ತಿಂಗಳಿಗೆ 4 ನಾಲ್ಕು ಲಕ್ಷ ಗಳಿಸುವ ಪೈಲಟ್, ಕೊರೊನ ಕಾರಣದಿಂದಾದ ಡೆಲಿವರಿ ಬಾಯ್.
ಕೊರೊನ ಮತ್ತು ಲಾಕ್ ಡೌನ್ ಪ್ರತಿಯೊಬ್ಬರ ಕೆಲಸದ ಮೇಲೆ ಮತ್ತು ತೆಗೆದುಕೊಳ್ಳುವ ಸಂಬಳದ ಮೇಲೆ ಪರಿಣಾಮವನ್ನು ಬೀರಿದೆ. ಸುಮಾರು ಜನರು ತಮ್ಮ ನೌಕರಿಯನ್ನು ಕಳೆದುಕೊಂಡಿದ್ದಾರೆ. ಇದರ ಎಲ್ಲಕ್ಕೂ ಹೆಚ್ಚು ಪರಿಣಾಮ ಏರ್ಲೈನ್ಸ್ ಮೇಲಾಗಿದೆ. ಯಾಕೆಂದರೆ ಎಲ್ಲ ಫ್ಲೈಟ್ಸ್ ಗಳು ಬಂದ್ ಆಗಿಬಿಟ್ಟಿವೆ. ಎಷ್ಟೋ ಜನರ ನೌಕರಿ ಹೋಯಿತು, ಜೊತೆಗೆ ಎಷ್ಟೋ ಜನರನ್ನು ವೇತನವಿಲ್ಲದೆ ಮನೆಗೆ ಕಳಿಸಿದ್ದಾರೆ.

ಏತನ್ಮಧ್ಯೆ, ಥೈಲ್ಯಾಂಡ್ ನ ನಕಾರಿನ್ ಜೋ ಕಿ ಒಬ್ಬ ಪೈಲಟ್ ಇದ್ದು ಆತನ ಕಂಪನಿ ಆತನನ್ನು ರಜೆಯ ಮೇಲೆ ಕಳುಹಿಸಿದ ನಂತರ ತುಂಬಾ ದಿನಗಳು ಮನೆಯಲ್ಲೇ ಕುಳಿತು ಕುಳಿತು ಬೇಜಾರಾಗಿ ಜೀವನಾನೇ ಬೇಡ ಎನ್ನುವ ಮಟ್ಟಿಗೆ ಆಗಿತ್ತು. ಲಕ್ಷ ಲಕ್ಷ ರೂಪಾಯಿ ಸಂಬಳ ತೆಗೆದುಕೊಳ್ಳುವ ನಕಾರಿನ್ ಆನಂತರ ಮಾಡಿದ ಕೆಲಸವನ್ನು ನೋಡಿ ಎಲ್ಲರೂ ಹುಬ್ಬೇರಿಸಿದರು.

ಆತ ಡಿಲೇವರಿ ಬಾಯ್ ಕೆಲಸ ಶುರು ಮಾಡುವ ಬಗ್ಗೆ ವಿಚಾರ ಮಾಡಿದನು. ಮನೆಯಲ್ಲೇ ಕುಳಿತು ಕೊಳ್ಳುವದಕ್ಕಿಂತ ತನ್ನ ಸ್ಕೂಟರ್ ತೆಗೆದು ಜನರಿಗೆ ಸಾಮಾನು ಸರಂಜಾಮುಗಳನ್ನು ಅವರ ಮನೆಬಾಗಿಲಿಗೆ ಒಯ್ದು ಮುಟ್ಟಿಸುವದು ತುಂಬಾ ಒಳ್ಳೆಯದೆಂದೆನಿಸಿತು. ಮೊದಮೊದಲು ಸಾಮಾನುಗಳನ್ನು ಅವರ ಮನೆಗೆ ತಲುಪಿಸುವದು ಸರಳವೆನಿಸಿತು, ನಂತರ ಮಾತ್ರ ಕಷ್ಟ ಹಾಗೂ ತುಂಬಾ ಬಿಸಿಲಿನಲ್ಲಿ ಕೆಲಸ ಮಾಡುವದು ಅಷ್ಟು ಈಜಿಯಾಗಿರಲಿಲ್ಲ.

ಹೀಗೆಯೇ ಅನೇಕ ರೀತಿಯ ಕೆಲಸಗಳನ್ನು ಈ ಕೊರೊನದ ಕಾರಣದಿಂದ ಜನರಿಗೆ ಮಾಡಬೇಕಾಗಿ ಬಂದಿದೆ. ಅನೇಕ ಜನರು ನೌಕರಿ ಕಳೆದುಕೊಂಡಿದ್ದಾರೆ. ಆದ್ದರಿಂದ ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ಯಾವ ಕೆಲಸ ಚಿಕ್ಕದು ಯಾವುದು ದೊಡ್ಡದು ಅಂತ ವಿಚಾರ ಮಾಡುತ್ತ ಕುಳಿತರೆ ಅದು ತಪ್ಪಾಗುವದು. ಈ ಸಮಯದಲ್ಲಿ ಎಲ್ಲರೂ ಏನಾದರೂ ಮಾಡಿ ತಮ್ಮ ಸಂಸಾರವನ್ನು ನಡೆಸುತ್ತಿದ್ದಾರೆ.