ತ್ರ ಮತ್ತು ಆಪರೇಷನ್ ರೀಸರ್ಚ್ ನಲ್ಲಿ ಪದವಿಯನ್ನು ಪಡೆದುಕೊಂಡರು. ಉತ್ತಮವಾದ ಪದವಿಯೊಂದನ್ನು ಪಡೆದ ಆಕೆ ಒಂದು ಸಲಹಾ ಸಂಸ್ಥೆಯಲ್ಲಿ ಉದ್ಯೋಗವನ್ನು ಕೂಡಾ ಪಡೆದುಕೊಂಡರು. ಉದ್ಯೋಗದ ಜೊತೆಗೆ ಅವರ ಡಾನ್ಸ್ ನ ಆಸಕ್ತಿಯು ಕೂಡಾ ಮುಂದುವರೆದಿತ್ತು. ಆ ಆಸಕ್ತಿಯ ಗೀಳಿಗೆ ರೂಪ ನೀಡುವ ಸಲುವಾಗಿಯೇ ಪಾಯಲ್ ಸೌತ್ ಏಷಿಯನ್ ಡಾನ್ಸ್ ಕಂಪನಿಯನ್ನು ತೆರೆದರು.
ಒಂದು ದಿನ ಪಾಯಲ್ ಆನ್ಲೈನ್ ಡಾನ್ಸ್ ಕ್ಲಾಸ್ ಅನ್ನು ನೋಡುವುದಕ್ಕಾಗಿ ಸರ್ಫಿಂಗನ್ನು ಮಾಡುತ್ತಿದ್ದರು. ಆಕೆ ಸುಮಾರು ಒಂದು ಗಂಟೆಯ ಕಾಲ ಸರ್ಚ್ ಮಾಡಿದ ನಂತರ ಕೂಡಾ ನಿರಾಶೆಯೇ ಎದುರಾಯಿತು. ಏಕೆಂದರೆ ಅಷ್ಟು ಸಮಯ ಕಳೆದರೂ ಕೂಡಾ ಅರ್ಧಂಬರ್ಧ ಮಾಹಿತಿ ಆಕೆಗೆ ದೊರೆತಿತ್ತು. ಆದರೆ ಈ ನಿರಾಶೆಯೇ ಆಕೆಗೆ ಒಂದು ಸ್ಟಾರ್ಟ್ ಅಪ್ ಉದ್ಯಮವನ್ನು ಸ್ಥಾಪನೆ ಮಾಡಲು ಪ್ರೇರಣೆಯನ್ನು ನೀಡಿತ್ತು. ಪಾಯಲ್ 2010 ರಲ್ಲಿ ಕ್ಲಾಸಿವಿಟಿಯನ್ನು ಆರಂಭಿಸಿ ಅದರ ಮೂಲಕ ನೃತ್ಯ ಮತ್ತು ಫಿಟ್ನೆಸ್ ಕುರಿತಾಗಿ ಮಾಹಿತಿಯನ್ನು ನೀಡುತ್ತಿದ್ದರು. ಅವರ ಈ ಕಾರ್ಯಕ್ಕೆ ಬಹಳಷ್ಟು ಪೇಜ್ ವೀವ್ಸ್ ಏನೋ ದಕ್ಕಿತಾದರೂ, ಯಾರೂ ಬುಕ್ಕಿಂಗ್ ಮಾಡಿಸದ ಕಾರಣ ಅವರ ಸ್ಟಾರ್ಟ್ ಅಪ್ ಆರಂಭವಾಗಲಿಲ್ಲ.

ಪಾಯಲ್ ಹಿನ್ನಡೆಯನ್ನು ಇಡಲಿಲ್ಲ. 2012 ರಲ್ಲಿ ಅವರು ಪಾಸ್ಪೋರ್ಟ್ ಎನ್ನುವ ಹೊಸ ಕಾನ್ಸೆಪ್ಟ್ ನೊಂದಿಗೆ ಮತ್ತೊಮ್ಮೆ ಬಂದರು. ಈ ಬಾರಿ ಹೊಸ ಸ್ಟುಡಿಯೋ ತರಗತಿಯಲ್ಲಿ ಹತ್ತು ಅವಕಾಶಗಳನ್ನು ಕೂಡಾ ಮಾಡಿಕೊಟ್ಟರು. ಆದರೆ ಈ ಬಾರಿ ಕೂಡಾ ಅವರ ಪ್ರಯತ್ನ ವಿಫಲವಾಯಿತು. ಆದರೆ ಇದು ಕೂಡಾ ಪಾಯಲ್ ಅವರ ಆತ್ಮವಿಶ್ವಾಸಕ್ಕೆ ಧ ಕ್ಕೆ ಆಗಲಿಲ್ಲ. ಏಕೆಂದರೆ ಆಕೆ ಆ ವೇಳೆಗೆ ಜನರ ಅಗತ್ಯತೆಗಳು ಹಾಗೂ ಅವರ ನ್ಯೂನ್ಯತೆಗಳ ಬಗ್ಗೆ ಬಹಳ ಸ್ಪಷ್ಟವಾಗಿ ಅರಿತುಕೊಂಡಿದ್ದರು. 2013 ರಲ್ಲಿ ಅವರು ಕ್ಲಾಸ್ ಪಾಸ್ ಎನ್ನುವ ಹೊಸ ಕಂಪನಿಯನ್ನು ಆರಂಭ ಮಾಡಿದರು. ಕ್ಲಾಸ್ ಪ್ಲಸ್ ಒಂದು ಮೆಂಬರ್ ಶಿಪ್ ಕಾರ್ಯಕ್ರಮ ಆಗಿತ್ತು. ಇದರ ಮೂಲಕ ಜಗತ್ತಿನ ಬಹುತೇಕ ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲಿನ ಇದರ ಫಿಟ್ನೆಸ್ ಸೆಂಟರ್ ಗಳಿಗೆ ಹೋಗಿ ಜಿಮ್, ಸ್ಟುಡಿಯೋ ಮತ್ತು ವರ್ಕ್ ಔಟ್ ಆನಂದವನ್ನು ಸವಿಯುವ ಅವಕಾಶ ನೀಡಲಾಯಿತು. ಇದಕ್ಕಾಗಿ ಶುಲ್ಕ 99 ಡಾಲರ್ ಗಳಾಗಿತ್ತು.
ತನ್ನ ಕ್ಲಾಸ್ ಪಾಸ್ ಗೆ ಹೆಚ್ಚಿನ ಸಮಯ ನೀಡಲು ಪಾಯಲ್ ತಮ್ಮ ಉದ್ಯೋಗವನ್ನು ತೊರೆದರು. ಅಲ್ಲದೇ 170 ಜನರ ತಂಡದೊಂದಿಗೆ ಅವರು ಜನರಿಗೆ ತಮ್ಮ ಗುಣಮಟ್ಟವನ್ನು ಹೆಚ್ಚಿಸುವ ವಿಷಯಗಳಲ್ಲಿ ಗಮನ ನೀಡಬೇಕೆಂಬ ಪ್ರೇರಣೆಯನ್ನು ನೀಡುತ್ತಿದ್ದಾರೆ.
ಕ್ಲಾಸ್ ಪಾಸ್ ನ ಐಡಿಯಾ ಬಹಳ ದೊಡ್ಡ ಯಶಸ್ಸನ್ನು ಕಂಡಿತು. ಇದರ ಬಗ್ಗೆ ಸುದ್ದಿಯು ನ್ಯೂಯಾರ್ಕ್ ಟೈಮ್ಸ್ ನ ಆರ್ಟ್ಸ್ ಸೆಕ್ಷನ್ ನ ಮೊದಲ ಪುಟದಲ್ಲಿ ಪ್ರಕಟಣೆ ಆಗುವಷ್ಟು ಮಟ್ಟಕ್ಕೆ ಬೆಳೆಯಿತು. ಆದರೆ ಆ ವೇಳೆಗೆ ಇನ್ನೂ ಕಂಪನಿಯ ವೆಬ್ಸೈಟ್ ಆರಂಭವಾಗಿರಲಿಲ್ಲ. ನವೆಂಬರ್ 2015 ನಲ್ಲಿ ಗೂಗಲ್ ವೆಂಚರ್ಸ್ ಇವರಿಗೆ 30 ಮಿಲಿಯನ್ ಡಾಲರ್ ಗಳು ಹಾಗೂ ಬೇರೆ ಮೂಲಗಳು 50 ಮಿಲಿಯನ್ ಡಾಲರ್ ಗಳ ಫಂಡ್ ದೊರೆಯಿತು.
ಕ್ಲಾಸ್ ಪ್ಲಸ್ ನಲ್ಲಿ ಸಾವಿರಕ್ಕಿಂತ ಅಧಿಕ ಕ್ಲಾಸ್ ಲಿಸ್ಟ್ ಇದೆ. ವಿಶ್ವದ ನಾಲ್ಕು ರಾಷ್ಟ್ರಗಳಲ್ಲಿ ಇದು ತನ್ನ 34 ಸಂಸ್ಥೆಗಳನ್ನು ಹೊಂದಿದೆ. ಆದ್ದರಿಂದಲೇ ಅದರ ಮೆಂಬರ್ ಶಿಪ್ ಶುಲ್ಕ 199 ಡಾಲರ್ ಗಳಿಗೆ ಏರಿಕೆಯಾಗಿದ್ದು ಹೊಸ ಸದಸ್ಯರು 200 ಡಾಲರ್ ಗಳನ್ನು ನೀಡಿ ಮೆಂಬರ್ ಶಿಪ್ ಪಡೆಯಬೇಕು. ಕಳೆದ ವರ್ಷ ಈ ಆ್ಯಪ್ ಬಳಸುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ವಿವಿಧ ಸ್ತರಗಳಿಂದ ಕಂಪನಿಯು 550 ಮಿಲಿಯನ್ ಡಾಲರ್ ಗಳ ಫಂಡಿಂಗ್ ಅನ್ನು ಪಡೆದುಕೊಂಡಿದೆ. ಪ್ರಸ್ತುತ ಕಂಪನಿಯ ವ್ಯಾಲ್ಯುಯೇಷನ್ ಒಂದು ಬಿಲಿಯನ್ ಡಾಲರ್ ಅನ್ನು ದಾಟಿದೆ. ಪಾಯಲ್ ಇಂದು ತಮ್ಮ ಉದ್ದಿಮೆ ಅಭಿವೃದ್ದಿ ಹೊಂದುತ್ತಿರುವುದನ್ನು ನೋಡಿ ಸಂತುಷ್ಟರಾಗಿದ್ದಾರೆ.
ಪಾಯಲ್ ಅವರ ಯಶಸ್ಸು ಒಂದು ಸ್ಪೂರ್ತಿಯಾಗಿದೆ. ವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿದ ಅವರು ಇಟ್ಟ ಅಡಿಗಳು ಅವರನ್ನು ಯಶಸ್ಸಿನತ್ತ ನಡೆಸಿದ್ದು, ಪಾಯಲ್ ಅವರು ಇಂದು ವಿಶ್ವದ ಯಶಸ್ವಿ ಉದ್ಯಮಿ ಮಹಿಳೆಯರಲ್ಲಿ ಒಬ್ಬರಾಗಿದ್ದು ಅನೇಕ ಮಹಿಳೆಯರಿಗೆ ಅವರು ಸ್ಪೂರ್ತಿಯಾಗಿದ್ದಾರೆ.