ತುಂಬು ಕಲ್ಯಾಣ ಮಂಟಪದಲ್ಲಿ ಮಗಳೇ ತಂದೆಗೆ ವರದಕ್ಷಣೆ ಬೇಡಿದಾಗ…. ತಂದೆ ಮಾಡಿದ ಕೆಲಸ ನೋಡಿ….!
ಸದ್ಯ ಒಂದು ಮದುವೆ ವರದಕ್ಷಿಣೆಯ ಸಲುವಾಗಿ ತುಂಬಾ ಚರ್ಚೆಯಲ್ಲಿದೆ. ರಾಜಸ್ಥಾನದ ಬಾಡಮೇರ್ ನಲ್ಲಿ ನಡೆದ ಈ ಮದುವೆಯಲ್ಲಿ ಮದುಮಗಳೇ ತನ್ನ ತಂದೆಗೆ ವರದಕ್ಷಿಣೆ ಬೇಡಿದ ಕಾರಣ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಮದುವೆಯ ಎಲ್ಲ ಕಾರ್ಯಕಲಾಪಗಳು ನೆರವೇರಿದ ನಂತರ ನಡೆದಿದೆ. ಮದುವೆ ಮುಗಿದು ಮದುಮಗಳು ತನ್ನ ಗಂಡನ ಜೊತೆಗೆ ಹೊರಡುವಾಗ ಈ ಕೆಲಸವನ್ನು ಮಾಡಿದಳು. ಇದರ ಹಿಂದಿನ ಆಕೆಯ ಉದ್ದೇಶವನ್ನು ತಿಳಿದಾಗ ಮಾತ್ರ ನಿಜಕ್ಕೂ ಆಕೆಯ ಮೇಲೆ ಎಲ್ಲರೂ ಹೆಮ್ಮೆಪಡುವರು. ಮತ್ತು ಈ ವಧು ಇನ್ನೊಬ್ಬರಿಗೆ ಮಾದರಿಯಾದಳು.
ಮದುವೆಯಾಗುವ ಮದುಮಗಳ ಹೆಸರು ಅಂಜಲಿ ಕಂವರ್. ಮದುವೆಯಾದ ನಂತರ ತನ್ನ ತಂದೆಯ ಕೈಯಲ್ಲಿ ಒಂದು ಲೆಟರ್ ಇಟ್ಟಳು. ಆ ಲೆಟರ್ ನಲ್ಲಿ ಬರೆದ ಸಾರಾಂಶವನ್ನು ತಿಳಿದು ಅಲ್ಲಿದ್ದವರೆಲ್ಲರೂ ಅಭಿಮಾನದಿಂದ ಚಪ್ಪಾಳೆ ತಟ್ಟಿದರು. ಮಗಳು ತಂದೆಗೆ ವರದಕ್ಷಿಣೆ ಬೇಡಿದಾಗ ಉಪಸ್ಥಿತರು ಚಪ್ಪಾಳೆ ಏಕೆ ತಟ್ಟಿದರು ಎಂಬ ಪ್ರಶ್ನೆ ನಿರ್ಮಾಣವಾಗುವುದು ಸಹಜ. ವಧು ತನ್ನ ತಂದೆಗೆ ವರದಕ್ಷಿಣೆಯನ್ನು ಬೇಡಿದಳು. ಆದರೆ ಆ ವರದಕ್ಷಿಣೆಯನ್ನು ತನ್ನ ಗಂಡನ ಮನೆಗೆ ತೆಗೆದುಕೊಂಡು ಹೋಗುವ ಆಸೆಯಿಂದಲ್ಲ. ಅದರ ಹಿಂದಿನ ಉದ್ದೇಶ ತಿಳಿದರೆ ನಿಮಗೂ ಆಕೆಯ ಬಗ್ಗೆ ಹೆಮ್ಮೆ ಎನಿಸುವುದು.
ಹುಡುಗಿಯರ ಸಲುವಾಗಿ ನಿರ್ಮಿಸುತ್ತಿರುವ ಹಾಸ್ಟೆಲ್ ಒಂದನ್ನು ಪರಿಪೂರ್ಣವಾಗಿ ಮಾಡುವ ಸಲುವಾಗಿ ಅಂಜಲಿ ತನ್ನ ತಂದೆಯ ಕಡೆಗೆ ವರದಕ್ಷಿಣೆಯ ರೂಪದಲ್ಲಿ ಹಣ ಕೇಳಿದ್ದಳು. ಮುದ್ದು ಮಗಳ ಆಸೆಯನ್ನು ಪೂರ್ಣ ಮಾಡುವ ಸಲುವಾಗಿ ತಂದೆಯಾದ ಕಿಶೋರ್ ಸಿಂಹ ಮಗಳ ಕೈಯಲ್ಲಿ ಸಹಿ ಮಾಡಿ ನಿನಗೆ ಎಷ್ಟು ಹಣ ಬೇಕು ಅಷ್ಟನ್ನು ಬರೆದುಕೋ ಎಂದು ಬ್ಲಾಂಕ್ ಚೆಕ್ ನೀಡಿದನು. ಅಂಜಲಿ ಯು ಗರ್ಲ್ಸ್ ಹಾಸ್ಟೆಲ್ ಸಲುವಾಗಿ 75 ಲಕ್ಷ ರೂಪಾಯಿಗಳ ಡಿಮಾಂಡ್ ಮಾಡಿದಳು.

ಅಂಜಲಿಯ ತಂದೆಯು ಹುಡುಗಿಯರಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಒಂದು ಕೋಟಿ ರೂಪಾಯಿಗಳನ್ನು ನೀಡಿದ್ದರು. ಈಗ ಉಳಿದ ಕೆಲಸ ಕಂಪ್ಲೀಟ್ ಮಾಡುವ ಸಲುವಾಗಿ ಇನ್ನು ಎಪ್ಪತ್ತೈದು ಲಕ್ಷ ರೂಪಾಯಿಗಳ ಅವಶ್ಯಕತೆ ಇತ್ತು. ಮಗಳ ಇಚ್ಛೆಯಂತೆ ಅದನ್ನು ಪೂರೈಸಿದರು.
ಹುಡುಗಿಯರ ಶಿಕ್ಷಣದ ಬಗ್ಗೆ ಈಗಲೂ ಕೆಲವರ ವಿಚಾರಗಳು ಬದಲಾಗಿಲ್ಲ. ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕಾಗಿ ಅಂಜಲಿಯ ತಂದೆಗೆ ಇನ್ನೊಬ್ಬರ ಚುಚ್ಚು ಮಾತುಗಳನ್ನು ಕೇಳಬೇಕಾಗಿತ್ತು. ಇಷ್ಟಾದರೂ ತಂದೆಯು ಮಗಳಿಗೆ ಹೆಚ್ಚಿನ ಶಿಕ್ಷಣವನ್ನು ನೀಡಿದರು. ಸಮಾಜದ ಇತರ ಹುಡುಗಿಯರಿಗೂ ಸಹ ಪಟ್ಟಣದಲ್ಲಿ ಶಿಕ್ಷಣ ಸರಿಯಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಹುಡುಗಿಯರಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ.
ಅಂಜಲಿಯ ಆಗಮನ ನಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮಿಯ ಆಗಮನವಾಗಿದೆ ಮತ್ತು ನಮ್ಮ ರಜಪೂತ್ ಸಮಾಜದ ಜನರು ಯಾವುದೇ ಲಗ್ನ ಸಮಾರಂಭಗಳಲ್ಲಿ ಲಕ್ಷಾವಧಿ, ಕೋಟ್ಯಾವಧಿ ರೂಪಾಯಿಗಳನ್ನು ವ್ಯರ್ಥವಾಗಿ ಖರ್ಚು ಮಾಡುತ್ತಾರೆ. ಆ ರೀತಿ ಮಾಡದೆ ಸಮಾಜಕ್ಕಾಗಿ ಈ ರೀತಿ ಯೋಗ್ಯ ಉಪಯೋಗ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಅಂಜಲಿ ಗಂಡನ ಮನೆಯವರು ತಮ್ಮ ಭಾವನೆ ವ್ಯಕ್ತ ಮಾಡಿದ್ದಾರೆ.