ತರಕಾರಿಗಳಿಗಿಂತ ಹೆಚ್ಚು ಲಾಭದಾಯಕವಿದೆ ಮೊಳಕೆಯೊಡೆದ ಧಾನ್ಯಗಳ ಪಲ್ಯೆ! ಇದನ್ನೋಮ್ಮೆ ನೋಡಿ

ಡಿಜಿಟಲ್ ಯುಗದಲ್ಲಿ ಎಲ್ಲವೂ ವೇಗವಾಗಿ ಸಾಗುತ್ತಿದ್ದಂತೆ ಮಾನವನ ಜೀವನಶೈಲಿಯು ಸಹಿತ ನಾಗಾಲೋಟದಲ್ಲಿ ಬದಲಾಗುತ್ತಿದೆ. ಈ ಬದಲಾಗುತ್ತಿರುವ ಜೀವನಶೈಲಿಯಿಂದ ಮನುಷ್ಯ ಪ್ರಾಣಿಯ ಮೇಲೆ ಅನೇಕ ರೀತಿಯ ಅಡ್ಡ ಪರಿಣಾಮಗಳು ಆಗುತ್ತಿರುವುದರಿಂದ ಪ್ರತಿಯೊಂದು ವ್ಯಕ್ತಿ ಕಡಿಮೆ ವಯಸ್ಸಿನಲ್ಲಿ ಅನೇಕ ರೋಗ ಮತ್ತು ವಿವಿಧ ಬೇನೆಗಳಿಗೆ ತುತ್ತಾಗುತ್ತಿದ್ದಾನೆ.

ಸಮಯದ ಅಭಾವ, ಹೆಚ್ಚು ಕೆಲಸ ಮಾಡುವ ಆಸೆ, ಮನೆಯಿಂದ ದೂರದವರೆಗಿನ ಪ್ರವಾಸ, ವಿಶ್ರಾಂತಿಯ ಕೊರತೆ ಇವೆಲ್ಲ ಕಾರಣಗಳಿಂದ ಮನುಷ್ಯನ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಹೀಗಾಗಿ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿರ್ಬಲನಾಗುತ್ತಿದ್ದಾನೆ. ಇದರ ಜೊತೆಗೆ ವ್ಯಾಯಾಮದ ಅಭಾವ ಹಾಗೂ ಅನಿಯಂತ್ರಿತವಾದ ಅಸಮತೋಲನ ಆಹಾರ ಪದ್ಧತಿ ಇವೆರಡು ಸಹ ಮನುಷ್ಯನ ಜೀವನದ ಮೇಲೆ ವ್ಯಾಪಕವಾದ ದುಷ್ಪರಿಣಾಮಗಳು ಬೀರುತ್ತಿವೆ.

ಮನುಷ್ಯನಿಗೆ ನಿತ್ಯ ವ್ಯಾಯಾಮದ ಅವಶ್ಯಕತೆ ಇದೆ. ಈ ವ್ಯಾಯಾಮದ ಜೊತೆಗೆ ಸಂತುಲಿತ ಆಹಾರವು ಶರೀರದ ಮೇಲೆ ತುಂಬಾ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.

ಈ ಕೋರೋನಾದ ಲಾಕ್ ಡೌನ್ ಸಮಯದಲ್ಲಿಯೂ ಜನರು ಜೀವದ ಹಂಗು ತೊರೆದು ಕಾಯಿಪಲ್ಲೆ ಖರೀದಿಸಲು ಮುಗಿಬೀಳುತ್ತಿದ್ದರು. ಆದರೆ ಸಿರಿಧಾನ್ಯಗಳಿಂದಲೂ ಮಾನವನಿಗೆ ಅಪರಿಮಿತವಾದ ಶಕ್ತಿ ಊರ್ಜೆ ಸಿಗುತ್ತದೆ. ಈ ಧಾನ್ಯಗಳನ್ನು ತಿಂಗಳಿಗೊಮ್ಮೆ ಖರೀದಿಸಿ ಇಟ್ಟರೂ ಅವುಗಳಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಹಾಗೂ ಈ ಕಾಳುಗಳು ಬೇಗನೆ ನಾಶವೂ ಆಗುವುದಿಲ್ಲ. ಮೇಲಿಂದ ಮೇಲೆ ಖರೀದಿಸಲು ಮಾರ್ಕೆಟಿಗೆ ಹೋಗುವ ಅವಶ್ಯಕತೆಯೂ ಬೀಳುವುದಿಲ್ಲ.

ಧಾನ್ಯಗಳಲ್ಲಿಯೂ ವಿಶೇಷವಾಗಿ ಮೊಳಕೆಯೊಡೆದ ಧಾನ್ಯಗಳು ಮನುಷ್ಯನ ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಮೊಳಕೆ ಒಡೆದ ಧಾನ್ಯಗಳ ಸೇವನೆಯಿಂದಾಗುವ ಪ್ರಯೋಜನಗಳು ಯಾವವು ನೋಡಿ.

  1. ಮೊಳಕೆಯೊಡೆದ ಧಾನ್ಯಗಳು ತುಂಬಾ ಹಗುರವಾಗಿರುತ್ತವೆ ಹೀಗಾಗಿ ಇವು ಪಚನಕ್ಕೆ ತುಂಬಾ ಸುಲಭ.
  2. ಮೊಳಕೆಯೊಡೆದ ಧ ಸೇವನೆ ಕಣ್ಣುಗಳಿಗಾಗಿ ತುಂಬಾ ಪ್ರಯೋಜನಕಾರಿಯಾಗಿವೆ.
  3. ದೇಹದಲ್ಲಿಯ ವಿಷಯುಕ್ತ ಘಟಕಗಳನ್ನು ಹೊರಗೆ ಹಾಕಲು ಮೊಳಕೆಯೊಡೆದ ಧಾನ್ಯಗಳು ತುಂಬಾ ಸಹಾಯಕಾರಿಯಾಗಿವೆ.
  4. ಈ ಮೊಳಕೆಯೊಡೆದ ಧಾನ್ಯಗಳಿಂದ ಶರೀರಕ್ಕೆ ಊರ್ಜೆ ಪ್ರಾಪ್ತವಾಗುತ್ತದೆ. ಹಾಗೆ ನ್ಯೂಟ್ರಿಷಿಯನ್ ಸಹಿತ ದೊರೆಯುವುದು.
  5. ಏಸಿಡಿಟಿಯ ಸಮಸ್ಯೆ ಇರುವವರು ಮೊಳಕೆಯೊಡೆದ ಧಾನ್ಯಗಳನ್ನು ಆಹಾರದಲ್ಲಿ ಸೇವಿಸುವುದರಿಂದ ಏಸಿಡಿಟಿಯಿಂದ ಪರಿಹಾರ ದೊರೆಯುವದು.
  6. ಗರ್ಭವತಿ ಮಹಿಳೆಯರಿಗಾಗಿ ಈ ಆಹಾರ ತುಂಬಾ ಉತ್ತಮವಾದ ಆಹಾರವಾಗಿದೆ.
  7. ಮೊಳಕೆಯೊಡೆದ ಧಾನ್ಯಗಳಲ್ಲಿ ಕ್ಯಾಲರಿಯ ಪ್ರಮಾಣ ಮರ್ಯಾದಿತ ಸ್ವರೂಪದಲ್ಲಿ ಇರುವುದರಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದ ಬಚಾವಾಗಲು ಸಹಾಯವಾಗುತ್ತದೆ.
  8. ಮೊಳಕೆಯೊಡೆದ ಧಾನ್ಯಗಳು ಪ್ರೋಟೀನ್ಸ್ ಗಳಿಂದ ಸಮೃದ್ಧವಾಗಿರುತ್ತದೆ. ಇವು ಪಚನಕ್ಕೆ ತುಂಬಾ ಹಗುರವಾಗಿರುತ್ತವೆ.
  9. ಮೊಳಕೆಯೊಡೆದ ಧಾನ್ಯಗಳನ್ನು ಒಣಗಿಸಿ ಇಡಲು ಬರುತ್ತದೆ. ಇಂಥ ಕಾಳುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಮತ್ತು ಕ ಜೀವನ ಸತ್ವವು ಅಧಿಕ ಪ್ರಮಾಣದಲ್ಲಿ ಇರುತ್ತದೆ.
  10. ಈ ಆಹಾರದಲ್ಲಿ ಕ್ಯಾಲರಿಯ ಪ್ರಮಾಣ ಕಡಿಮೆ ಮತ್ತು ಪ್ರೊಟೀನ್ಸ್ ಪ್ರಮಾಣ ಅಧಿಕವಾಗಿರುವುದರಿಂದ ದೇಹದ ತೂಕ ಕಡಿಮೆಯಾಗಲು ಸಹಕಾರಿಯಾಗುವುದು ಮತ್ತು ಪ್ರೋಟೀನ್ಸ್ ನಿಂದ ದೇಹಕ್ಕೆ ಪೋಷಕ ಘಟಕಗಳು ದೊರೆಯುತ್ತವೆ.