ದಿ. ಶ್ರೀದೇವಿ ಮಗಳು ಬಾಲಿವುಡ್ ಮೋಹಕ ನಟಿ ಜಾಹ್ನವಿ ಕಪೂರ್ ಶೇರ್ ಮಾಡಿದರು ಊಟಿಯಲ್ಲಿ ಕಳೆದ ಖಾಸಗಿ ಲೈಫ್ ನ ಕ್ಯೂಟ್ ವಿಡಿಯೋ…
ವ್ಯಕ್ತಿ ಒಮ್ಮೆ ಎತ್ತರಕ್ಕೆ ಬೆಳೆದ ನಂತರ ಸಾಮಾಜದಲ್ಲಿ ಮುಕ್ತವಾಗಿ ಜೀವಿಸುವ ಆನಂದದ ಕ್ಷಣಗಳಿಗೆ ಒಂದು ರೀತಿಯಲ್ಲಿ ಬ್ರೇಕ್ ತಾಗಿ ಬಿಡುತ್ತದೆ. ನಟ-ನಟಿಯರಲ್ಲಂತೂ ಈ ಸಮಸ್ಯೆ ತುಂಬಾ ಹೆಚ್ಚಾಗಿ ಬಿಡುತ್ತದೆ. ಅವರು ಸಾಮಾನ್ಯರಂತೆ ಮುಕ್ತವಾಗಿ, ನೆಮ್ಮದಿಯಿಂದ ಜೀವಿಸಬೇಕೆಂದರೆ ಸಾಧ್ಯವಾಗುವುದಿಲ್ಲ. ಅವರು ಎತ್ತರವಾಗಿ ಬೆಳೆದಿರುವ ಕಾರಣದಿಂದ ಸೆಲೆಬ್ರೆಟಿ ಪಟ್ಟ ಹಣೆಗೆ ತಾಗಿರುತ್ತದೆ. ಹೀಗಾಗಿಯೇ ಎಲ್ಲಿ ಹೋದರೂ ಅಭಿಮಾನಿಗಳ ಬಳಗ ಅವರನ್ನು ಸುತ್ತುವರಿಯಲು ಶುರುವಾಗುತ್ತದೆ. ಇದರಿಂದ ಅವರು ಫ್ರೀಲೈಫ್ ಕಳೆದುಕೊಂಡು ಬಿಡುತ್ತಾರೆ.
ನಟ-ನಟಿಯಲ್ಲೂ ಸಹ ಕೆಲವೊಂದು ಸಲ ಸಾಮಾನ್ಯರಂತೆ ಮುಕ್ತವಾಗಿ ಸಂಚರಿಸಬೇಕೆಂಬ ಹಂಬಲ ಹುಟ್ಟುತ್ತದೆ. ಅವರಿಗೂ ಸಹ ಕೆಲವೊಂದು ಆಸೆಗಳು ಇರುತ್ತವೆ. ಆದರೆ ಸೆಲೆಬ್ರಿಟಿಯ ಕಾರಣದಿಂದಾಗಿ ಇವುಗಳಿಂದ ವಂಚಿತರಾಗಿ ಜೀವಿಸಬೇಕಾಗುತ್ತದೆ. ಹೀಗಿದ್ದರೂ ಕೆಲವು ಸೆಲೆಬ್ರಿಟಿಗಳು ಏನಾದರೂ ಮಾಡಿ ತಮ್ಮ ಖಾಸಗಿ ಜೀವನ ಎಂಜಾಯ್ ಮಾಡಿಕೊಳ್ಳಲು ಪ್ರಯತ್ನ ಪಟ್ಟೇ ಪಡುತ್ತಾರೆ. ಈಗಷ್ಟೇ ವಾರದ ಹಿಂದೆ ದಿವಂಗತ ನಟಿ ಶ್ರೀದೇವಿ ಅವರ ಮಗಳಾದ ಬಾಲಿವುಡ್ ಮೋಹಕ ತಾರೆ ಜಾಹ್ನವಿ ಕಪೂರ್ ಪ್ರವಾಸದ ಮಜಾ ತೆಗೆದುಕೊಳ್ಳಲು ತಮಿಳುನಾಡಿಗೆ ಭೇಟಿ ನೀಡಿದ್ದರು. ಇಲ್ಲಿ ಅವರು ತಮ್ಮ ಕೆಲವೇ ಕೆಲವು ಗುರುತಿನವರ ಜೊತೆಗೆ ಪ್ರವಾಸದ ಖಾಸಗಿ ಕ್ಷಣಗಳನ್ನು ಮನಸ್ಸು ಪೂರ್ತಿ ಆನಂದಿಸಿದ್ದಾರೆ. ತಾವು ಆನಂದಿಸಿದ ವಿಶೇಷ ಕ್ಷಣಗಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಇದಕ್ಕೆ ಊಟಿ ಡೈರೀಸ್ ಎಂದು ಹೆಸರಿಸಿದ್ದಾರೆ. ಈ ವಿಡಿಯೋ ಜಾಹ್ನವಿ ಕಪೂರ್ ಅವರ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿದೆ. ವಿಡಿಯೋ ಪೋಸ್ಟ್ ಮಾಡಿದ ನಂತರ ಇಲ್ಲಿಯವರೆಗೆ 3.6 ಮಿಲಿಯನ್ ವೀಕ್ಷಣೆ ಪಡೆದಿದೆ. ಜೊತೆಗೆ ಸುಮಾರು 7 ಲಕ್ಷಗಳವರೆಗೆ ವೀಡಿಯೋಗೆ ಲೈಕ್ ಬಂದಿವೆ.
ನೀವು ನೋಡಿ ಈ ವಿಡಿಯೋ…
View this post on Instagram