ತಮ್ಮ 2800 ಕೋಟಿ ಮೌಲ್ಯದ ಸಂಪತ್ತಿಗೆ ಉತ್ತರಾಧಿಕಾರಿ ಘೋಷಿಸಿದ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್!

ಬಾಲಿವುಡ್ ನ ಶಹೆಂಶಹಾ ಎಂದು ಮೆರೆಯುತ್ತಿರುವ ಅಮಿತಾಬ್ ಬಚ್ಚನ್ ಅವರು ತಮ್ಮ ಜೀವನದಲ್ಲಿ ಕಂಡ ಏರಿಳಿತಗಳು ಅಷ್ಟಿಷ್ಟಲ್ಲ. ಫಿಲಂ ಇಂಡಸ್ಟ್ರಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ಹಿಡಿದು ಈಗಲೂ ತುಂಬಾ ಆಕ್ಟಿವ್ ಆಗಿದ್ದಾರೆ. ಅದಕ್ಕೆಂದೇ ಅವರನ್ನು ಶತಮಾನದ ಮಹಾನಾಯಕನೆಂದೂ ಕರೆಯುತ್ತಾರೆ. ತಮ್ಮ ಅಭಿನಯದ ಕೌಶಲ್ಯದಿಂದ ಪ್ರೇಕ್ಷಕರ ಮನಸ್ಸಿನ ಮೇಲೆ ರಾಜ್ಯ ಮಾಡುತ್ತಿದ್ದಾರೆ. ಹೀಗಾಗಿ ಅವರು ಭಾರತದಲ್ಲಷ್ಟೇ ಅಲ್ಲ ಜಗತ್ತಿನ ತುಂಬಾ ಸುಪ್ರಸಿದ್ಧರಾಗಿದ್ದಾರೆ.

ಅಮಿತಾಬ್ ಅವರು ಸದ್ಯ ಯಶಸ್ಸಿನ ಶಿಖರದ ಮೇಲಿದ್ದಾರೆ. ಈ ಶಿಖರವನ್ನು ತಲುಪಲು ಅವರು ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ಬಾಲಿವುಡ್ ನಲ್ಲಿ ಎಂಟ್ರಿಯಾಗುವ ಮುನ್ನ ಅನೇಕ ಅವರು ಕಡೆ ಕೆಲಸ ಮಾಡಿದ್ದಾರೆ. ತಿಂಗಳಿಗೆ 500 ₹ ಸಂಬಳ ಪಡೆಯುವ ಕೆಲಸವನ್ನು ಸಹಿತ ಮಾಡಿದ್ದಾರೆ. ಅವರ ಫಿಲಂ ಕರಿಯರ್ ನಲ್ಲಿ ಒಂದು ಸಮಯ ಹೀಗೂ ಬಂದಿತ್ತು. 1996 ರಲ್ಲಿ ಸ್ವಂತದ ಎಬಿಸಿಎಲ್ ಹೆಸರಿನ ಕಾರ್ಪೋರೇಶನ್ ತೆಗೆದಾಗ ಯೋಗ್ಯ ಮ್ಯಾನೇಜ್ಮೆಂಟ್ ನ ಅಭಾವದಿಂದ ಅದರ ಏಳಿಗೆ ಆಗಲಿಲ್ಲ. ಆಗ ಅಮಿತಾಬ್ ಅವರು ದೊಡ್ಡ ನಷ್ಟ ಅನುಭವಿಸಿ ಸಾಲಿನ ಸುಳಿಯಲ್ಲಿ ಸಿಲುಕಿದ್ದರು. ಆ ಸಮಯದಲ್ಲಿ ಅವರು ಸ್ವಲ್ಪವೂ ಹತಾಶರಾಗದೆ ತಮ್ಮ ಪ್ರಯತ್ನವನ್ನು ಬಿಡದೆ ಹಂತಹಂತವಾಗಿ ಮೇಲೇರಿದರು.

ಈಗ ಚಲನಚಿತ್ರಗಳ, ಕಿರುತೆರೆ ಹಾಗೂ ಜಾಹೀರಾತುಗಳ ಮುಖಾಂತರ ಕೋಟ್ಯಾವಧಿ ರೂಪಾಯಿಗಳ ಮಾಲೀಕರಾಗಿದ್ದಾರೆ. ಅವರು ಗಳಿಸಿದ ಹಣವನ್ನು ಅನೇಕ ವ್ಯವಹಾರಗಳಲ್ಲಿ ತೊಡಗಿಸಿದ್ದಾರೆ. ಹೀಗಾಗಿ ಅದರಿಂದಲೂ ಅವರ ಆಸ್ತಿಯಲ್ಲಿ ತಿಂಗಳಿಗೆ ಕೋಟ್ಯಾವಧಿ ರೂಪಾಯಿಗಳ ವೃದ್ಧಿಯಾಗುತ್ತದೆ. ಸದ್ಯ ಅಮಿತಾಬ್ ಅವರು 2800 ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಹೆಸರಿನಲ್ಲಿ 4 ಬಂಗಲೆಗಳು ಇವೆ. ಅವರ ಪ್ರತೀಕ್ಷಾ ಮತ್ತು ಜಲಸಾ ಬಂಗಲೆಗಳು ಎಲ್ಲರಿಗೂ ಗೊತ್ತೇ ಇವೆ. ಇದರಲ್ಲಿಯ ಪ್ರತೀಕ್ಷಾ ಬಂಗಲೆಯ ಬೆಲೆ 160 ಕೋಟಿ ರೂಪಾಯಿಗಳಿದೆ. ಇನ್ನೊಂದು ಬಂಗಲೆ ಆಗಿರುವ ಜಲಸಾ ದ ಬೆಲೆಯೇನು ಕಡಿಮೆ ಇಲ್ಲ.

ಝನಕ್ ಹೆಸರಿನ ಬಂಗಲೆಯು ಸಹ ತುಂಬಾ ಬೆಲೆಯುಳ್ಳದ್ದಾಗಿದೆ. ಈ ಬಂಗಲೆಯಲ್ಲಿ ಸುಸಜ್ಜಿತ ಜಿಮ್ ಇದೆ. ಇಲ್ಲಿಯ ಜಿಮ್ ನಲ್ಲಿ ಅಮಿತಾಭ್ ಮನೆಯ ಸದಸ್ಯರೆಲ್ಲರೂ ವ್ಯಾಯಾಮ ಮಾಡಲು ಹೋಗುತ್ತಿರುತ್ತಾರೆ.

ಬಂಗಲೆಯ ಜೊತೆಗೆ ಅಮಿತಾಭ್ ಅವರು ಅನೇಕ ದುಬಾರಿಯಾದ ಕಾರುಗಳ ಮಾಲೀಕರಾಗಿದ್ದಾರೆ. ಅವರ ಹತ್ತಿರ ಆಡಿ, ಬಿಎಂಡಬ್ಲ್ಯು, ಪೋರ್ಷ ಲೆಕ್ಷಸ್ ಹೀಗೆ ಬೆಲೆಬಾಳುವ ಕಾರುಗಳು ಇವೆ. ದುಬಾರಿ ಕಾರುಗಳ ಜೊತೆಗೆ ದುಬಾರಿ ಗಡಿಯಾರಗಳು ಅಮಿತಾಭ್ ಅವರಿಗೆ ತುಂಬಾ ಹಿಡಿಸುತ್ತವೆ.

ಅಮಿತಾಭ್ ಅವರು 2800 ಕೋಟಿ ರೂಪಾಯಿಗಳ ಸಂಪತ್ತಿಗೆ ಉತ್ತರಾಧಿಕಾರಿ ಯಾರು ಎಂದು ಈಗ ಘೋಷಿಸಿದ್ದಾರೆ. ವಿಶೇಷವೆಂದರೆ ಈ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಜಾಹೀರು ಮಾಡಿದ್ದಾರೆ. ಅವರು ಹೇಳುವ ಪ್ರಕಾರ ತಮ್ಮ ಈ ಸಂಪತ್ತಿನಲ್ಲಿ ಮಗನಾದ ಅಭಿಷೇಕ್ ಮತ್ತು ಮಗಳು ಶ್ವೇತಾ ಇಬ್ಬರಿಗೂ ಸಮಾನ ಪಾಲುದಾರಿಕೆ ಇದೆ, ಇಬ್ಬರೂ ನನ್ನ ಸಂಪತ್ತಿನ ಸಮಾನ ಉತ್ತರಾಧಿಕಾರಯಾಗಿದ್ದಾರೆ ಎಂದು ಹೇಳಿದ್ದಾರೆ.