ತಿಳಿದುಕೊಳ್ಳಿ ಹಸು ಮತ್ತು ಎಮ್ಮೆಯ ಹಾಲಿನಲ್ಲಿಯ ವ್ಯತ್ಯಾಸ, ಆರೋಗ್ಯಕ್ಕಾಗಿ ಯಾವುದು ಉತ್ತಮ?

ಹಸುಗೂಸು ಆರು ತಿಂಗಳುಗಳವರೆಗೆ ಬರೀ ಹಾಲಿನ ಮೇಲೆಯೇ ಬದುಕುತ್ತದೆ. ಕಾರಣ ಇದೊಂದು ಸಂಪೂರ್ಣ ಆಹಾರವಾಗಿದೆ ಎಂದು ತಿಳಿಯಲಾಗಿದೆ. ಹಾಗೆಯೇ ಹಾಲಿನಲ್ಲಿ ಆಯುರ್ವೇದಿಕ ಔಷಧೀಯ ತತ್ವಗಳು ಇರುತ್ತವೆ. ಆದ್ದರಿಂದಲೇ ಆಯುರ್ವೇದದ ಡಾಕ್ಟರ್ಸ್ ಗಳು ಔಷಧವನ್ನು ತೆಗೆದುಕೊಳ್ಳುವಾಗ ಸ್ವಲ್ಪ ಬಿಸಿಯಾದ ಹಾಲಿನ ಜೊತೆಗೆ ತೆಗೆದುಕೊಳ್ಳಿ ಎಂದು ಸಲಹೆ ಮಾಡುತ್ತಾರೆ.


ಹಾಲು ಮತ್ತು ಹಾಲಿನಿಂದ ತಯಾರಿಸಲ್ಪಟ್ಟ ಪದಾರ್ಥಗಳನ್ನು ದಿನಂಪ್ರತಿ ಆಹಾರದಲ್ಲಿ ಉಪಯೋಗಿಸುವದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಇನ್ನು ಹಾಲಿನ ಬಗ್ಗೆ ಒಂದು ಪ್ರಶ್ನೆ ಯಾವಾಗಲೂ ಕಾಡುತ್ತದೆ. ಅದೇನೆಂದರೆ, ಯಾವ ಹಾಲು ಒಳ್ಳೆಯದು? ಹಸುವಿನದೊ ಇಲ್ಲ ಎಮ್ಮೆಯದು? ಹಸುವಿನ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ ಫ್ಯಾಟ್ಸ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದೇ ಕಾರಣದಿಂದ ಎಮ್ಮೆಯ ಹಾಲು ಗಟ್ಟಿಯಾಗಿ ಹಾಗೂ ಹಸುವಿನ ಹಾಲು ತೆಳ್ಳಗೆ ಇರುತ್ತದೆ.

ಹಸುವಿನ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ 4 ಪ್ರತಿಶತ ಫ್ಯಾಟ್ಸ್ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಹಸುವಿನ ಹಾಲಿನಲ್ಲಿ ಫ್ಯಾಟ್ಸ್ 3-4 ಪ್ರತಿಶತವಿದ್ದರೆ, ಎಮ್ಮೆಯ ಹಾಲಿನಲ್ಲಿ 7-8 ಪ್ರತಿಶತ ಫ್ಯಾಟ್ಸ್ ಇರುತ್ತದೆ. ಆದ್ದರಿಂದ ಎಮ್ಮೆಯ ಹಾಲಿಗಿಂತ ಹಸುವಿನ ಹಾಲು ಬೇಗ ಪಚನವಾಗುವದು.

ಹಸುವಿನ ಹಾಲು ತೆಳ್ಳಗಿರುತ್ತದೆ, ಇದರಲ್ಲಿ ಸುಮಾರು 88 ಪ್ರತಿಶತ ನೀರು ಇರುತ್ತದೆ. ಇದೇ ಕಾರಣದಿಂದ ಹಸುವಿನ ಹಾಲು ಪಚನಕ್ಕೆ ಸರಳವಾಗಿರುವದು. 100 ml ಹಸುವಿನ ಹಾಲಿನಲ್ಲಿ 88 ಪ್ರತಿಶತ ನೀರು ಇದ್ದರೆ, ಎಮ್ಮೆಯ ಹಾಲಿನಲ್ಲಿ ಈ ಪ್ರಮಾಣ 70 ಪ್ರತಿಶತ ಇರುತ್ತದೆ.

ದೇಹದಲ್ಲಿ ಪ್ರೊಟಿನ್ ದ ಕಡಿಮೆ ಇದ್ದರೆ ಎಮ್ಮೆಯ ಹಾಲು ಕುಡಿಯಬೇಕು. ಹಸುವಿನ ಹಾಲಿನ ತುಲನೆಯಲ್ಲಿ ಎಮ್ಮೆಯ ಹಾಲಿನಲ್ಲಿ 10 ರಿಂದ 11 ಪ್ರತಿಶತ ಅಧಿಕ ಪ್ರೊಟೀನ್ ಇರುತ್ತದೆ.
ಪ್ರೊಟೀನ್ ನಿಂದಾಗಿ ಎಮ್ಮೆಯ ಹಾಲು ಹೀಟ್ ರೇಜಿಸ್ಟಂಟ್ ಇರುತ್ತದೆ. ಆದ್ದರಿಂದ ರೋಗಿಗೆ, ವೃದ್ಧರಿಗೆ ಹಾಗೂ ಹಸುಗೂಸಿಗೆ ಎಮ್ಮೆಯ ಹಾಲು ಕೊಡಬಾರದು.

ಎಮ್ಮೆ ಮತ್ತು ಹಸುವಿನ ಹಾಲಿನಲ್ಲಿ ಇನ್ನೊಂದು ಮಹತ್ವದ ವ್ಯತ್ಯಾಸವೆಂದರೆ ಕೊಲೆಸ್ಟ್ರಾಲ್. ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ. ಆದ್ದರಿಂದ ಎಮ್ಮೆಯ ಹಾಲು ಹಾಯ್ ಬಿಪಿ, ಕೊಲೆಸ್ಟ್ರಾಲ್ ಮತ್ತು ಕಿಡ್ನಿ ಸಂಬಂಧಿತ ರೋಗಿಗಳಿಗೆ ಕುಡಿಯಲು ಅವಶ್ಯವಾಗಿ ಕೊಡಬೇಕು.

ಯಾವ ಹಾಲಿನಲ್ಲಿರುತ್ತದೆ ಅಧಿಕ ಕ್ಯಾಲರಿಜ್ – ಎಮ್ಮೆಯ ಹಾಲಿನಲ್ಲಿ ಪ್ರೊಟೀನ್ ಮತ್ತು ಫ್ಯಾಟ್ಸ್ ಹೆಚ್ಚಿಗಿರುತ್ತವೆ. ಆದರೆ ಹಸುವಿನ ಹಾಲಿನಲ್ಲಿ ಇವು ಕಡಿಮೆ ಇರುತ್ತವೆ. ಒಂದು ಕಪ್ ಎಮ್ಮೆಯ ಹಾಲಿನಲ್ಲಿ ನಮಗೆ 273 ಕ್ಯಾಲರಿಜ್ ಸಿಗುತ್ತದೆ. ಅದೇ ಒಂದು ಕಪ್ ಹಸುವಿನ ಹಾಲಿನಲ್ಲಿ 148 ಕ್ಯಾಲರಿಜ್ ದೊರೆಯುತ್ತದೆ.

ಎಮ್ಮೆಯ ಹಾಲು ಕುಡಿದ ನಂತರ ನಮಗೆ ಶಾಂತವಾಗಿ ನಿದ್ರೆ ಹತ್ತುವದಿಲ್ಲ. ಅದೇ ಮಲಗುವ ಮೊದಲು ಹಸುವಿನ ಹಾಲು ಕುಡಿದರೆ ಒಳ್ಳೆಯದಾಗಿ ನಿದ್ರೆ ಆವರಿಸುವದು. ಎಮ್ಮೆಯ ಹಾಲಿನಿಂದ ತಯಾರಿಸಿದ ಪನೀರ್, ಮೊಸರು, ಕುಲ್ಫಿ, ತುಪ್ಪ ಇವು ರುಚಿಕರವಾಗಿರುತ್ತವೆ. ಆದರೆ ಹಸುವಿನ ಹಾಲಿನಿಂದ ತಯಾರಿಸಿದ ಈ ವಸ್ತುಗಳು ತೂಕ ಕಡಿಮೆ ಮಾಡಿಕೊಳ್ಳಲು ಉಪಯೋಗವಾಗುವದು.

ಪೊಟ್ಯಾಶಿಯಂ ಸೋಡಿಯಂ – ಕ್ಯಾಲ್ಶಿಯಮ್ ಇವುಗಳ ಪ್ರಮಾಣ ಎಮ್ಮೆಯ ಹಾಲಿನಲ್ಲಿ ಅಧಿಕವಾಗಿರುತ್ತದೆ. ಹಸುವಿನ ಹಾಲಿನಲ್ಲಿ ಈ ಪ್ರಮಾಣಗಳು ಕಡಿಮೆಯಾಗಿರುತ್ತವೆ. ಈ ಕಾರಣದಿಂದ ಹಸುವಿನ ಹಾಲು ಚಿಕ್ಕ ಮಕ್ಕಳಿಗೆ ಮತ್ತು ಬ್ಲಡ್ ಪ್ರೆಶರ್ ಇರುವ ವ್ಯಕ್ತಿಗಳಿಗೆ ಲಾಭದಾಯವಾಗಿದೆ.

ಹಸುವಿನ ಹಾಲು ಪಿತ್ತನಾಶಕ ಮತ್ತು ಪಚನಕ್ರಿಯೆಗೆ ಸುಧಾರಣೆ ಮಾಡುತ್ತದೆ. ಎಮ್ಮೆಯ ಹಾಲು ಪಚನಕ್ಕೆ ಭಾರವಾಗಿರುತ್ತದೆ. ಹೀಗಾಗಿ ಇದರಿಂದ ತಯಾರಾದ ತುಪ್ಪ ಕಫ್ ಮತ್ತು ಪಿತ್ತಕಾರಕ ಇರುತ್ತದೆ. ಹಾಗಾದರೆ ಇಂದಿನಿಂದ ಹಸುವಿನ ಹಾಲು ಕುಡಿಯಲು ಪ್ರಾರಂಭಿಸಿ.

ಆದ್ದರಿಂದ ನೀವು ಯಾವ ಹಾಲನ್ನು ಕುಡಿಯಬೇಕು ಎಂದು ನಿರ್ಧರಿಸುವದು ನಿಮಗೆ ಬಿಟ್ಟದ್ದು. ಯಾವ ಹಾಲು ಕುಡಿದರೆ ಯಾರಿಗೆ ಲಾಭ ಯಾರಿಗೆ ಹಾನಿ ತಿಳಿದುಕೊಂಡು ನೀವೇ ಡಿಸೈಡ್ ಮಾಡಬಹುದು. ನಿಮಗೆ ಒಂದು ವೇಳೆ ಯಾವುದೇ ನೋವುಗಳಿಲ್ಲದೆ ಇದ್ದರೆ ತೂಕ ಸಹಿತ ಕಡಿಮೆ ಇದ್ದರೆ ಎಮ್ಮೆಯ ಹಾಲು ಕುಡಿಯುವದು ಲಾಭದಾಯಕ.