ತಾನು ರಸ್ತೆ ಬದಿಯಲ್ಲಿ ಖರೀದಿಸಿದ ಉಂಗುರದ ರಹಸ್ಯ 33 ವರ್ಷಗಳ ನಂತರ ಬಯಲಾದಾಗ ಮಹಿಳೆ ಕಾದಿತ್ತು ಶಾಕ್

ಶಾಪಿಂಗ್ ಮಾಡೋದು ಅಂದ್ರೆ ಹುಡುಗಿಯರಿಗೆ ಬಹಳ ಇಷ್ಟ, ಬಹುಶಃ ಶಾಪಿಂಗ್ ಮಾಡೋಕೆ ಇಷ್ಟ ಪಡದೇ ಇರೋ ಹುಡುಗಿಯರೇ ಕಡಿಮೆ ಎಂದು ನಾವು ಹೇಳಬಹುದು. ಕೆಲವರಿಗಂತೂ ಶಾಪಿಂಗ್ ಒಂದು ಕ್ರೇಜ್ ಕೂಡಾ ಹೌದು. ಮೂಡ್ ಸರಿಯಿಲ್ಲದ, ಬೇಸರದಲ್ಲಿರುವ ಹುಡುಗಿಯರಿಗೂ ಕೂಡಾ ಶಾಪಿಂಗ್ ಹೋಗೋಣ್ವ ಎಂದರೆ ಸಾಕು ಮುಖದಲ್ಲಿ ನಗು ಮೂಡೋದು ಕೂಡಾ ಸಹಜವಾಗಿ ನಾವು ಗಮನಿಸಿರುತ್ತೇವೆ‌. ಹೀಗೆ ಶಾಪಿಂಗ್ ಮಾಡಲು ಹೋದ ಹುಡುಗಿಯರು ಬಹುತೇಕ ಸಂದರ್ಭಗಳಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ, ಬಂಡಿಗಳಲ್ಲಿ ಅಥವಾ ದೊಡ್ಡ ದೊಡ್ಡ ಅಂಗಡಿಗಳೇ ಆಗಲೀ ಎಲ್ಲೋ ಒಂದು ಕಡೆ ಏನಾದರೊಂದು ಖರೀದಿ ಮಾಡದೇ ಅಂತೂ ಮನೆಗೆ ವಾಪಸ್ಸು ಬರುವುದಿಲ್ಲ ಎಂದೇ ಹೇಳಬಹುದು.

ಇನ್ನು ಹುಡುಗಿಯರ ಶಾಪಿಂಗ್ ಟೇಸ್ಟ್ ಅನ್ನು ಅರ್ಥ ಮಾಡಿಕೊಳ್ಳುವುದು ಕೂಡಾ ಸುಲಭವಲ್ಲ, ಆಗಾಗ ಶಾಪಿಂಗ್ ಕರೆದುಕೊಂಡು ಹೋದರೆ ಬಹುಶಃ ಅದು ತಿಳಿಯಬಹುದೇನೋ. ಶಾಪಿಂಗ್ ವಿಚಾರಕ್ಕೆ ಬಂದಾಗ ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬರು ಸುಮಾರು 33 ವರ್ಷಗಳ ಹಿಂದೆ ಹೀಗೆ ಶಾಪಿಂಗ್ ಮಾಡಲು ಹೋದಂತಹ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ವಸ್ತುಗಳನ್ನು ಮಾರುತ್ತಿದ್ದ ವ್ಯಾಪಾರಿಯೊಬ್ಬರ ಬಳಿ ಒಂದು ಹಳೆಯ ಉಂಗುವನ್ನು ಖರೀದಿ ಮಾಡಿದ್ದಾರೆ. ಆದರೆ ಅಂದು ಆಕೆಗೆ ಆ ಉಂಗುರದ ಮಹತ್ವ ಏನೆಂದು ತಿಳಿದಿರಲಿಲ್ಲ. ಅದೊಂದು ಸಾಮಾನ್ಯ ಉಂಗುರವೆಂದು ತಿಳಿದು, ಅಂದವಾಗಿದೆ ಎಂದು ಕೆಲವು ವರ್ಷಗಳ ಕಾಲ ಕೈ ಬೆರಳಿಗೆ ಹಾಕಿಕೊಂಡಿದ್ದರು.

ಆದರೆ ಮೂವತ್ತು ವರ್ಷಗಳ ನಂತರ ತನ್ನ ಬಳಿ ಇರುವುದು ಒಂದು ಸಾಮಾನ್ಯವಾದ ಉಂಗುರವಲ್ಲ ಬದಲಿಗೆ ಅದೊಂದು ಅಸಾಮಾನ್ಯ ಹಾಗೂ ಅತ್ಯಂತ ಬೆಲೆ ಬಾಳುವ ಉಂಗುರವೆಂದು ತಿಳಿದಾಗ ಆಕೆ ಹಾಗೂ ಆಕೆಯ ಕುಟುಂಬದವರು ಕೂಡಾ ಆಶ್ವರ್ಯಚಕಿತರಾಗಿದ್ದಾರೆ. ಇಂತಹುದೊಂದು ವಿಚಿತ್ರ ಎನಿಸುವ ಆದರೆ ವಾಸ್ತವವಾದ ಘಟನೆ ನಡೆದಿರುವುದು ಇಂಗ್ಲೆಂಡ್ ನ ನಗರವೊಂದರಲ್ಲಿ. ಡೆಬ್ರಾ ಗೊಡ್ಡಾರ್ಡ್ ಎನ್ನುವ ಮಹಿಳೆಗೆ ಈಗ 55 ವಯಸ್ಸು. ಆಕೆ ಸುಮಾರು 33 ವರ್ಷಗಳ ಹಿಂದೆ ಒಂದು ಸೇಲ್ ನಲ್ಲಿ ಹತ್ತು ಡಾಲರ್ ನೀಡಿ ಒಂದು ಸುಂದರವಾದ ಗಾಜಿನ ಉಂಗುರವನ್ನು ಕೊಂಡಿದ್ದರು.

ಸ್ವಲ್ಪ ದಿನ ಅದನ್ನು ಬಳಸಿದ ಆಕೆ ಅನಂತರ ಅದನ್ನು ಸುರಕ್ಷಿತವಾಗಿ ಒಂದು ಬಾಕ್ಸ್ ನಲ್ಲಿ ಎತ್ತಿಟ್ಟರು. ಹೀಗೆ ಎತ್ತಿಟ್ಟಿದ್ದ ಉಂಗುರವನ್ನು ಆಕೆ ಎಷ್ಟು ಬೆಲೆ ಸಿಕ್ಕರೆ ಅಷ್ಟಕ್ಕೆ ಮಾರಲು ನಿರ್ಧರಿಸಿ ಒಬ್ಬ ಒಡವೆ ಮಾರಾಟ ಮಾಡುವ ವ್ಯಕ್ತಿಯ ಬಳಿಗೆ ಅದನ್ನು ಕೊಂಡೊಯ್ದಿದ್ದಾರೆ. ಆ ವ್ಯಕ್ತಿ ಉಂಗುರವನ್ನು ಕೂಲಂಕಷವಾಗಿ ಪರೀಕ್ಷಿಸಿದ ನಂತರ ಮೇಡಂ ಇದು ಸಾಮಾನ್ಯವಾದ ಉಂಗುರವಲ್ಲ, ಇದೊಂದು ಅಪರೂಪದ ಹಾಗೂ ಬೆಲೆಬಾಳುವ ವಜ್ರ ಅಳವಡಿಸಲಾದ ಉಂಗುರ ಎಂದಿದ್ದಾರೆ. ಆ ಮಾತು ಕೇಳಿ ಶಾ ಕ್ ಆದ ಡೆಬ್ರಾ ಉಂಗುರವನ್ನು ಮನೆಗೆ ತಂದು ಒಂದಿಡೀ ದಿನ ಅದನ್ನು ನೋಡಿದ್ದಾರೆ, ಆಶ್ಚರ್ಯ ಪಟ್ಟಿದ್ದಾರೆ.

ಅದೊಂದು ಅಪರೂಪದ ವಜ್ರ ಎಂದು ತಿಳಿದ ಮೇಲೆ ಡೆಬ್ರಾ ಅದನ್ನು ಮಾರಲು ತೀರ್ಮಾನಿಸಿದ್ದಾರೆ. ಆ ಉಂಗುರಕ್ಕೆ ಆಕೆ ಎಷ್ಟು ಹಣ ಬರಬಹುದು ಎಂಬುದನ್ನೂ ಕೂಡಾ ಊಹಿಸಿರಲಿಲ್ಲ. 19 ನೆಯ ಶತಮಾನದ ಡೆ ಡ್ ಸ್ಟೋನ್ ಎನ್ನುವ ಹೆಸರಿನ ಈ ವಜ್ರದ ಉಂಗುರವು ಕೋಟಿಗಳಲ್ಲಿ ಮಾರಾಟ ವಾಯಿತು ಎನ್ನಲಾಗಿದೆ‌. ಮೂವತ್ಮೂರು ವರ್ಷಗಳ ಹಿಂದೆ ಸೇಲ್ ನಲ್ಲಿ ಖರೀದಿ ಮಾಡಿದ್ದ ಆ ಉಂಗುರ ತನ್ನ ಜೀವನವನ್ನು ಬದಲಿಸಲಿದೆ ಎಂಬುದನ್ನು ಸ್ವತಃ ಡೆಬ್ರಾ ಕೂಡಾ ಊಹಿಸಿರಲಿಲ್ಲ. ಆದರೆ ಗಾಜಿನದೆಂದು ತಿಳಿದಿದ್ದ ಆಕೆಯ ಆ ಉಂಗುರ ಆಕೆಯ ಜೀವನವನ್ನೇ ಬದಲಿಸಿತ್ತು.