ದಿನಗೂಲಿ ಕಾರ್ಮಿಕರು ತಮ್ಮ ಕಷ್ಟದ ಕೆಲಸವನ್ನು ಸ್ಮಾರ್ಟ್ ಆಗಿ ಮಾಡಿದ ಜುಗಾಡ್ ನೋಡಿ ಈ ವೈರಲ್ Video ದಲ್ಲಿ.
ಪ್ರತಿಯೊಂದು ಕೆಲಸ ತನ್ನಷ್ಟಕ್ಕೆ ಕಠಿಣವಾಗಿಯೇ ಇರುತ್ತದೆ, ಆದರೆ ಅದನ್ನು ಕೆಲವೊಂದು ಟ್ರಿಕ್ಸ್ ಗಳನ್ನು ಯೂಸ್ ಮಾಡಿ ಆದಷ್ಟು ಸರಳ ಮತ್ತು ಸಹಜವಾಗಿ ಮಾಡಿಕೊಳ್ಳುವ ಕಲೆ ಕೆಲವರಲ್ಲಿ ಅಷ್ಟೇ ಇರುತ್ತದೆ. ಸದ್ಯ ಇದೇ ರೀತಿಯ ಐಡಿಯಾದ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಕೆಲವು ಕಾರ್ಮಿಕರು ಕಟ್ಟಡ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಕಂಡು ಬಂದ ವಿಡಿಯೋ ಒಂದು ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಈ ವಿಡಿಯೋದಲ್ಲಿ ಕಾರ್ಮಿಕರು ಸಿಮೆಂಟ್ ಛಾವಣಿಗಳನ್ನು ಮೇಲೆ ಏರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಉಪಯೋಗಿಸಿದ ತಂತ್ರ ನೋಡುಗರಿಗೆ ತುಂಬಾ ರುಚಿಸಿದೆ. ಇಲ್ಲಿ ಛಾವಣಿಗಳನ್ನು ಮೇಲೆಕ್ಕೆ ಹತ್ತಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವುಗಳನ್ನು ಮೆಲೇರಿಸಲು ಒಂದು ಐಡಿಯಾ ಮಾಡಿದ್ದು ಅದು ಸರಿಯಾಗಿ ವರ್ಕೌಟ್ ಆಗಿದೆ. ಮೊದಲು ಛಾವಣಿಗಳನ್ನು ಸರಿಯಾಗಿ ಹಗ್ಗಿನಿಂದ ಕಟ್ಟಿದ್ದಾರೆ. ನಂತರ ಅದನ್ನು ಹಗ್ಗಿನ ಜೊತೆಯಲ್ಲಿ ಚಂಗನೆ ಮೇಲಿನಿಂದ ಕೆಳಗೆ ಜಿಗಿದಾಗ ಛಾವಣಿ ಕ್ಷಣದಲ್ಲಿ ಮೇಲೆ ನಿಂತ ಕಾರ್ಮಿಕರ ಕೈಗೆ ನೇರವಾಗಿ ತಲುಪುತ್ತಿದೆ.
ನೋಡಿ ಈ ವಿಡಿಯೋ…
https://youtu.be/4cJxBZarS-Q
ಪ್ರಸ್ತುತ ವಿಡಿಯೋ ಸೋಷಿಯಲ್ ಮೀಡಿಯಾ ಸೈಟ್ ಆದ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಮಿತ್ರರೇ, ವಿಡಿಯೋ ನೋಡಿದ ನಿಮಗೆ ಹೇಗನಿಸಿತು? ಕಾಮೆಂಟ್ ಮಾಡಿ ಹೇಳಿ.