ತನ್ನ ಹೊಲದಲ್ಲೇ ಸುಂದರ ದ್ವೀಪ ನಿರ್ಮಿಸಿದ 10 ತರಗತಿ ಓದಿದ ಮಹಿಳೆ; ಸಾಧನೆ ನೋಡಿ ಬೆರಗಾದ ಗೂಗಲ್! ನೋಡಿ Photos
ಏನಾದರೂ ಸಾಧಿಸಬೇಕೆಂಬ ಮನಸ್ಸಿದ್ದರೆ ಮಾರ್ಗ ಎನ್ನುವುದು ತಂತಾನೇ ಗೋಚರಿಸುವುದು. ಇಂತಹ ಒಂದು ಸ್ಪೂರ್ತಿಯನ್ನು ನೀಡುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಕನೋಜ್ ನಲ್ಲಿ 10ನೇ ತರಗತಿ ಓದಿರುವ ಮಹಿಳೆಯೊಬ್ಬರು ಮಾಡಿರುವ ಕೆಲಸ ಈಗ ಇಡೀ ದೇಶ ಆಕೆಯ ಕಡೆ ನೋಡುವಂತೆ ಮಾಡಿದೆ. ಈ ಮಹಿಳೆ ತನ್ನ ಜಮೀನಿನಲ್ಲಿ ನೀರು ತುಂಬಿಕೊಳ್ಳುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಮಹಿಳೆ ಕಡೆಗೆ ಅದೇ ಸಮಸ್ಯೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಂಡು ಯಾರೂ ಊಹೆ ಕೂಡಾ ಮಾಡಲಾಗದಂತಹ ಒಂದು ವಿಸ್ಮಯ ಎನಿಸುವ ಕಾರ್ಯವನ್ನು ಮಾಡಿದ್ದು, ಆಕೆಯ ಈ ಕಾರ್ಯ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದೆ.

ಮಹಿಳೆ ತನ್ನ ನೀರು ತುಂಬಿಕೊಳ್ಳುವ ತನ್ನ ಹೊಲದಲ್ಲಿ ಒಂದು ಸಣ್ಣ ದ್ವೀಪವನ್ನೇ ನಿರ್ಮಾಣ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾಳೆ. ಮಹಿಳೆ ಸೃಷ್ಟಿಸಿರುವ ಈ ವಿಸ್ಮಯ ದ್ವೀಪವನ್ನು ನೋಡಲು ದೂರ ದೂರಗಳಿಂದ ಜನರು ಬರುತ್ತಿದ್ದಾರೆ. ಇದೊಂದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಮಾರ್ಪಾಟಾಗಿದೆ. ಅಲ್ಲದೆ ದ್ವೀಪವನ್ನು ನೋಡಿದ ಜನ ಬಹಳಆಶ್ಚರ್ಯ ಪಡುತ್ತಿದ್ದಾರೆ ಮತ್ತು ಈ ದಿಟ್ಟ ಮಹಿಳೆಯ ಈ ಕಾರ್ಯವನ್ನು ಮೆಚ್ಚುತ್ತಿದ್ದಾರೆ. ಗೂಗಲ್ ಕೂಡ ಈ ಮಹಿಳೆಯ ಸಾಧನೆಯನ್ನು ಮೆಚ್ಚಿ ಆಕೆಗೆ ಬಂದು ಮೆಚ್ಚುಗೆಯ ಪತ್ರವನ್ನು ನೀಡಿ ಆಕೆಯನ್ನು ಗೌರವಿಸುವ ಮೂಲಕ ಪ್ರೋತ್ಸಾಹವನ್ನು ಕೂಡಾ ನೀಡಿದೆ.

ಕನೌಜ್ ನ ತೀವ್ವಾ ತಹಸೀಲ್ ಪ್ರದೇಶದ ಬತುಯಿಯಾ ಗ್ರಾಮದ ನಿವಾಸಿಯಾಗಿರುವ ಕಿರಣ್ ಕುಮಾರಿ ರಜಪತ್ ಅವರಿಗೆ ಉಮರ್ದಾ ಬ್ಲಾಕ್ ನ ಗುಂಧಹ ದಲ್ಲಿ ವಿಶಾಲವಾದ ಜಮೀನು ಇದ್ದು, ಇದರಲ್ಲಿ ಬಹುತೇಕ ಭಾಗ ಜಲಾವೃತವಾಗಿದೆ. ಆದ್ದರಿಂದ ಈ ಜಮೀನಿನಲ್ಲಿ ಕೃಷಿ ಮಾಡುವುದು ಬಹಳ ಕಠಿಣವಾದ ಕೆಲಸವಾಗಿತ್ತು. ಆಗ ಕಿರಣ್ ಕುಮಾರಿ ರಜಪೂತ್ ಅವರ ಮನಸ್ಸಿನಲ್ಲಿ ಒಂದ ಆಲೋಚನೆ ಏನೆಂದರೆ ಜಲಾವೃತವಾಗಿರುವ ಜಮೀನಿನ ಭಾಗವನ್ನು ಕೆರೆಯನ್ನಾಗಿ ಏಕೆ ಪರಿವರ್ತನೆ ಮಾಡಬಾರದು ಎಂದು? ಆ ಆಲೋಚನೆಯ ಫಲವೇ ಇಂದು ಆಕೆಯನ್ನು ಒಬ್ಬ ಸಾಧಕಿಯನ್ನಾಗಿ ಮಾಡಿದೆ.

ತನ್ನ ಜಮೀನಿನಲ್ಲಿ ನೀರು ತುಂಬಿಕೊಂಡಿರುವ ಸಮಸ್ಯೆಯನ್ನೇ ತನ್ನ ಯಶಸ್ಸಿಗೆ ಒಂದು ಆಯುಧವನ್ನಾಗಿ ಮಾಡಿಕೊಂಡ ಕಿರಣ್ ಕುಮಾರಿ ರಜಪೂತ್, ಸರ್ಕಾರದ ಒಂದು ಯೋಜನೆಯ ಅಡಿಯಲ್ಲಿ ಸುಮಾರು ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡರು. ಅದರ ಜೊತೆಗೆ ತನ್ನಲ್ಲಿದ್ದ ಹಣ ಹಾಗೂ ಸಂಬಂಧಿಕರ ಬಳಿ ಸಾಲವನ್ನು ಪಡೆದುಕೊಂಡು ನೀರು ತುಂಬಿರುವ ಜಮೀನಿನಲ್ಲಿ ಮೀನುಗಾರಿಕೆ ಪ್ರಾರಂಭ ಮಾಡಲು ಸಜ್ಜಾದರು. ಜಮೀನನ್ನು ಕೆರೆಯಾಗಿ ಪರಿವರ್ತನೆ ಮಾಡಿ ಅದರಲ್ಲಿ ಮೀನುಗಾರಿಕೆ ಆರಂಭಿಸಲು ಆಕೆ ಒಟ್ಟು 11 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದರು.

ಕಿರಣ್ ಅವರ ಜೊತೆಗೆ ಅವರ ಮಗ ಶೈಲೆಂದ್ರ ಕೂಡ ಕೈಜೋಡಿಸಿದ. ಕೆರೆಯ ಮಧ್ಯದಲ್ಲಿ ಹಣ್ಣಿನ ಮರಗಳು ಹಾಗೂ ಸುಂದರವಾದ ಒಂದು ಉದ್ಯಾನವನ್ನು ಒಳಗೊಂಡ ಒಂದು ದ್ವೀಪವನ್ನೇ ಸೃಷ್ಟಿಸಿದ್ದಾರೆ.ಇದು ಸುತ್ತಮುತ್ತಲ ಪ್ರದೇಶಗಳ ಪ್ರಮುಖ ಆಕರ್ಷಣೆಯಾಗಿದ್ದು, ಜನ ಇದನ್ನು ನೋಡಲು ಬರುವುದು ಮಾತ್ರವೇ ಅಲ್ಲದೆ ಇಲ್ಲಿ ಬೋಟಿಂಗ್ ಕೂಡ ಮಾಡುತ್ತಾರೆ. ಈಗ ಕಿರಣ್ ಅವರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಈಗ ಈ ದ್ವೀಪದ ಜವಾಬ್ದಾರಿಯನ್ನು ಅವರ ಮಗ ಶೈಲೆಂದ್ರ ವಹಿಸಿಕೊಂಡಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಗೂಗಲ್ ಅವರಿಗೆ ಗೌರವ ಪ್ರಮಾಣ ಪತ್ರವನ್ನು ನೀಡಿದೆ.
