ತಿಂಗಳಿಗೆ 14 ಸಾವಿರ ರೂ.ಗಳಿಸುವ 80 ವರ್ಷದ ಅಜ್ಜಿಯ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ 200 ಕೋಟಿ ರೂ.ಗಳು! ಅಜ್ಜಿಗೆ ಕೇಳಿದಾಗ..
80 ವರ್ಷದ ವೃದ್ಧೆಯ ಸ್ವಿಸ್ ಬ್ಯಾಂಕ್ ಖಾತೆಯ ಅಕೌಂಟ್ ನಲ್ಲಿ ಸುಮಾರು 196 ಕೋಟಿ ರೂಪಾಯಿ ಕಪ್ಪು ಹಣವಿರುವ ಬಗ್ಗೆ ಮಾಹಿತಿಯೊಂದು ಹೊರ ಬಿದ್ದಿದೆ. ಆದರೆ ಮಹಿಳೆಯ ಹೇಳಿಕೆಯ ಪ್ರಕಾರ ಆಕೆಯ ತಿಂಗಳ ಆದಾಯ ಬರೀ 14 ಸಾವಿರ ರೂಪಾಯಿಗಳಷ್ಟಿದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ ಆದಾಯ ತೆರಿಗೆಯ ಅಪೀಲ್ ಬೋರ್ಡ್ (ITAT) ಮುಂಬಯಿ ಬ್ರಾಂಚ್ ನವರು ಮಹಿಳೆಗೆ ಟ್ಯಾಕ್ಸ್ ಜೊತೆಗೆ ಪೆನಾಲ್ಟಿ ಸಹಿತ ತುಂಬಲು ಆದೇಶಿಸಿದ್ದಾರೆ.
ದೊರೆತ ಮೂಲಗಳ ಪ್ರಕಾರ, ರೇನು ಥರಾನಿ ಇವರ ಬ್ಯಾಂಕ್ ಅಕೌಂಟ್ ಜಿನಿವಾದಲ್ಲಿದೆ. ಈ ಸ್ವಿಸ್ ಬ್ಯಾಂಕಲ್ಲಿ ರೇನು ಥರಾನಿ ಫ್ಯಾಮಿಲಿ ಟ್ರಸ್ಟ್ ಹೆಸರಿನಲ್ಲಿ ಒಂದೇ ಒಂದು ಅಕೌಂಟ್ ವಿವೇಕಾಧೀನ ಲಾಭಾರ್ಥಿಯ ಸ್ವರೂಪದಲ್ಲಿದೆ. ಈ ಖಾತೆ ಜುಲೈ 2004 ರಲ್ಲಿ ಕೆಮೆನ್ ಆಯರ್ಲ್ಯಾಂಡ್ ದ GW ಇನ್ವೆಸ್ಟಮೆಂಟ್ ಹೆಸರಿನಲ್ಲಿ ಓಪನ್ ಮಾಡಲಾಗಿತ್ತು. ಆಗ ಅದು ಫಂಡ್ ನ್ನು ಫ್ಯಾಮಿಲಿ ಟ್ರಸ್ಟ್ ಎಡ್ಮಿನಿಸ್ಟ್ರೇಟರ್ ತರ ಸ್ಥಾನಾಂತರ ಮಾಡಲಾಗಿತ್ತು.

ರೇನು ಥರಾನಿ ವರ್ಷ 2005-06 ದಾಖಲಿಸಿದ ಇನ್ಕಮ್ ಟ್ಯಾಕ್ಸ್ ರಿಟರ್ನ್ ನಲ್ಲಿ ಈ ಮಾಹಿತಿಯನ್ನು ಕೊಟ್ಟಿರಲಿಲ್ಲ. ಈ ವಿಷಯವನ್ನು ಮತ್ತೆ 31 ಮಾರ್ಚ್ 2014 ರಲ್ಲಿ ಮತ್ತೆ ತೆಗೆಯಲಾಯಿತು. ರೇನು ಅವರು ಇದರ ಸಂಬಂಧವಾಗಿ ಒಂದು ಪ್ರತಿಜ್ಞಾ ಪತ್ರವನ್ನು ಸಹಿತ ಕೊಟ್ಟಿದ್ದರು. ಅದರಲ್ಲಿ HSBC ಜಿನಿವಾದಲ್ಲಿ ಯಾವುದೇ ಬ್ಯಾಂಕ್ ಖಾತೆಯಿಲ್ಲವೆಂದು ಮತ್ತು GW ಇನ್ವೆಸ್ಟಮೆಂಟ್ ನಲ್ಲಿ ತಮ್ಮ ಹೆಸರಿಗೆ ಯಾವುದೇ ಶೇರ್ ಸಹಿತ ಇಲ್ಲವೆಂದು ಬರೆದು ಕೊಟ್ಟಿದ್ದರು. ರೇನು ಅವರು 2005-06 ರಲ್ಲಿ ತಮ್ಮ ವಾರ್ಷಿಕ ಆದಾಯ ಬರೀ 1.7 ಲಕ್ಷ ರೂಪಾಯಿಗಳನ್ನು ತೋರಿಸಿದ್ದರು. ಅದರಲ್ಲಿ ತಮ್ಮ ವಿಳಾಸ ಬೆಂಗಳೂರಿನದು ಹೇಳಿದ್ದರು. ಜೊತೆಗೆ ತಾವು ಭಾರತೀಯ ವ್ಯಕ್ತಿ ಎಂದು ಬಿಂಬಿಸಿದ್ದರು. ITAT ಸಮಿತಿ ಹೇಳುವ ಪ್ರಕಾರ, ಮಹಿಳೆ ಇಷ್ಟೊಂದು ಕಡಿಮೆ ಸಮಯದಲ್ಲಿ ಇಷ್ಟು ಹಣ ಗಳಿಸಲಿಕ್ಕೆ ಹೇಗೆ ಸಾಧ್ಯ ಎಂಬುದು ಇನ್ನೂ ಸರಿಯಾಗಿ ಸ್ಪಷ್ಟವಾಗಿಲ್ಲ.
ರೇನು ಥರಾನಿಯವರು ಯಾವುದೇ ಲೀಡರ್ ಅಥವಾ ಯಾವುದೇ ಸಂಘ ಸಂಸ್ಥೆಗಳನ್ನು ಅಥವಾ ಚಾರಿಟಿಯನ್ನು ನಡೆಸುವದಿಲ್ಲ, ಅಂದ ಮೇಲೆ ಈ ಹಣ ಹೇಗೆ ಅವರ ಹತ್ತಿರ ಬಂತು? ಎಂಬುದೇ ಪ್ರಶ್ನೆ ಆಗಿದೆ. ರೇನು ಥರಾನಿಯವರು ಇನ್ ಕಮ್ ಟ್ಯಾಕ್ಸ್ ರಿಟರ್ನ್ ನಲ್ಲಿ ಸಲ್ಲಿಸಿದ ಮಾಹಿತಿಯ ಪ್ರಕಾರ ಸದ್ಯಕ್ಕೆ ಅವರ ಹತ್ತಿರವಿರುವ ಅಕೌಂಟ್ ನಲ್ಲಿಯ ಹಣವನ್ನು ಗಳಿಸಲು 13 ಸಾವಿರ 500 ವರ್ಷಗಳೇ ಬೇಕಾಗುವದಂತೆ.