ದುಬೈ ಅಷ್ಟೊಂದು ಶ್ರೀಮಂತವಾಗಿರುವ ಕಾರಣ ತೈಲ ಅಲ್ಲ, ‘ಈ’ ವ್ಯಕ್ತಿ! ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯ!

ದುಬೈ ಹೆಸರು ಕೇಳಿದಾಕ್ಷಣವೇ ಸುಂದರ ಸ್ವಚ್ಚ ನಗರವು ಕಣ್ಣು ಮುಂದೆ ಬಂದು ನಿಲ್ಲುತ್ತದೆ. ಇಂದು ಈ ಪಟ್ಟಣ ಜಗತ್ತಿನ ಪಟಲದ ಮೇಲೆ ವೈಭವದಿಂದ ಮೆರೆಯುತ್ತಿರುವ ಹಿಂದಿನ ಕಾರಣ ಎಲ್ಲರೂ ಇಲ್ಲಿಯ ತೈಲದ ಬಾವಿಗಳೆನ್ನಬಹುದು, ಅದು ಸರಿಯೇ. ಆದರೆ ದುಬೈ ಪಟ್ಟಣ ಶರವೇಗದಲ್ಲಿ ಬೆಳೆದು ನಿಂತ ಕಾರಣ ಮಾತ್ರ ಒಂದು ವ್ಯಕ್ತಿಯಾಗಿದೆ. ಯಾಕೆಂದರೆ ಎಲ್ಲವೂ ಇದ್ದು ಮಾಡಿಕೊಂಡು ತಿನ್ನಲಿಕ್ಕೆ ಬಾರದಿದ್ದರೆ ಏನು ಉಪಯೋಗ ಅಂತಾರಲ್ಲ, ಹಾಗೆ.

ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಈ ಹೆಸರು ದುಬೈಯ ನವನಿರ್ಮಾಣದಲ್ಲಿ ಮಹತ್ವದ ಹೆಸರಾಗಿದೆ.

ಸಂಯುಕ್ತ ಅರಬ್ ಅಮಿರಾತಿಯ ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಮತ್ತು ದುಬೈ ಅಮೀರಾತಿಯ ಶಾಸಕರೂ ಸಹಿತ ಇದ್ದಾರೆ. 2006 ರಿಂದ ದುಬೈ ಅಮಿರಾತಿಯ ಶಾಸಕರಾಗಿದ್ದಾರೆ. ಇವರ ಜೀವನಶೈಲಿಯ ಪ್ರಕಾರ ಇವರಿಗೆ ಯಾವುದೇ ಘಟಕ ಬ ಅಥವಾ ಕ ವರ್ಗದ್ದು ನಡೆಯುವುದಿಲ್ಲ. ಇಲ್ಲ ಅಂದರೆ ಇಲ್ಲ. ಎಲ್ಲವೂ A1 ಬೇಕು. ಅವರಿಗೆ ತಮ್ಮ ದೇಶದಲ್ಲಿರುವ ಯಾವುದೇ ವಸ್ತು ಜಗತ್ತಿನಲ್ಲಿಯೇ ಒಂದೇ ಆಗಿರಬೇಕು ಇಲ್ಲವಾದರೆ ಅದು ತಮ್ಮಲ್ಲಿ ನಂಬರ್ ಒನ್ ಆಗಿರಬೇಕು.

ಯಾವುದೇ ವ್ಯಕ್ತಿ ಹೆಚ್ಚೆಂದರೆ ಒಂದು ವರ್ಷದ ನೀಯೋಜನೆಯನ್ನು ಮಾಡಬಹುದು. ಆದರೆ ಇವರು ದಶಕಗಳ ನಿಯೊಜನೆಯನ್ನು ಮಾಡುವರು. ಈ ವ್ಯಕ್ತಿ ನಿಯೋಜನೆ ಮತ್ತು ಪರಿಶ್ರಮದಿಂದ ದುಬೈ ಪಟ್ಟಣಕ್ಕೆ ಯಾರಿಗೂ ನಿಲುಕದ ಆಕಾಶದೆತ್ತರಕ್ಕೆ ಬೆಳೆಸಿದ್ದಾರೆ.

ದುಬೈಯ ಒಟ್ಟು ಜಿಡಿಪಿಯಲ್ಲಿ ಬರೀ 1 ಪ್ರತಿಶತ ಕಂದಾಯ ತೈಲದಿಂದ ಬರುತ್ತದೆ ಉಳಿದದ್ದೆಲ್ಲವೂ ಪ್ರವಾಸ ಮತ್ತು ವ್ಯಾಪಾರದಿಂದ ಬರುತ್ತದೆ.

ಈ ವ್ಯಕ್ತಿಯು ಮರಳುಗಾಡಿನಲ್ಲಿ ಮಿರಾಕಲ್ ಹೆಸರಿನ ಜಗತ್ತಿನ ಅತೀ ದೊಡ್ಡ ಹೂವಿನ ಗಾರ್ಡನ್ ನಿರ್ಮಾಣ ಮಾಡಿದ್ದಾರೆ. ಹಾಗೂ ಜಗತ್ತಿನ ಅತೀ ಎತ್ತರದ ಹೋಟೆಲ್ ಸಹಿತ ತಯಾರಿಸಿಕೊಂಡರು, ಇಷ್ಟಕ್ಕೆ ನಿಲ್ಲದೆ ಡಿಸ್ನಿ ಲ್ಯಾಂಡ್ ತಯಾರಿಸಿ ಎಂದಾಗ ಡಿಸ್ನಿಯವರು ನಿರಾಕರಿಸಿದಾಗ ಮನಸ್ಸಿಗೆ ನೋವಾಗಿ ಮತ್ತಷ್ಟು ಹಠದಿಂದ ಎಲ್ಲಕ್ಕೂ ದೊಡ್ಡ ದುಬೈ ಲ್ಯಾಂಡ್ ತಯಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದು 2030 ರ ವರೆಗೆ ಪೂರ್ಣವಾಗಬಹುದು.

ದುಬೈಯ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ. ಅದರ ಹಿಂದಿನ ಶ್ರೇಯಸ್ಸು ಇವರಿಗೆ ಲಭಿಸುವುದು. ಇಲ್ಲಿಯ ಪೊಲೀಸರ ಕಡೆಗೆ ಬುಗಾತಿ ಹಾಗೂ ಲ್ಯಾಂಬೋರ್ಗಿನಿಯಂತಹ ಕಾರು ಗಾಡಿಗಳಿವೆ.

ದುಬೈನಲ್ಲಿ ಭ್ರಷ್ಟಾಚಾರಕ್ಕೆ ಸ್ಥಾನವಿಲ್ಲ. ಇಲ್ಲಿ ಯಾವುದೇ ತಪ್ಪಿಗೆ ಅಸಾಧಾರಣವಾದ ದಂಡವನ್ನು ತೆತ್ತಬೇಕಾಗುತ್ತದೆ. ದಂಡದ ರೂಪದಲ್ಲಿ ಅಗಣಿತ ಸಂಖ್ಯೆಯಲ್ಲಿ ಹಣ ವಸೂಲಿಯಾಗುತ್ತದೆ. ಜನರಿಗೆ ಶಿಸ್ತಿನ ರೂಢಿ ಹಚ್ಚಲು ಪ್ರತಿಯೊಂದು ತಪ್ಪಿಗೆ ದಂಡವನ್ನು ವಸೂಲಿ ಮಾಡುತ್ತಾರೆ. ಆದ್ದರಿಂದಲೇ ಇಲ್ಲಿ ವ್ಯಕ್ತಿಯು ತಪ್ಪು ಮಾಡುವ ಮುನ್ನ ಸಾವಿರ ಸಲ ಯೋಚಿಸುತ್ತಾನೆ. ಯಾವುದೇ ನಿಯಮವನ್ನು ಮುರಿದರೆ ಸಾಕು ಬ್ಯಾಂಕಿನಿಂದ ತನ್ನಂತಾನೆ ಹಣ ಕಟ್ ಆಗುತ್ತವೆ. ಈ ಎಲ್ಲ ಕಾರಣಗಳಿಂದ ಇಲ್ಲಿ ಕ್ರೈ ಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.

ಆದರೆ ನಮ್ಮ ದೇಶದಲ್ಲಿ….?

ದುಬೈ ದೇಶದ ಜನಸಂಖ್ಯೆ 31 ಲಕ್ಷದವರೆಗೆ ಇದೆ. ಇದರಲ್ಲಿ ಒಟ್ಟು ಜನಸಂಖ್ಯೆಯ 65 ಪ್ರತಿಶತ ಜನ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ್, ಶ್ರೀಲಂಕಾ ದೇಶದವರಾಗಿದ್ದಾರೆ. ಇದೇ ಜನ ದುಬೈಗೆ ಬೇಕಾಗುವ ಎಲ್ಲ ಕೆಲಸಗಳ ಬೇಡಿಕೆಯನ್ನು ಪೂರ್ಣಗೊಳಿಸುತ್ತಾರೆ. ಇವರೆಲ್ಲರೂ 50° ಸೆಲ್ಸಿಯಸ್ ನಲ್ಲಿಯೂ ಕೆಲಸ ಮಾಡುತ್ತಾರೆ. ದುಬೈಗೆ ಕಾರ್ಮಿಕ ವರ್ಗವು ತುಂಬಾ ಪ್ರಮುಖವಾಗಿವೆ. ಇಲ್ಲಿಯ ಕಾರ್ಮಿಕರ ಕಾನೂನುಗಳು ಕಾರ್ಮಿಕರ ಸುಲಿಗೆ ಮಾಡುವ ರೀತಿಯಲ್ಲಿ ಇಲ್ಲ.

ದುಬೈ ಈ ಪಟ್ಟಣ ಮುಖ್ಯವಾಗಿ ಕಾರ್ಮಿಕರ ಕೆಲಸದ ಮೇಲೆಯೇ ನಿಂತಿದೆ ಎನ್ನಬಹುದು. ಇಲ್ಲಿಯ ಜನರು ಸ್ವತಃ ಕೆಲಸ ಮಾಡುವುದಿಲ್ಲ, ಬರೀ ಯೋಜನೆಯನ್ನು ರೂಪಿಸಿಕೊಂಡು ಅದನ್ನು, ಜಗತ್ತಿನ ಎಲ್ಲಕ್ಕೂ ಕುಶಲ ಮತ್ತು ಪರಿಶ್ರಮ ಉಳ್ಳ ಕಾರ್ಮಿಕರಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಇಲ್ಲಿ ಬರುವ ಕಾರ್ಮಿಕರೊಡನೆ ಚೆನ್ನಾಗಿ ವರ್ತಿಸಿ ಅವರಿಗೆ ಪ್ರೋತ್ಸಾಹಿಸುತ್ತಾರೆ.

ದುಬೈಯ ಇನ್ನೊಂದು ವಿಶಿಷ್ಟತೆ ಎಂದರೆ ಇನ್ಕಮ್ ಟ್ಯಾಕ್ಸ್ ಕಟ್ಟುವ ನಿಯಮವಿಲ್ಲ. ನೀವು ಗಳಿಸಿದ್ದೆಲ್ಲಾ ನಿಮ್ಮದೇ. ಇಲ್ಲಿ ಬ್ಲಾಕ್ ಮನಿಯಂತಹ ಸಮಸ್ಯೆಗಳೇ ಇಲ್ಲ. ಭೂಮಿ ಕಡಿಮೆ ಬಿದ್ದರೆ ಸಮುದ್ರದಲ್ಲಿ ಮಣ್ಣನ್ನು ಹಾಕಿ ಪಾಮ್ ದ್ವೀಪ ತಯಾರಿಸಿ ಕೊಂಡಿದ್ದಾರೆ.

ದುಬೈಗೆ ವ್ಯಾಪಾರ ಹೇಗೆ ಮಾಡುವುದು ಎಂಬುದು ಗೊತ್ತಿದೆ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳು ಮತ್ತು ವ್ಯಾಪಾರಿಗಳು ಇಲ್ಲಿಯೇ ಬರಬೇಕು ಮತ್ತು ಇಲ್ಲಿಯೇ ಇರಬೇಕು ಎನ್ನುತ್ತದೆ. ಅವರಿಗಾಗಿ ದುಬೈ ಅನೇಕ ರೀತಿಯ ಅನುಕೂಲಕರ ನಿಯಮಗಳನ್ನು ಜಾರಿಯಲ್ಲಿ ತಂದಿದೆ.

ದುಬೈಯ ಭವಿಷ್ಯದ ಬಗ್ಗೆ ಮಾತನಾಡಬೇಕಾದರೆ, ಪಟ್ಟಣಕ್ಕೆ ಭವಿಷ್ಯದಲ್ಲಿ ಹವಾನಿಯಂತ್ರಿತ ಅಂದರೆ ಫುಲ್ AC ನಗರವನ್ನು ಮಾಡುವವರಿದ್ದಾರೆ. ಇದರ ಹೊರತಾಗಿ ದ್ರೋಣ ಟ್ಯಾಕ್ಸಿ, ಹೈಪರ್ ಲೂಪ್, ಚಾಲಕ ನಿಲ್ಲದ ಬಸ್ಸು ಹೀಗೆ ಅನೇಕ ಕೆಲಸಗಳು ಬಾಕಿ ಇವೆ.

ಈ ರೀತಿ ದುಬೈ ಬೆಳೆಯ ಬೇಕಾದರೆ ಇದರ ಹಿಂದೆ ‘ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್’ ಅವರ ಕಷ್ಟ ಮತ್ತು ಸತತ ಪ್ರಯತ್ನ ಅಡಗಿದೆ ಎಂದು ಹೇಳಲೇಬೇಕು.