ತಮ್ಮ ಹೊಟ್ಟೆ ಸಿಡಿಯುವವರೆಗೆ ಮನುಷ್ಯನ ರಕ್ತ ಹೀರಿದ ಸೊಳ್ಳೆಗಳು: ವೀಡಿಯೋ ನೋಡಿ ವಿಸ್ಮಯವಿದು ಎಂದ ನೆಟ್ಟಿಗರು!
ಮನುಷ್ಯನ ರಕ್ತವನ್ನೇ ನಂಬಿ ಬದುಕುವ ಜೀವಿ ಸೊಳ್ಳೆ. ಇದರ ಬಗ್ಗೆ ಯಾರಿಗೆ ತಾನೇ ತಿಳಿಯದು ಹೇಳಿ. ಸಂಜೆಗತ್ತಲಾದಂತೆ ಗುಯ್ ಎಂದು ಸದ್ದು ಮಾಡುತ್ತಾ ಬರುತ್ತವೆ, ತಮ್ಮಿಷ್ಟವಾದ ರಕ್ತವನ್ನು ಅರಸಿಕೊಂಡು. ಸೊಳ್ಳೆಗಳ ಕಾಟಕ್ಕೆ ಹಗಲು, ರಾತ್ರಿಯ ಬೇಧವಿಲ್ಲ, ದಿನಕಳೆದಂತೆ ಸೊಳ್ಳೆಗಳ ಕಾಟವು ಕೂಡಾ ಹೆಚ್ಚಾಗುತ್ತಿದೆ. ಸೊಳ್ಳೆಗಳ ಕಾಟದಿಂದ ತಪ್ಪಿಸಿ ಕೊಳ್ಳಲು ಮಸ್ಕಿಟೋ ಕಾಯಿಲ್ ಗಳು, ಲಿಕ್ವಿಡ್ ಗಳು, ಹೀಗೆ ನಾನಾ ವಿಧದ ಪರಿಹಾರೋಪಾಯಗಳು ಕೂಡಾ ಇದ್ದೇ ಇದೆ ಬಿಡಿ. ಇನ್ನು ಇತ್ತೀಚಿನ ವರ್ಷಗಳಲ್ಲಂತೂ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ದಂತಹ ರೋಗಗಳು ಕೂಡಾ ಬರುವುದೆಂಬ ಭ ಯ ಆ ತಂಕ ಗಳ ನಡುವೆ ಜೀವನವನ್ನು ನಡೆಸುತ್ತಿದ್ದೇವೆ ನಾವೆಲ್ಲರೂ ಕೂಡಾ. ಒಟ್ಟಾರೆ ಸೊಳ್ಳೆಗಳು ಕೂಡಾ ಮನುಷ್ಯನ ಜೀವನದಲ್ಲಿ ಒಂದು ಭಾಗವೇ ಆಗಿದೆಯೇನೋ ಎನ್ನುವಂತೆ ಆಗಿ ಬಿಟ್ಟಿದೆ.
ಸೊಳ್ಳೆಗಳು ಮಾನವನ ರಕ್ತವಿಲ್ಲದೇ ಬದುಕುವುದು ಅಸಾಧ್ಯ. ಇವು ಮನುಷ್ಯನ ರಕ್ತವನ್ನು ಮಾತ್ರವೇ ಅಲ್ಲದೇ ಬೇರೆ ಬೇರೆ ಪ್ರಾಣಿಗಳ ರಕ್ತವನ್ನು ಕುಡಿಯುವುದು ಕೂಡಾ ನಾವೆಲ್ಲಾ ಗಮನಿಸಿದ್ದೇವೆ. ಆದರೆ ಸೊಳ್ಳೆಗಳು ಕೆಲವೊಮ್ಮೆ ನಮ್ಮ ರಕ್ತ ಹೀರುವಾಗ ನಮಗೆ ಅದು ತಿಳಿದೇ ಇರುವುದಿಲ್ಲ. ಅನಂತರ ನಮಗೆ ಅದರ ಅನುಭವವಾಗಿ ಅದನ್ನು ಹೊಡೆದು ಸಾಯಿಸುತ್ತೇವೆ ಅಥವಾ ನಮ್ಮ ಕದಲುವಿಕೆಯಿಂದ ಅವೇ ಹಾರಿ ಹೋಗುವುದನ್ನು ನೋಡಿರುತ್ತೇವೆ. ಆದರೆ ಸೊಳ್ಳೆ ಎಷ್ಟು ರಕ್ತ ಕುಡಿಯುತ್ತದೆ ಎಂದರೆ ಸಾಮಾನ್ಯವಾಗಿ ಸಿಗುವ ಉತ್ತರ ಆದರ ಹೊಟ್ಟೆ ತುಂಬುವಷ್ಟು ಎನ್ನುವ ಉತ್ತರ ಸಿಗುತ್ತದೆ ಅಲ್ಲವೇ???
ಆದರೆ ಸೊಳ್ಳೆಗಳು ಹೊಟ್ಟೆ ತುಂಬಾ ಮಾತ್ರವಲ್ಲದೇ ಅವುಗಳ ಹೊಟ್ಟೆ ತುಂಬಿ, ಅದು ಉಬ್ಬಿ ಹೊಟ್ಟೆ ಒಡೆದುಕೊಂಡು ರಕ್ತ ಹೊರಗೆ ಬರುವವರೆಗೂ ಕೂಡಾ ಅವು ರಕ್ತವನ್ನು ಹೀರುತ್ತವೆ ಎಂದರೆ ನೀವು ನಂಬುವಿರಾ? ಇಲ್ಲ ಎನ್ನುವುದಾದರೆ ನಿಮ್ಮ ಅನುಮಾನಕ್ಕೆ ಉತ್ತರ ಎನ್ನುವಂತಹ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದವರೆಲ್ಲಾ ಕೂಡಾ ಆಶ್ಚರ್ಯ ಪಡುತ್ತಿದ್ದರೆ, ವೀಡಿಯೋ ಮಾತ್ರ ಒಂದು ವಿಸ್ಮಯವನ್ನು ನಾವು ನೋಡುತ್ತಿದ್ದೇವೆಯೇನೋ ಎನ್ನುವಂತಹ ಭಾವನೆಯನ್ನು ನಮ್ಮಲ್ಲಿ ಮೂಡಿಸುತ್ತಿದೆ ಎಂಬುದು ಕೂಡಾ ವಾಸ್ತವ.
ಹೌದು ಒಂದು ವೀಡಿಯೋ ವೈರಲ್ ಆಗಿದ್ದು ಈ ಮೀಡಿಯೋವನ್ನು ಒಂದು ಕೋಟಿಗಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದರೆ, ಎರಡು ಲಕ್ಷಕ್ಕಿಂತಲೂ ಅಧಿಕ ಜನರು ಇದಕ್ಕೆ ಲೈಕ್ ನೀಡಿದ್ದಾರೆ. ಈ ವೀಡಿಯೋ ದಲ್ಲಿ ಸ್ಲೋ ಮೋಶನ್ ನಲ್ಲಿ ನೋಡಬಹುದಾಗಿದ್ದು, ಇದರಲ್ಲಿ ಸೊಳ್ಳೆಗಳು ಮನುಷ್ಯರ ದೇಹದ ಮೇಲೆ ಬಂದು ಕುಳಿತು ರಕ್ತವನ್ನು ಹೀರುವುದು, ಅವು ಹೀರಿದ ರಕ್ತದಿಂದ ಅವುಗಳ ದೇಹ ಬಲೂನ್ ರೀತಿಯಲ್ಲಿ ಉಬ್ಬುವುದು ಹಾಗೂ ಅದು ಹಾಗೇ ಮಿತಿಯನ್ನು ಮೀರಿದ ಕೂಡಲೇ ಒಡೆದು ಹೋಗುವುದನ್ನು, ರಕ್ತ ಅವುಗಳ ದೇಹದಿಂದ ಹೊರ ಬರುವುದನ್ನು ನಾವು ನೋಡಿದಾಗ ನಿಜಕ್ಕೂ ಇದೊಂದು ಅದ್ಭುತ ಅನಿಸುತ್ತದೆ.
ವಿಡಿಯೋ ನೋಡಿ
ಸಾವಿರಾರು ಜನರು ಈ ವೀಡಿಯೋಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಪಾಪ ಸೊಳ್ಳೆಗಳು ತಮ್ಮ ರಕ್ತದ ಜೊತೆಗೆ ಅವುಗಳ ರಕ್ತವನ್ನು ಕೂಡಾ ಹರಿಸುತ್ತಿವೆ ಎಂದು ಕರುಣೆ ತೋರುವಂತೆ ಮಾತನಾಡಿದ್ದಾರೆ. ಇನ್ನೂ ಕೆಲವರು ಅತಿಯಾಸೆ ಕೊಲ್ಲುತ್ತದೆ ಎನ್ನುವ ನೀತಿಯನ್ನು ಇದು ತಿಳಿಸುತ್ತಿದೆ ಎಂದಿದ್ದಾರೆ. ನೆಟ್ಟಿಗರು ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಂದಿಬ್ಬರು ಈ ಪ್ರಯೋಗಕ್ಕೆ ತನ್ನ ರಕ್ತವನ್ನು ಧಾರೆಯೆರೆದ ವ್ಯಕ್ತಿಗೂ ಕೂಡಾ ಮೆಚ್ಚುಗೆಯನ್ನು ನೀಡಿ ಎಂದು ಹಾಸ್ಯ ಮಾಡಿದ್ದಾರೆ.