ತಲೆಕೆಡಿಸುವಂಥ ಫೋಟೋ! ಹೇಳಿ, ಯಾವ ಸೈಡಿನ ಝೆಬ್ರಾ ನಮ್ಮ ಕಡೆ ನೋಡುತ್ತಿದೆ..? ಜೂಮ್ ಮಾಡಿದ…
ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯಲ್ಲಿಯ ವನ್ಯಜೀವಿಗಳ ಛಾಯಾಚಿತ್ರಕಾರ ಸರೋಷ ಲೋಧಿ ಮಸಾಯಿಮಾರಾ ಎಂಬಲ್ಲಿ ಎರಡು ಝೀಬ್ರಾಗಳ ಒಟ್ಟಿಗೆ ತಗೆದ ಫೋಟೋ ಸದ್ಯಕ್ಕೆ ಸಂಪೂರ್ಣ ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗಿದೆ. ಈ ಎರಡು ಝೀಬ್ರಾಗಳಲ್ಲಿ ಎಡಬದಿಯ ಝೀಬ್ರಾ ಅಥವಾ ಬಲಬದಿಯ ಝೀಬ್ರಾಗಳಲ್ಲಿ ನಿಖರವಾಗಿ ಯಾವ ಝೀಬ್ರಾ ಮುಂದೆ ನೋಡುತ್ತಿದೆ ಎಂಬುದರ ಕುರಿತು ತಿಳಿದುಕೊಳ್ಳಲು ಎಲ್ಲರಲ್ಲಿ ಉತ್ಸುಕತೆ ನಿರ್ಮಾಣವಾಗುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ಫೋಟೋ ತುಂಬಾ ವೈರಲ್ ಆಗುತ್ತಿದೆ.
‘ವೈಲ್ಡ್ ಲೈಫ್’ ಫೋಟೋಗ್ರಾಫರ್ ಸರೋಷ ಲೋಧಿ ಯವರು ಡಿಸೆಂಬರ್ 2018 ರಲ್ಲಿ ಮಸಾಯಿಮಾರಾ ಎಂಬಲ್ಲಿ ಎರಡು ಝೀಬ್ರಾಗಳ ಫೋಟೋ ತಗೆದಿದ್ದರು. ಈ ಫೋಟೋ ಅವರ ಸ್ನೇಹಿತ ಭಾರತೀಯ ವನ್ಯ ಅಧಿಕಾರಿ (ಐಎಎಸ್) ಪರವಿನ್ ಕಾಸವಾನ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಅವರು ಈ ಫೋಟೋ ಟ್ವೀಟ್ ಮಾಡಿದ ನಂತರ ಸಂಪೂರ್ಣ ಜಗತ್ತಿನಾದ್ಯಂತ ಚರ್ಚೆಯಲ್ಲಿ ಬಂದಿದೆ.
ಲೋಧಿ ಅವರು ತಗೆದಂತ ಈ ಎರಡು ಝೀಬ್ರಾಗಳಲ್ಲಿ ಎಡಬದಿಯ ಅಥವಾ ಬಲಬದಿಯ ಝೀಬ್ರಾ ಯಾವುದು ಮುಖ ಮುಂದೆ ಮಾಡಿದೆ? ಎಂಬುದರ ಕುರಿತು ಎಲ್ಲರಲ್ಲಿ ಭ್ರಮೆ ನಿರ್ಮಾಣವಾಗಿದೆ. ಅದನ್ನು ಎಷ್ಟು ಬಾರಿ ಜೂಮ್ ಮಾಡಿ ನೋಡಿದರೂ ಗೊತ್ತಾಗುತ್ತಿಲ್ಲ.
Let’s see who can tell which Zebra is in front. Clicked & asked by friend @saroshlodhi. pic.twitter.com/RNAMBJrk1K
— Parveen Kaswan, IFS (@ParveenKaswan) July 8, 2020
ಲೋಧಿಯವರು ತಗೆದಂತ ಈ ಫೋಟೋ ಜಗತ್ತಿನ ಮೂಲೆ ಮೂಲೆಗಳಲ್ಲಿ ಎರಡು ಝೀಬ್ರಾಗಳಲ್ಲಿ ನಿಖರವಾಗಿ ಯಾವ ಝೀಬ್ರಾ ಮುಂದೆ ಮುಖ ಮಾಡಿ ನೋಡುತ್ತಿದೆ ಎಂಬುದು ತಿಳಿದುಕೊಳ್ಳಲು ಲೋಧಿಯವರಿಗೆ ಅನೇಕ ಫೋನ್ ಮತ್ತು ಮೇಲ್ ಗಳು ಬರುತ್ತಿವೆ. ಸೋಶಿಯಲ್ ಮಿಡಿಯಾದಲ್ಲಿ ಸಹ ಇದರ ಕುರಿತು ಬಹಳಷ್ಟು ಚರ್ಚೆ ನಡೆದಿದೆ.
"Whose face is that?" 🦓🦓@mrdanwalker and @sallynugent are looking for the answer on #BBCBreakfast ⤵️
— BBC Breakfast (@BBCBreakfast) July 13, 2020
Credit: Sarosh Lodhi pic.twitter.com/U6hhKkb3UO
Photographer Takes A Photo Of 2 Zebras In Kenya, And People Can’t Agree On Which One Is Looking At The Camera.https://t.co/iDSo9JthNb
— Charles Onyango-Obbo (@cobbo3) July 10, 2020