ದಿನಂಪ್ರತಿ 24 ಕಿಮೀ ಸೈಕಲ್ ತುಳಿದು 10 ನೇ ತರಗತಿಯಲ್ಲಿ 98.5% ಮಾರ್ಕ್ಸ್ ತಂದ ‘ರೋಷನಿ’!
ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಬರುವದು, ಯಾರಿಗೆ ಗೊತ್ತಿಲ್ಲ ಹೇಳಿ? ಯಾರು ಸೋಲನ್ನು ಒಪ್ಪಿಕೊಳ್ಳವದಿಲ್ಲವೋ ಅವರು ಖಂಡಿತವಾಗಿ ಯಶಸ್ಸನ್ನು ಕಾಣಬಹುದು. ಈ ಲೈನ್ ಗೆ ಸರಿಯಾಗಿ ಹೊಂದುವ ಒಂದು ಘಟನೆ ಮಧ್ಯಪ್ರದೇಶದ ಭೀಂಡ ಜಿಲ್ಲೆಯ ಅಂಜೂಲ್ ಎಂಬ ಗ್ರಾಮದಲ್ಲಿ ಘಟಿಸಿದೆ. ರೋಶನಿ ಭದೌರಿಯಾ ಎಂಬ ಹುಡುಗಿ 10 ನೇ ತರಗತಿಯಲ್ಲಿ 98.75% ಮಾರ್ಕ್ಸ್ ತಗೆದುಕೊಂಡು ಮಧ್ಯಪ್ರದೇಶದ ಬೋರ್ಡ್ ನಲ್ಲಿ 8 ನೇಯ ಕ್ರಮಾಂಕ ಪಡೆದಿದ್ದಾಳೆ. ಒಂದು ಚಿಕ್ಕ ಊರಿನಲ್ಲಿ ವಾಸಿಸುವ ಈ ರೋಶನಿಯ ಕಥೆ ಎಲ್ಲರಿಗೂ ಪ್ರೇರಣೆಯಾಗಿದೆ. ಏಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ದಿನಾಲು 12 ಕಿಮೀ ದೂರದಲ್ಲಿದ್ದ ಮೇಹಗಾವ್ ಮಾಧ್ಯಮಿಕ ಶಾಲೆಗೆ ಸೈಕಲ್ ತುಳಿದು ಹೋಗಿ ಬರುತ್ತಿದ್ದಳು. ಇಷ್ಟು ಕಷ್ಟ ವಿದ್ದರೂ ಸಹಿತ ಯಾರಿಗೂ ಸಾಧ್ಯವಾಗದ ಸಂಗತಿಯನ್ನು ಅವಳು ಮಾಡಿ ತೋರಿಸಿದ್ದಾಳೆ.
ಸೋಲು ಒಪ್ಪಿಕೊಳ್ಳಲಿಲ್ಲ.
ರೋಶನಿ ಭೀಂಡ ಜಿಲ್ಲೆಯ ಅಂಜೂಲ್ ಊರಿನಲ್ಲಿ ಇರುತ್ತಾಳೆ. ಅವಳ ಊರಿನಿಂದ ಸುಮಾರು 12 ಕಿಲೋಮೀಟರ್ ಅಂತರದಲ್ಲಿದ ಮೇಹಗಾವ್ ನಲ್ಲಿ ಇವಳ ಶಾಲೆ ಇದೆ. ಊರಿನಲ್ಲಿದ್ದ ಹಳ್ಳದ ಮೇಲೆ ಸೇತುವೆ ಇರದ ಕಾರಣ ಮಳೆಗಾಲದಲ್ಲಿ ಮಳೆ ಬಂದಾಗ ರೋಶನಿ ತನ್ನ ಮನೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಮೇಹಗಾವ್ ನಲ್ಲಿದ್ದ ತನ್ನ ಸಂಬಂಧಿಕರ ಮನೆಯಲ್ಲಿಯೇ ಇರಬೇಕಾಗುತ್ತಿತ್ತು. ತುಂಬಾ ಚಳಿಯ ದಿನವೇ ಇರಲಿ, ಜೋರಾದ ಮಳೆ ಅಥವಾ ಅತೀ ಬಿಸಿಲು ಏನೇ ಇರಲಿ ಅದನ್ನು ಎದುರಿಸುತ್ತ ರೋಶನಿ ಶಾಲೆಗೆ ತಲುಪುತ್ತಿದ್ದಳು.

ಐಎಎಸ್ ಆಗುವ ಆಸೆ.
ರೋಶನಿ ಅವಳು ದೊಡ್ಡವಳಾದ ಮೇಲೇ ಐಎಎಸ್ ಪರೀಕ್ಷೆ ಕೊಟ್ಟು ಕಲೆಕ್ಟರ್ ಆಗುವ ಆಸೆ ಇದೆಯಂತೆ. ಸದ್ಯಕ್ಕೆ ಅವಳು ತನ್ನ ಎಲ್ಲ ಗಮನವನ್ನು ಅಭ್ಯಾಸದ ಕಡೆಗೆ ಕೊಡುತ್ತಿದ್ದಾಳೆ. 36 ವರ್ಷದ ಪುರುಷೋತ್ತಮ ರೋಶನಿಯ ತಂದೆ ಇದ್ದು ಇವರು ರೈತ ರಿದ್ದಾರೆ. ಅವಳ ತಾಯಿ 12 ನೇ ತರಗತಿಯವರೆಗೆ ಕಲಿತಿದ್ದಾಳೆ. ಇಬ್ಬರು ಹುಡುಗರ ಮಧ್ಯದಲ್ಲಿ ಒಬ್ಬ ಹುಡುಗಿಯಾದ ರೋಶನಿಗೆ ಕಲಿಸುವದರಲ್ಲಿ ತಂದೆ ತಾಯಿಗಳು ಯಾವುದೇ ಭೇದ ಮಾಡಿಲ್ಲ. ರೋಶನಿ ಉತ್ತಮವಾಗಿ ಓದಿ ಮುಂದೆ ದೊಡ್ಡ ಆಫೀಸರ್ ಆಗಿ ಊರು ಮತ್ತು ಪರಿವಾರದ ಕೀರ್ತಿಯನ್ನು ಹೆಚ್ಚಿಸಬೇಕು ಎಂಬುದು ಅವರ ತಂದೆಯ ಆಸೆಯಾಗಿದೆ.
100 ರಲ್ಲಿ 100 ಮಾರ್ಕ್ಸ್ ಪಡೆದುಕೊಂಡಿದ್ದಾಳೆ.
ನಿಮಗೆ ಹೇಳುವದೇನೆಂದರೆ, 15 ವರ್ಷದ ರೋಶನಿಯು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ 100 ರಲ್ಲಿ 100 ಮಾರ್ಕ್ಸ್ ಪಡೆದುಕೊಂಡಿದ್ದಾಳೆ. ಅವಳು ಹೇಳಿದ್ದೇನೆಂದರೆ, “ಸಮಾಜದಲ್ಲಿ ಬದಲಾವಣೆ ತರುವ ಸಲುವಾಗಿ ನಾನು ಐಎಎಸ್ ಅಧಿಕಾರಿಯಾಗ ಬಯಸುತ್ತೇನೆ”. ಭೀಂಡ ಈ ಜಿಲ್ಲೆ ಮಹತ್ವವಾಗಿ ಹುಡುಗಿಯರ ದೃಷ್ಟಿಯಿಂದ ತುಂಬಾ ಹಿಂದುಳಿದಿದೆ. ಅವರ ತಂದೆ ಹೇಳುವದೇನೆಂದರೆ, ನನ್ನ ಮಗಳು ಒಬ್ಬ ಉತ್ತಮ ವಿದ್ಯಾರ್ಥಿನಿ ಯಾಗಿದ್ದಾಳೆ. ಅಭ್ಯಾಸದ ಕಡೆಗೆ ಅವಳು ತುಂಬಾ ಲಕ್ಷ್ಯ ವಹಿಸುತ್ತಾಳೆ. ಆದರೆ ಈಕೆ ನಮ್ಮ ಇಡೀ ಊರೇ ತಲೆ ಎತ್ತಿ ತೋರುವ ಕಾರ್ಯ ಮಾಡಿದ್ದಾಳೆ. ಈ ವಿಭಾಗದಲ್ಲಿ ಇದುವರೆಗೂ ಯಾರು ಇಷ್ಟು ಮಾರ್ಕ್ಸ್ ತಗೆದುಕೊಂಡಿಲ್ಲ ಎಂದು ಅವರು ತಂದೆ ಹೇಳಿದ್ದಾರೆ.