ತೋಟದಲ್ಲಿ ರೈತ ಪತ್ನಿಯ ಜೊತೆಗೆ ಸಖತ್ ಸ್ಟೈಲ್ ನಲ್ಲಿ ಹಾಡಿದನು ಲತಾ ಮಂಗೇಶ್ಕರ್ ಹಾಡು, ವಿಡಿಯೋ ವೈರಲ್!
ಪಂಜಾಬ್ ಮೂಲದ ರೈತರ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ರೈತ ತನ್ನ ಪತ್ನಿಯೊಂದಿಗೆ 1962 ರಲ್ಲಿಯ ‘ಪ್ರೊಫೆಸರ್’ ಚಿತ್ರದ ಸುಪ್ರಸಿದ್ಧ ಹಾಡು ‘ ಆವಾಜ್ ದೇಕೆ ಹಮೆ ತುಮ್ ಬುಲಾಓ’ ಈ ಹಾಡು ಹಾಡುವದನ್ನು ಕಾಣಬಹುದು. ಈ ಹಾಡಿನಲ್ಲಿ ಪತಿ-ಪತ್ನಿಯರ ಹಾಡುವ ಶೈಲಿ ನೋಡಲು ತುಂಬಾ ಸುಂದರವಾಗಿದೆ. ಪತಿ-ಪತ್ನಿ ಇಬ್ಬರು ಮೊಹಮ್ಮದ್ ರಫಿ ಮತ್ತು ಲತಾ ಮಂಗೇಶಕರ್ ಅವರ ಹಾಡನ್ನು ತಮ್ಮ ಶೈಲಿಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೋಗೆ ಟ್ವಿಟ್ಟರ್ ನಲ್ಲಿ ತುಂಬಾ ಜನಪ್ರಿಯತೆ ಸಿಗುತ್ತಿದೆ. ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಲಾಲ್‌ಚಂದ್ ಅವರು ತಮ್ಮ ಕುಟುಂಬದೊಂದಿಗೆ ರಾಜಸ್ಥಾನಕ್ಕೆ ಹೋದಾಗ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದೇವೆ ಎಂದು ಹೇಳಿದರು. ಅದೇ ಸಂದರ್ಭದಲ್ಲಿ ಅವರು ಪತ್ನಿಯೊಂದಿಗೆ ಗಣೇಶಗಢ ಊರಿನಲ್ಲಿಯ ಒಂದು ಹೊಲದಲ್ಲಿ ಹಾಡುವ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದರು.
ಈ ವಿಡಿಯೋವನ್ನು ಸೋಮವಾರದಂದು ಟ್ವಿಟ್ಟರ್ ಯೂಜರ್ ಜಿತೇಂದ್ರ ಎಸ್ ಜೋರಾವತ್ ಎಂಬವರು ಶೇರ್ ಮಾಡಿದ್ದಾರೆ. ಅದರ ಜೊತೆಗೆ ಈ ವಿಡಿಯೋ ಅವರಿಗೆ ವಾಟ್ಸಾಪ್ ಮೂಲಕ ಬಂದಿದೆ ಎಂದು ಸಹ ಹೇಳಿದ್ದಾರೆ. ಈ ವಿಡಿಯೋ ವನ್ನು ಶೇರ್ ಮಾಡುತ್ತ ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ, ‘ ನಮ್ಮ ರೈತ ಸಹೋದರ ಬಿಡುವಾದ ಸಮಯದಲ್ಲಿ ಈ ಪ್ರಕಾರ ಜೀವನದ ಆನಂದ ತಗೆದುಕೊಳ್ಳುತ್ತಾರೆ…ಈ ಪ್ರಕಾರದ ಜೋಡಿ ತುಂಬಾ ತುಂಬಾ ಅಪರೂಪವಾಗಿದೆ.’
फुर्सत के क्षणो मे किसान भाई खेतो मे इस तरह मस्ती करते हैं😅
— Jitendra S Jorawat (@sighspeaks) June 22, 2020
ऐक बात काबिले गौर हैं कि माननिया @mangeshkarlata दीदी के युगल गाने को जिस तरह निभाया है,बहुत प्रशंसनीय है,
आप भी देखिए..😇🙋♂️@Singer_kaushiki @desi_thug1@VertigoWarrior@AarTee03 @SureshM46 @pooran775@Anilthesoldier pic.twitter.com/PMjvJs99CS
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಕೂಡಲೇ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಇದುವರೆಗೆ 38 ಸಾವಿರಕ್ಕಿಂತ ಹೆಚ್ಚಿನ ವೀಕ್ಷಣೆ ಪಡೆದಿದೆ. ಅಲ್ಲದೆ ಒಂದು ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಮತ್ತು 100 ಕ್ಕಿಂತ ಹೆಚ್ಚು ರಿಟ್ವಿಟ್ ಮತ್ತು ಕಾಮೆಂಟ್ಸ್ಗಳು ಬಂದಿವೆ.
Made my morning .. how beautifully they sing.. with nuances, soulful rendition .. they are enjoying and so am i .. i am feeling overwhelmed … ❤️❤️❤️❤️❤️ https://t.co/oO6HjQpJmN
— rekha bhardwaj (@rekha_bhardwaj) June 23, 2020
ಈ ವಿಡಿಯೋದ ಜನಪ್ರಿಯತೆ ನೀವು ಸಹ ಅಂದಾಜಿಸಬಹುದು ಏಕೆಂದರೆ ಈ ಹಾಡಿನ ಪ್ಲೇಬ್ಯಾಕ್ ಸಿಂಗರ್ ರೇಖಾ ಭಾರದ್ವಾಜ್ ಅವರು ಕಾಮೆಂಟ್ ನಲ್ಲಿ ‘ ಈ ವಿಡಿಯೋವನ್ನು ನೋಡಿದ ಕೂಡಲೇ ನನಗೆ ಬೆಳಗಿನ ನೆನಪಾಯಿತು. ಈ ವಿಡಿಯೋ ಬಹಳಷ್ಟು ಸುಂದರವಾಗಿದೆ’ ರಾಷ್ಟ್ರೀಯ ಪುರಸ್ಕಾರ ವಿಜೇತರಾದ ರೇಖಾ ಭಾರದ್ವಾಜ್ ಅವರು ಮುಂದೆ ಬರೆಯುತ್ತಾರೆ, ‘ಈ ವಿಡಿಯೋವನ್ನು ನೋಡಿ ನಾನು ತುಂಬಾ ಭಾವುಕನಾದೇನು.'”
ಈ ವಿಡಿಯೋ ಕುರಿತು ‘ ಅತ್ಯಂತ ಸುಂದರವಾದ ವಿಡಿಯೋ ಇದಾಗಿದೆ.’ ಎಂದು ಸಿಂಗರ್ ಮೋಹಿತ್ ಚೌಹಾಣ್ ಕಾಮೆಂಟ್ ಮಾಡಿದ್ದಾರೆ.
Singing in the fields…they can feel it.. beautiful. https://t.co/hVGCbSgNDn
— Mohit Chauhan (@_MohitChauhan) June 23, 2020
ಆಕ್ಟರ್ ಮೊಹಮ್ಮದ್ ಜಿಶಾನ್ ಅಯ್ಯುಬ್ ಅವರು ಈ ವಿಡಿಯೋ ನೋಡಿ ಕಾಮೆಂಟ್ ನಲ್ಲಿ ತಮ್ಮ ಫಾಲೋರ್ಸ್ ಗಳಿಗೆ ‘ ಪ್ಲೀಜ್ ಈ ವಿಡಿಯೋ ನೋಡಿ ಇದರಿಂದ ನಿಮ್ಮ ಮುಖದಲ್ಲಿ ಮಂದಹಾಸ ಬರುವದು” ಎಂದು ಬರೆದಿದ್ದಾರೆ.
प्यारी सी मुस्कान के लिए ये गाना ज़रूर सुनें और देखें!!! 😊😊 https://t.co/xO0mqKZk6N
— Mohd. Zeeshan Ayyub (@Mdzeeshanayyub) June 23, 2020
ಈ ವಿಡಿಯೋನೋಡಿ ಒಬ್ಬ ಯೂಜರ್ ಬರೆದಿದ್ದಾನೆ, ‘ಭಾರತಕ್ಕೆ ಹೊಸ ಪ್ರತಿಭೆ ಸಿಕ್ಕಿದೆ’. ಇನ್ನೊಬ್ಬರು ‘ ಧ್ವನಿ ಬಹಳಷ್ಟು ಸುಂದರವಾಗಿದೆ.” ಎಂದು ಬರೆದಿದ್ದಾರೆ. ಕಳೆದ ವರ್ಷ ಪಶ್ಚಿಮ ಬಂಗಾಳದ ರೈಲ್ವೆ ಸ್ಟೇಷನನಲ್ಲಿ ಭಿಕ್ಷೆ ಬೇಡುತ್ತ ಲತಾ ಮಂಗೇಶಕರ್ ಅವರ ಹಾಡು ಹಾಡುವ ಒಬ್ಬ ಮಹಿಳೆಯ ವಿಡಿಯೋ ತುಂಬಾ ವೈರಲ್ ಆಗಿತ್ತು. ತದನಂತರ ಆ ವಿಡಿಯೋದಲ್ಲಿ ಹಾಡಿರುವ ಮಹಿಳೆ ರಾನು ಮಂಡಲ್ ಆಗಿದ್ದರು. ತದನಂತರ ರಾನು ಮಂಡಲ ಅವರು ತಮ್ಮ ಹಾಡುಗಳಿಂದ ಇಡೀ ದೇಶಕ್ಕೆ ಪರಿಚಯವಾದರು ಅಷ್ಟೇ ಅಲ್ಲ ಅವರು ಹಲವಾರು ಹಾಡುಗಳು ಸಹ ಹಾಡಿದ್ದಾರೆ.