ತಿರುಗುಬಾಣ; ಇಲ್ಲಿ ಯಾರೂ ಅಲ್ಪರಲ್ಲ! ತನ್ನ ಬೇಟೆಯಾಡಿದ ಕಪ್ಪೆಯನ್ನೇ ಎತ್ತಿಕೊಂಡು ಹೋದ ಹುಳ.
ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ನಿಸರ್ಗವು ಒಂದು ರೀತಿಯ ಶಕ್ತಿಯನ್ನು ನೀಡಿದೆ. ತನ್ನಲ್ಲಿರುವ ಶಕ್ತಿಯ ಉಪಯೋಗ ಹೇಗೆ ಮತ್ತು ಯಾವ ಸಂದರ್ಭದಲ್ಲಿ ಮಾಡಿಕೊಳ್ಳಬೇಕೆಂಬ ಜ್ಞಾನ ಮಾತ್ರ ಆ ಜೀವಿಯಲ್ಲಿ ಇರುವುದು ತುಂಬಾ ಅವಶ್ಯಕವಾಗಿದೆ. ಅದಕ್ಕೆ ಹೇಳಿರುವುದು ಇಲ್ಲಿ ಯಾರು ಅಲ್ಪರಲ್ಲ. ಹೀಗೆ ಹೇಳುವ ಕಾರಣ ಏನೆಂದರೆ ಇಲ್ಲಿ ನೀಡಿದ ವಿಡಿಯೋ ನೋಡಿ ಗೊತ್ತಾಗುತ್ತದೆ.
ವಿಡಿಯೋದಲ್ಲಿ ನಿಜಕ್ಕೂ ಅದ್ಭುತವಾದ ದೃಶ್ಯ ನೋಡಲಿದ್ದೀರಿ, ಕಾರಣ ಇಲ್ಲಿ ತುಂಬಾ ವಿಚಿತ್ರ ಹಾಗೂ ನಮ್ಮ ಎಣಿಕೆಯ ಸಂಪೂರ್ಣ ವಿರುದ್ಧವಾದ ಘಟನೆ ಘಟಿಸಿದೆ. ಪ್ರಸ್ತುತ ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ ನೀರಿನಲ್ಲಿ ಕಪ್ಪೆಯೊಂದು ಹುಳಗಳ ಬೇಟೆಗಾಗಿ ಕಾದು ಕುಳಿತಿದೆ. ಈ ಸಂದರ್ಭದಲ್ಲಿ ಕಪ್ಪೆಯ ಹತ್ತಿರ ಭ್ರಮರದಂತಹ ಹುಳ ಒಂದು ಬರಲು ಕಪ್ಪೆಯು ಚಂಗನೆ ಕ್ಷಣದಲ್ಲಿ ತನ್ನ ಉದ್ದನೆಯ ನಾಲಿಗೆಯನ್ನು ಸಹಜವಾಗಿ ಚಾಚಿ ಅದರ ಬೇಟೆಯಾಡುತ್ತದೆ. ಆದರೆ ಕ್ಷಣದಲ್ಲಿಯೇ ಕಪ್ಪೆಯ ಬೇಟೆ ತಿರುಗುಬಾಣವಾಗಿ ಪರಿಣಮಿಸಿದೆ. ಕಪ್ಪೆ ನಾಲಿಗೆ ಚಾಚಿ ತನ್ನ ಬೇಟೆಯನ್ನು ಹಿಡಿದ ಸಂತೋಷ ಕ್ಷಣದಲ್ಲಿಯೇ ದುಃಖದಲ್ಲಿ ಬದಲಾವಣೆಯಾಗಿದೆ. ಯಾಕೆಂದರೆ ಆ ಉದ್ದವಾಗಿ ನಾಲಿಗೆಯನ್ನು ಚಾಚಿ ಬೇಟೆಯಾಡಿದ ನಂತರ, ಬೇಟೆಯಾದ ಹುಳ ಅದೇ ನಾಲಿಗೆಯನ್ನು ಬಲವಾಗಿ ಹಿಡಿದದ್ದು ಬಿಟ್ಟೇ ಇಲ್ಲ. ಸ್ವಲ್ಪ ಕ್ಷಣಗಳಲ್ಲಿ ಆ ಹುಳ ನಾಲಿಗೆಯ ಮುಖಾಂತರ ಕಪ್ಪೆಯನ್ನೇ ಅನಾಮತ್ತಾಗಿ ಮೇಲೆತ್ತಿಕೊಂಡು ಹೋಗುವ ದೃಶ್ಯ ಕಂಡು ಬರುತ್ತದೆ.
ವೀಡಿಯೋ ನೋಡಿ
https://twitter.com/TheFigen_/status/1592447124343775232?t=3S3M6jlLl0RuqZQ6U7XFzQ&s=19
ಈ ವಿಚಿತ್ರ ಬೇಟೆಯ ವಿಡಿಯೋದಲ್ಲಿ ಬೇಟೆಯಾಡಿದ ಪ್ರಾಣಿಯೇ ಇಲ್ಲಿ ಸ್ವತಃ ಬೇಟೆಯಾಗಿದೆ ಎನ್ನಬಹುದು. ಈ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದ್ದು ಲಕ್ಷಾವಧಿ ಜನರು ಇದನ್ನು ವೀಕ್ಷಿಸಿದ್ದಾರೆ. ಮತ್ತು ಅನೇಕರು ಇದನ್ನು ಲೈಕ್ ಸಹ ಮಾಡಿದ್ದಾರೆ. ಜೊತೆಗೆ ಅನೇಕ ನೆಟ್ಟಿಗರು ಈ ತಿರುಗುಬಾಣದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಮಾಡಿದ್ದಾರೆ.