ತಾಯಿಯಿಂದ ದೂರವಾಗಿ ತಿರುಗುತ್ತಿರುವ ಪುಟ್ಟ ಸಿಂಹದ ಮರಿ, ಮುರಿದ ಕಾಲುಗಳಿಂದ ನಡೆಯಲು ಪ್ರಯತ್ನಿಸುತ್ತಿರುವ ಮನ ಕಲಕುವ ದೃಶ್ಯ.

ರಶಿಯಾದಲ್ಲಿ ಒಂದು ಸಿಂಹದ ಮರಿ( Lion Cub)ಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗುತ್ತಿದೆ, ಅದನ್ನು ನೋಡಿದ ಕೂಡಲೇ ಪ್ರತಿಯೊಬ್ಬರು ಎಮೋಷನಲ್ ( Emotional) ಆಗುವದು ಖಚಿತ. ಈ ವಿಡಿಯೋದಲ್ಲಿ ಒಂದು ಸಿಂಹದ ಮರಿ ತನ್ನ ಮುರಿದ ಕಾಲುಗಳಿಂದ ನಡೆಯಲು ಪ್ರಯತ್ನಿಸುತ್ತದೆ. ಕೆಲವು ದಿವಸಗಳ ಹಿಂದೆ ಈ ಸಿಂಹದ ಮರಿಯನ್ನು ತನ್ನ ತಾಯಿಯಿಂದ ದೂರಮಾಡಿ ಅದರ ಕಾಲುಗಳನ್ನು ಮುರಿದಿದ್ದರು. ಇಷ್ಟಕ್ಕೆಲ್ಲ ಕಾರಣ ವೇನೆಂದರೆ ರಶಿಯಾ ಸಮುದ್ರ ದಂಡೆಯಲ್ಲಿ ಪರ್ಯಟಕರು ಇದರ ಜೊತೆಗೆ ತಮ್ಮ ಫೋಟೋ ತಗೆದುಕೊಳ್ಳಬೇಕೆಂಬ ಉದ್ದೇಶದಿಂದ.

ಸಿಂಹದ ಮರಿಯ ಜೊತೆಗೆ ನಡೆದ ಈ ಅನ್ಯಾಯದ ವಿರುದ್ಧ ರಶಿಯಾದ ರಾಷ್ಟ್ರಪತಿ Vladimir putin ಅವರು ಕಠೋರ ಕ್ರಮ ಕೈಗೊಂಡಿದ್ದಾರೆ. ಅವರು ಇದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಪತ್ತೆಹಚ್ಚಲು ಆದೇಶ ನೀಡಿದ್ದಾರೆ. ಮೆಟ್ರೋ ನ್ಯೂಜ ರಿಪೋರ್ಟ್ ಪ್ರಕಾರ, ಈ ಸಿಂಹದ ಮರಿಯ ಹೆಸರು ಸಿಂಬಾ ಇದೆ. ಸಿಂಬಾ ಜನಿಸಿ ಕೇವಲ ಒಂದು ವಾರವಾಗಿತ್ತು. ಆ ಸಮಯದಲ್ಲಿ ಸಿಂಬಾಗೆ ತಾಯಿಯಿಂದ ದೂರ ಮಾಡಿದರು. ತಾಯಿಯಿಂದ ದೂರ ಮಾಡಿದ ನಂತರ ಅದರ ಕಾಲುಗಳಿಗೆ ಗಾಯ ಮಾಡಿ ಅದಕ್ಕೆ ನಡೆಯಲು ಬಾರದಂತೆ ಮಾಡಿದರು. ಏಕೆಂದರೆ ಜನರು ಇದರ ಜೊತೆಗೂಡಿ ಫೋಟೋ ತಗೆದುಕೊಳ್ಳಬೇಕೆಂಬ ದುರುದ್ದೇಶದಿಂದ ಮಾತ್ರ. ಅಷ್ಟೇ ಅಲ್ಲ ಈ ಮರಿಗೆ ತಣ್ಣನೆಯ ಕೊಟ್ಟಿಗೆಯಲ್ಲಿ ಎಸೆದರು. ಆದರೂ ಸಿಂಬಾ ತನ್ನ ಗಾಯಗೊಂಡ ಕಾಲುಗಳಿಂದ ನಡೆಯಲು ಪ್ರಯತ್ನಿಸುತ್ತಿರುವ ವೀಡಿಯೊವನ್ನು ನೀವೇ ನೋಡಿ..