ದಿವಂಗತ ನಟ ಇರ್ಫಾನ್ ಖಾನ್ ನೆನಪಿನಲ್ಲಿ ಫೋಟೋ ಶೇರ್ ಮಾಡಿದ WWE ಸ್ಟಾರ್ ಜಾನ್ ಸೀನಾ!

ದಿವಂಗತ ನಟ ರಿಷಿ ಕಪೂರ್ ಅವರ ನಿಧನಕ್ಕೆ ಶೋಕ ವ್ಯಕ್ತ ಮಾಡಿದ ನಂತರ WWE ಸ್ಟಾರ್ ಜಾನ್ ಸೀನಾ ಈಗ ಇನ್ನೊಬ್ಬ ದಿವಂಗತ ನಟ ಇರ್ಫಾನ್ ಖಾನ್ ಅವರಿಗೆ ಶೃದ್ಧಾಂಜಲಿ ಕೊಡಲು ಸೋಶಿಯಲ್ ಮಿಡಿಯಾದ ಸಹಾಯ ತೆಗೆದುಕೊಂಡಿದ್ದಾರೆ. ಇರ್ಫಾನ್ ಖಾನ್ ಅವರನ್ನು ನೆನಪಿಸಿಕೊಳ್ಳುತ್ತ ತಮ್ಮ ಸೂಪರ್ ಹಿಟ್ ‘ಲೈಫ್ ಆಫ್ ಪೈ’ ಚಿತ್ರದ ಫೋಟೋ ಒಂದನ್ನು ಹಾಕಿದ್ದಾರೆ.

ಶೇರ್ ಮಾಡಿದ ಪೋಸ್ಟ್ ನ್ನು ನೋಡಿ ನೆಟ್ಟಿಗರು ತಮ್ಮ ಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಒಬ್ಬನಂತೂ ನೀವು ಭಾರತೀಯರ ಬಗ್ಗೆ ಕಾಳಜಿ ವಹಿಸುತ್ತೀರಿ ನಿಮಗೆ ಧನ್ಯವಾದಗಳು. ‘ಲವ್ ಯೂ ಸೀನಾ’ ಅಂದಿದ್ದಾರೆ.

https://www.instagram.com/p/B_ryQuglRKz/?utm_source=ig_web_copy_link

ಜಾನ್ ಸೀನಾ ಯಾವುದೇ ಭಾರತೀಯನ ಫೋಟೋ ಶೇರ್ ಮಾಡಿದ್ದು ಇದೆ ಮೊದಲೇನಲ್ಲ. ಇದಕ್ಕೂ ಮೊದಲು ಬೇರೆ ಬೇರೆ ಕಾರಣಗಳಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಶಿಲ್ಪಾ ಶೆಟ್ಟಿ ಹಾಗೂ ಹಿಂದಿ ‘ಬಿಗ್ ಬಾಸ್ -13’ ರ ಪಾರ್ಟಿಸಿಪೇಟ್ ಅಸೀಮ್ ರಿಯಾಜ್ ಅವರ ಫೋಟೋ ಸಹಿತ ಶೇರ್ ಮಾಡಿದ್ದನು.