ದಪ್ಪಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಇವೆ ಸಾಕಷ್ಟು ಲಾಭಗಳು! ಸಮೀಕ್ಷೆಯಲ್ಲಿ ತಿಳಿದುಬಂತು ಅಚ್ಚರಿ ಮೂಡಿಸುವ ಸಂಗತಿಗಳು!

ಬಹುತೇಕ ಯುವಕರಿಗೆ ಇಷ್ಟವಾಗುವುದು ಪರ್ಫೆಕ್ಟ್ ಫಿಗರ್ ಇರುವ ಹುಡುಗಿಯರು. ದಪ್ಪಗಿರುವ ಹುಡುಗಿಯರು ಅಷ್ಟಾಗಿ ಹುಡುಗರಿಗೆ ಹಿಡಿಸುವುದಿಲ್ಲ ಅಲ್ಲದೇ ಸಣ್ಣಗೆ ಒಳ್ಳೆ ಫಿಗರ್ ಇರುವ ಹುಡುಗಿಯರ ಕಡೆಗೆ ಅವರ ದೃಷ್ಟಿ ಮತ್ತೆ ಮತ್ತೆ ಹೋಗುವುದು ಕೂಡಾ ಸಹಜ. ಹಾಗೆಂದ ಮಾತ್ರಕ್ಕೆ ಎಲ್ಲಾ ಯುವಕರಿಗೆ ಕೂಡಾ ಇಂತಹ ಹುಡುಗಿಯರೇ ಇಷ್ಟವಾಗುವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಇದೆಲ್ಲಾ ಅವರವರ ಮನಸ್ಸಿನ ಭಾವನೆ ಹಾಗೂ ಅವರವರ ಆಯ್ಕೆ. ಕೆಲವರಿಗೆ ದಪ್ಪಗಿರುವ ಹುಡುಗಿಯರ ಮೇಲೂ ಕ್ರಷ್ ಆಗುವುದು ಸಹಜ. ಆದರೆ ಸಮೀಕ್ಷೆಯೊಂದರ ಪ್ರಕಾರ ದಪ್ಪಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಸಾಕಷ್ಟು ಲಾಭಗಳಿವೆ ಎನ್ನಲಾಗಿದೆ. ಹಾಗಾದರೆ ಏನು ಆ ಲಾಭಗಳು ಎನ್ನುವುದನ್ನು ನಾವು ಕೂಡಾ ತಿಳಿಯೋಣ ಬನ್ನಿ.

ದಪ್ಪಗಿರುವ ಹುಡುಗಿಯರಿಗೆ ವಿವಾಹದ ನಂತರ ತನ್ನ ಪತಿ ಹಾಗೂ ಪತಿಯ ಪರಿವಾರ ಬಹಳ ಪ್ರಮುಖ ಎನಿಸುತ್ತದೆ. ಈ ಹುಡುಗಿಯರು ತಮ್ಮ ಪತಿಯನ್ನು ಬಹಳ ಗೌರವದಿಂದ ಕಾಣುವುದು ಮಾತ್ರವೇ ಅಲ್ಲದೇ ಪತಿಯ ಕುಟುಂಬದವರ ಬಗ್ಗೆ ಕೂಡಾ ಅಂದರೆ ಅತ್ತೆ , ಮಾವನ ಬಗ್ಗೆ ಕೂಡಾ ಸಾಕಷ್ಟು ಕಾಳಜಿಯನ್ನು ವಹಿಸಿ, ಬಹಳ ಗಮನವಿಟ್ಟು ಅವರ ಆರೈಕೆಯನ್ನು ಮಾಡುತ್ತಾರೆ ಎನ್ನಲಾಗಿದೆ. ದಪ್ಪಗಿರುವ ಹುಡುಗಿಯರು ಮದುವೆಯ ನಂತರ ಪ್ರತಿದಿನ ಕೂಡಾ ತನ್ನ ಪತಿ ಹಾಗೂ ಕುಟುಂಬವನ್ನು ಸಂತೋಷವಾಗಿ ಇಡಲು ನಿರಂತರವಾಗಿ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ ಎಂದು ಹೇಳುತ್ತದೆ ಸಮೀಕ್ಷೆ.

ಬಗೆ ಬಗೆಯ ಊಟ ತಿಂಡಿಯ ತಿನ್ನುವ ಬಗ್ಗೆ ಹೆಚ್ಚು ಆಸಕ್ತಿ ಇರುವವರು ದಪ್ಪಗಿರುವ ಹುಡುಗಿಯರನ್ನು ಮದುವೆಯಾಗುವುದು ಒಳ್ಳೆಯದು. ಏಕೆಂದರೆ ಈ ಹುಡುಗಿಯರು ಕೂಡಾ ತಿನ್ನುವ ವಿಚಾರದಲ್ಲಿ ಸ್ವಲ್ಪ ಹೆಚ್ಚು ಆಸಕ್ತಿ ತೋರುತ್ತಾರೆ. ಅದಕ್ಕೆ ಪತಿಯ ಆಸಕ್ತಿಯನ್ನು ಗಮನಿಸಿ ಅವರಿಗೆ ಬಗೆ ಬಗೆಯ ಹೊಸ ರುಚಿಯ ತಿಂಡಿ ಗಳನ್ನು ಮಾಡಿ ಕೊಡಲು ಅವರು ಹೆಚ್ಚು ಗಮನವನ್ನು ವಹಿಸುತ್ತಾರೆ. ಅಲ್ಲದೇ ಈ ಹುಡುಗಿಯರು ತಮ್ಮ ಪತಿಗೆ ಊಟ ಉಪಹಾರ ವಿಚಾರದಲ್ಲಿ ಬಹಳ ಚೆನ್ನಾಗಿ ಜೊತೆಯಾಗಿರುತ್ತಾರೆ. ಮದುವೆಯ ನಂತರ ಸಹಜವಾಗಿಯೇ ಹೆಣ್ಣು ಮಕ್ಕಳ ಜವಾಬ್ದಾರಿಗಳು ಹೆಚ್ಚುತ್ತವೆ. ತವರು ಮನೆಯಲ್ಲಿ ಹೇಗೆ ಇದ್ದರೂ, ಗಂಡನ ಮನೆಯಲ್ಲಿ ಮಾತ್ರ ಜವಾಬ್ದಾರಿಯಿಂದ ನಡೆದುಕೊಳ್ಳಲೇ ಬೇಕಾಗುವುದು.

ಅಲ್ಲದೇ ಪತಿಯ ಮನೆಯಲ್ಲಿ ಜವಾಬ್ದಾರಿಗಳ ಜೊತೆಗೆ ಅನೇಕ ಕೆಲಸಗಳನ್ನು ಕೂಡಾ ಮಾಡಬೇಕಾಗುವುದು. ಸಮೀಕ್ಷೆಯ ಅನ್ವಯ ಸಣ್ಣಗಿರುವ ಹುಡುಗಿಯರಿಗಿಂತ ದಪ್ಪಗಿನ ಹುಡುಗಿಯರು ಮದುವೆಯ ನಂತರ ಈ ಜವಾಬ್ದಾರಿಗಳನ್ನು ಬಹಳ ಚೆನ್ನಾಗಿ, ತಾಳ್ಮೆಯಿಂದ ನಿಭಾಯಿಸುತ್ತಾರೆ. ಪರಿಸ್ಥಿತಿಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಎಲ್ಲವನ್ನೂ ನಿಭಾಯಿಸುತ್ತಾ ತನ್ನ ಸುತ್ತ ಮುತ್ತಲಿನವರನ್ನು ಸಂತೋಷವಾಗಿ ಇಡುವ ಪ್ರಯತ್ನವನ್ನು ಅವರು ಮಾಡುವರು.

ಸಣ್ಣಗಿರುವ ಹುಡುಗಿಯರು ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ ಎಂದು ನಾವು ಅಂದು ಕೊಳ್ಳಬಹುದು. ‌ಆದರೆ ವಾಸ್ತವವಾಗಿ ಸಮೀಕ್ಷೆಯ ಪ್ರಕಾರ ಇದು ನಿಜವಲ್ಲ. ದಪ್ಪಗಿರುವ ಹುಡುಗಿಯರು ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಸಣ್ಣಗಿರುವ ಹುಡುಗಿಯರು ಮನೆಯಲ್ಲಿ ಕೆಲವು ಕೆಲಸಗಳನ್ನು ಮಾಡಿದ ಕೂಡಲೇ ಆಯಾಸ ಪಡುತ್ತಾರೆ. ಆದರೆ ದಪ್ಪಗಿರುವ ಹುಡುಗಿಯರು ಸದಾ ಸಕ್ರಿಯವಾಗಿ ಇರುವುದು ಮಾತ್ರವೇ ಅಲ್ಲದೇ ಅವರು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ, ಸುಲಭವಾಗಿ ಮಾಡಿ ಮುಗಿಸುವುದರಿಂದ ಸದಾ ಉತ್ಸಾಹದಿಂದ ಇರುತ್ತಾರೆ.

ಹೀಗೆ ಸಮೀಕ್ಷೆಯ ಪ್ರಕಾರ ದಪ್ಪಗಿರುವ ಹುಡುಗಿಯರಲ್ಲಿ ಇಂತಹ ಅನೇಕ ಧನಾತ್ಮಕ ವಿಚಾರಗಳು ಹಾಗೂ ಒಳ್ಳೆಯ ಗುಣಗಳು ಇದ್ದು ಅವರು ತಮ್ಮ ಪತಿ ಹಾಗೂ ಕುಟುಂಬವನ್ನು ಸದಾ ಸಂತೋಷವಾಗಿಡಲು ಪ್ರಯತ್ನ ಮಾಡುತ್ತಾರೆ.