ತುಂಬಿ ಹರಿಯುತ್ತಿರುವ ಪ್ರವಾಹದಲ್ಲಿ ಬೈಕ್ ಹಾಕಲೋ ಬೇಡವೋ? ಪೇಚಾಟಕ್ಕೆ ಸಿಲುಕಿದ ಬೈಕ್ ಸವಾರ ಕೊನೆಗೆ ಹಾಕಿಯೇ ಬಿಟ್ಟ! ಮುಂದೇನು?
ಸದ್ಯ ಎಲ್ಲೆಡೆಯೋ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ಮಳೆಯಲ್ಲಿಯ ಅನೇಕ ವಿಶೇಷ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸರಕಾರ ಮತ್ತು ಅನೇಕ ಸಂಘ-ಸಂಸ್ಥೆಗಳು ಜನರಿಗೆ ಮುಂಜಾಗ್ರತೆಯನ್ನು ತೆಗೆದುಕೊಳ್ಳಲು ವಿವಿಧ ರೀತಿಯಲ್ಲಿ ಸೂಚನೆಗಳನ್ನು ನೀಡುತ್ತಿವೆ. ಆದರೂ ಕೆಲವು ಮಂಗ ಜನರು ಯಾರ ಮಾತನ್ನು ಕೇಳದೆ ನೀರಿನಲ್ಲಿ ವಿವಿಧ ರೀತಿಯ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಮತ್ತು ಎಷ್ಟೋ ಜನರು ತಮ್ಮ ಜೀವಕ್ಕೆ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಡೇರಿಂಗ್ ತೋರಿಸಿದ ಬೈಕ್ ಸವಾರನ ವಿಡಿಯೋ ಒಂದು ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಸೇತುವೆಯ ಮೇಲಿನಿಂದ ರಭಸದಲ್ಲಿ ನೀರಿನ ಪ್ರವಾಹ ಹರಿಯುತ್ತಿರುವದು ಕಂಡು ಬರುತ್ತಿದೆ. ನೀರಿನ ಆಚೆಗೆ ಬೈಕ್ ತೆಗೆದುಕೊಂಡು ಒಬ್ಬ ಬೈಕ್ ಸವಾರ ಈಚೆಗೆ ಬರಲು ಮೀನ ಮೇಷ ಎಣಿಸುತ್ತ ನಿಂತಿದ್ದಾನೆ. ನೀರಿನ ಪ್ರವಾಹವು ವೇಗವಾಗಿ ಹರಿಯುತ್ತಿರುವದು ಕಂಡುಬರುತ್ತಿದೆ. ಹೀಗಾಗಿ ಅದನ್ನು ನೋಡಿದ ಬೈಕ್ ಸವಾರ ಮೊದಲು ಸ್ವಲ್ಪ ಎದೆಗುಂದಿದ್ದಾನೆ. ನಂತರ ಬೈಕ್ ಸವಾರ ಬೈಕ್ ಮೇಲೆ ಕುಳಿತು ದಾಟಿ ಬರುವ ಸಾಹಸಕ್ಕೆ ಕೈ ಹಾಕುತ್ತಾನೆ. ವಿಡಿಯೋ ನೋಡುವಾಗ ನೋಡುಗರ ಮನದಲ್ಲಿ ಏನಾದರೂ ಅನಾಹುತ ಘಟನೆ ನಡೆದೇ ಹೋಗುತ್ತದೆ ಎನ್ನುವ ಶಂಕೆ ಮನದಲ್ಲಿ ಮೂಡುತ್ತದೆ. ಅದೃಷ್ಟವಶಾತ್ ಆ ರೀತಿಯ ಯಾವ ಘಟನೆಯು ಅಲ್ಲಿ ನಡೆಯುವುದಿಲ್ಲ, ಮತ್ತು ಆತ ಧೈರ್ಯದಿಂದ ನೀರಿನಲ್ಲಿಂದ ಹಾಯ್ದು ಇತ್ತ ಕಡೆಗೆ ಬಂದು ತಲುಪುತ್ತಾನೆ. ವಿಡಿಯೋ ನೋಡುವಾಗ ಮಾತ್ರ ಉಸಿರು ಬಿಗಿ ಹಿಡಿದು ನೋಡಿದ ಅನುಭವ ಆಗುತ್ತದೆ.
ವಿಡಿಯೋ ನೋಡಿ
ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 2 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಹಾಗೂ 92 ಸಾವಿರಕ್ಕೂ ಹೆಚ್ಚಿಗೆ ಲೈಕ್ ಗಳನ್ನು ಪಡೆದಿದೆ.