ದಿಢೀರ್ ಅಂತ ವಿದೇಶಕ್ಕೆ ವಾಪಸ್ಸು ಹೋಗಲು ಸಿದ್ದಾದ ಪುನೀತ್ ಮಗಳು ‘ಧೃತಿ’! ಕಾರಣ ಏನು ಗೊತ್ತಾ?
ಎರಡು ದಿವಸಗಳ ಹಿಂದೆಯೇ ಪುನೀತ್ ಅವರ ಅಂತ್ಯಕ್ರಿಯೆ ನಡೆಯಿತು. ಇಂದು ನಮ್ಮೆಲ್ಲರ ಕಣ್ಣೆದುರಿಗೆ ಪುನೀತ್ ಇಲ್ಲ ಎಂದರೆ ಎಷ್ಟು ನೋವಾಗುವದು ಗೊತ್ತಲ್ಲ! ಆದರೆ ಅವರ ಕುಟುಂಬದವರಿಗೆ ಎಷ್ಟು ದುಃಖ ವಾಗುತ್ತಿರಬಹುದು ಎಂಬುದು ಊಹಿಸಲು ಸಹ ಸಾಧ್ಯವಿಲ್ಲ. ಆದರೆ ಆ ದುಃಖವನ್ನು ಸಹಿಸುವ ಶಕ್ತಿ ದೇವರು ಕುಟುಂಬದಲ್ಲಿಯ ಎಲ್ಲರಿಗೂ ಕೊಡಲಿ ಎಂದು ಕರ್ನಾಟಕದ ಪ್ರತಿಯೊಬ್ಬ ಜನರು ದೈವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಅವರ ಸಾವಿನಿಂದ ಕುಟುಂಬದ ಜೊತೆಗೆ ಇಡೀ ಕರ್ನಾಟಕವೇ ತತ್ತರಿಸಿ ಹೋಗಿದೆ. ಸಿನಿಮಾ ರಂಗವಂತೂ ತನ್ನ ತಾಳವನ್ನೇ ಕಳೆದುಕೊಂಡಿದೆ. ಆದರೆ ಪುನೀತ್ ಅವರ ಪುತ್ರಿ ದಿಢೀರ್ ಅಂತ ಮತ್ತೆ ಅಮೆರಿಕಕ್ಕೆ ಹೋಗಲು ಸಿದ್ಧರಾಗಿದ್ದರೆ. ಅಷ್ಟಕ್ಕೂ ಇವರ ಹೋಗುವದು ಎಷ್ಟು ಸರಿ ಎಷ್ಟು ತಪ್ಪು ಎಂಬುದು ಕಾರಣ ತಿಳಿದ ಮೇಲೆ ನೀವೇ ನಿರ್ಧರಿಸಿ.

ತಂದೆಯವರ ಸಾವಿನ ಸಮಯದಲ್ಲಿ ಧೃತಿ ಅವರು ಅಮೆರಿಕದಲ್ಲಿ ಇದ್ದರು. ಶಿಕ್ಷಣ ಪಡೆಯುವ ಸಲುವಾಗಿ ಅಲ್ಲೇ ವಾಸವಾಗಿದ್ದ ಮಗಳಿಗೆ ಆಕಸ್ಮಿಕವಾಗಿ ತಂದೆಯ ಸಾವಿನ ಸುದ್ಧಿ ಕೇಳಿ ಅವಳ ಮನ ಎಷ್ಟೊಂದು ನೊಂದಿರಬಹುದು. ಒಬ್ಬಳೇ ಇದ್ದ ಸ್ಥಳದಲ್ಲಿ ಇಂತಹ ಸುದ್ಧಿ ಕೇಳಿದಾಗ ಆಗುವ ದುಃಖವನ್ನು ಊಹೆ ಮಾಡಿಕೊಂಡರೆ ಅಯ್ಯೋ ಅನಿಸುತ್ತೆ! ಇಂತಹ ಪರಸ್ಥಿತಿಯಲ್ಲಿ ಮಗಳು ಪಟ್ಟಂತಹ ದುಃಖ ಹೇಳಲಾಗದು.
ತಂದೆಯ ಸುದ್ಧಿ ಕೇಳಿ ದೃತಿ ಒಬ್ಬಳೇ ವಿದೇಶದಿಂದ ವಿಮಾನ ಪ್ರಯಾಣದ ಮೂಲಕ ಬಂದರು. ವಿಧಿ ಆಟ ನೋಡಿ ಅವರು ಬರುವಾಗ ಅದೆಷ್ಟೋ ತೊಂದರೆಗಿಡಾದರು. ಆದರೂ ತಂದೆಯ ಮುಂದೆ ಏನು ಇಲ್ಲ ಅನ್ನೋ ಹಾಗೆ ಎಲ್ಲ ಕಷ್ಟಗಳನ್ನು ಎದುರಿಸಿ ಕೊನೆಗೆ ತಂದೆಯ ಎದುರಿಗೆ ಬಂದಾಗ ಅವರಿಗೆ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ತನ್ನ ತಂದೆಯನ್ನು ಅಪ್ಪಿಕೊಂಡು ‘ಅಪ್ಪಾ ನಾನು ಬಂದಿದ್ದೀನಿ, ಒಮ್ಮೆ ಕಣ್ಣು ತೆರೆದು ನೋಡು” ಎಂದು ಗೋಳಾಡಿ ಅತ್ತುಕೊಂಡರು. ಇದನ್ನು ನೋಡಿದ ಪ್ರತಿಯೊಬ್ಬರ ಕಣ್ಣಿನಿಂದ ದುಃಖದ ಕಂಬನಿ ಹರಿದವು. ತಂದೆ ಮಗಳ ಬಾಂಧವ್ಯ ಎಷ್ಟೇ ಹೊಗಳಿದರು ಸಾಲದು.

‘”ಅಪ್ಪು ಅವರ ಅಂತ್ಯಕ್ರಿಯೆ ಆದಾಗಿನಿಂದ ಧೃತಿ ದಿನನಿತ್ಯ ದುಃಖದಲ್ಲಿ ಮುಳಿಗಿ ಸದಾ ಅಳುತ್ತಾ ಕುಳಿತುಕೊಳ್ಳುತ್ತಿದ್ದಾಳೆ, ಮನೆಯಲ್ಲಿಯ ಪ್ರತಿಯೊಂದು ಜಾಗದಲ್ಲಿ ತಂದೆಯ ನೆನಪಾಗಿ ತುಂಬಾ ದುಃಖ ಪಡುತ್ತಿದ್ದಾಳೆ ಹೀಗಾಗಿ ಅವಳನ್ನು ಅಪ್ಪುವಿನ ಹಾಲು-ತುಪ್ಪದ ಕಾರ್ಯಕ್ರಮ ಮುಗಿದ ನಂತರ ಅವಳನ್ನು ವಿದೇಶಕ್ಕೆ ಕಳುಹಿಸುತ್ತೆವೆ. ಇದರಿಂದ ಜಾಗ ಬದಲಾದಂತೆ ಅವಳ ದುಃಖವೂ ಸಹ ಕಡಿಮೆಯಾಗುವದು ಆದುದರಿಂದ ಧೃತಿಯನ್ನು ಮತ್ತೆ ವಿದೇಶದಕ್ಕೆ ಕಳುಹಿಸಲು ಪ್ರಯತ್ನ ಪಡುತ್ತಿದ್ದೇವೇ” ಎಂದು ಶಿವಣ್ಣ ಅವರು ಖುದ್ದಾಗಿ ಹೇಳಿದ್ದಾರೆ.
ಅವರ ತಗೆದುಕೊಳ್ಳುವ ನಿರ್ಧಾರ ಎಷ್ಟು ಸರಿ ಅಥವಾ ಎಷ್ಟು ತಪ್ಪು ಎಂಬುದು ಗೊತ್ತಿಲ್ಲ ಆದರೆ ಒಬ್ಬ ಮಗಳು ದಿನನಿತ್ಯ ಗೋಳಾಡುವದನ್ನು ಯಾವ ಕುಟುಂಬದವರು ಇಷ್ಟ ಪಡುತ್ತಾರೆ ನೀವೇ ಹೇಳಿ. ಆದರೆ ಭಗವಂತ ಆ ಕುಟುಂಬದಲ್ಲಿಯ ಎಲ್ಲರಿಗೂ ಈ ದುಃಖದಿಂದ ಆವರಿಸಿ ಕೊಳ್ಳುವ ಶಕ್ತಿ ಆದಷ್ಟು ಬೇಗ ಕೊಡಲಿ ಎಂದು ನಾವು ಬೇಡಿಕೊಳ್ಳುತ್ತೇವೆ.