ದೆಹಲಿಯಲ್ಲಿ ಕೊರೊನಾ ಹಾಹಾಕಾರ! ಹೆಣಗಳಿಗೆ ಸಿಗುತ್ತಿಲ್ಲ ಸ್ಥಳ, ಭಯಾನಕ ವಿಡಿಯೋ ವೈರಲ್!
ಕರೋನಾ ವೈರಸ್ ದೆಹಲಿಯಲ್ಲಿ ತುಂಬಾ ಹಾಹಾಕಾರ ಎಬ್ಬಿಸಿದೆ. ಕರೋನಾ ವೈರಸ್ ಸೋಂಕಿನೊಂದಿಗೆ ಹೋರಾಡುತ್ತಿರುವ ದೆಹಲಿಯಲ್ಲಿ, ಈಗ ಶವಸಂಸ್ಕಾರದ ಸ್ಮಶಾನಭೂಮಿ ಶವಗಳಿಂದ ತುಂಬಿವೆ. ನಿಗಮ್ ಬೋಧ್ ಘಾಟ್ನಲ್ಲಿ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಲು ಯಾವುದೇ ಸ್ಥಳವೇ ಇಲ್ಲ, ಆದ್ದರಿಂದ ದೆಹಲಿಯ ಸರಕಾರವು ನದಿಯ ದಂಡೆಯಲ್ಲಿ ಇನ್ನೂ 25 ಸ್ಮಶಾನಭೂಮಿಗಳನ್ನು ಶವ ಸಂಸ್ಕಾರಕ್ಕೆ ಸಿದ್ಧಪಡಿಸುತ್ತಿದೆ.
ಕಳೆದ 15 ದಿನಗಳಿಂದ ನಿಗಂಬೋಧ ಸ್ಥಳದ ಆಚಾರ್ಯ ಮತ್ತು ಅವರ ತಂಡವು ಪ್ರತಿದಿನ 40 ರಿಂದ 50 ಶವಗಳನ್ನು ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಏನಾಗಿದೆ ಎಂದರೆ ಅಲ್ಲಿದ್ದ ಆಚಾರ್ಯರು ಕೂಡ ಶವ ಸಂಸ್ಕಾರ ಮಾಡುತ್ತ ಮಾಡುತ್ತ ಬೇಸತ್ತಿದ್ದಾರೆ. ನಿರಂತರವಾಗಿ ಬೆಳೆಯುತ್ತಿರುವ ಮೃತರ ಸಂಖ್ಯೆ ನೋಡಿ ಅವರು ಸಹ ಅಸಮಾಧಾನ ಗೊಳ್ಳುತ್ತಿದ್ದಾರೆ.

ಕರೋನಾದಿಂದ ಮೃತಪಟ್ಟ ಜನರ ಮೃತದೇಹಗಳು ಹೆಚ್ಚು ಬರಲು ಪ್ರಾರಂಭಿಸಿದಾಗ, ಸರ್ಕಾರವು ಇನ್ನೂ 4 ಶವಸಂಸ್ಕಾರದ ಘಟ್ಟಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ ಎಂದು ಅವರು ಹೇಳುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದ ಸುಮಾರು 20 ರಿಂದ 25 ಜನರನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇನ್ನೂ ಶವಗಳು ಬರಬಹುದು ಎಂದು ಅವರ ಅಭಿಪ್ರಾಯವಾಗಿದೆ.
ನಿಗಂಬೋಧ್ ಘಾಟ್ನಲ್ಲಿಯ ಪರಿಸ್ಥಿತಿ ಈಗ ಹೇಗಿದೆ ಎಂದರೆ ಅಲ್ಲಿ ಸದ್ಯಕ್ಕೆ 48 ಪ್ಲಾಟ್ಫಾರ್ಮ್ಗಳಿವೆ. ಆದರೆ ಅವು ದಿನದಿಂದ ದಿನಕ್ಕೆ ಕಡಿಮೆ ಬೀಳುತ್ತಿವೆ, ಅದಕ್ಕಾಗಿಯೇ ನದಿಯ ಉದ್ದಕ್ಕೂ ಶವಸಂಸ್ಕಾರ ಮಾಡುವ ಸಲುವಾಗಿ ಇನ್ನೂ 25 ಹೊಸ ಸ್ಥಳಗಳನ್ನು ಸಿದ್ಧಪಡಿಸಲಾಗುತ್ತಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಒಂದೆಡೆ ಕರೋನಾ ರೋಗಿಗಳ ಸಂಖ್ಯೆ 34,000 ದಾಟಿದ್ದರೆ, ಮತ್ತೊಂದೆಡೆ, ಸಾವಿನ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಆದುದರಿಂದ ಶವದಹನ ಮಾಡುವ ಘಟ್ಟಗಳಲ್ಲಿ ಈಗ ಜಾಗ ಕಡಿಮೆ ಬೀಳುತ್ತಿದೆ.

ಅದಕ್ಕಾಗಿಯೇ ದೆಹಲಿಯಲ್ಲಿ ಈ ಮೊದಲು ಎರಡು ಸ್ಮಶಾನ ಘಟ್ಟಗಳು ಇದ್ದವು ಅವುಗಳನ್ನು ಹೆಚ್ಚಿಸಿ 4 ಘಟ್ಟಗಳು ಮಾಡಿದ್ದಾರೆ. ಶವಸಂಸ್ಕಾರಕ್ಕೆ ತಂದ ಎಲ್ಲಾ ಕರೋನಾ ರೋಗಿಗಳ ಶವಗಳನ್ನು ಪ್ರತಿದಿನ ದಹನ ಮಾಡಲಾಗುತ್ತದೆ. ಇದಕ್ಕೆ 5 ರಿಂದ 6 ಗಂಟೆಗಳು ಬೇಕಾಗುವದು.
ನಿಗಂಬೋಧ್ ಘಾಟ್ನಲ್ಲಿ ಸ್ಥಳ ಕಡಿಮೆ ಬೀಳುತ್ತಿದೆ.
ನಿಗಂಬೋಧ್ ಘಾಟ್ ನಲ್ಲಿ ಸುಮಾರು 100 ರಷ್ಟು ಶವಸಂಸ್ಕಾರ ಮಾಡುವ ಪ್ಲಾಟಫಾರ್ಮ ಗಳಿವೆ ಅದರಲ್ಲಿ ಸುಮಾರು 48 ಕ್ಕಿಂತ ಹೆಚ್ಚು ಪ್ಲೇಟಫಾರ್ಮ ಗಳಲ್ಲಿ ಕೇವಲ ಕೋರೊನಾ ಸೋಂಕಿತರ ಶವ ಸಂಸ್ಕಾರ ಮಾಡಲಾಗುತ್ತಿದೆ. ಈ ಪ್ಲೇಟ್ ಫಾರ್ಮ್ ನಲ್ಲಿ ಸಾಮಾನ್ಯ ಜನರ ಶವ ಸಂಸ್ಕಾರ ಮಾಡಲಾಗುವದಿಲ್ಲ. ಈ ಘಾಟ್ ನಲ್ಲಿ ಒಂದರ ಹಿಂದೆ ಒಂದು ಆಂಬುಲೆನ್ಸ್ ಗಳು ಕೋರೊನಾ ಸೋಂಕಿತರ ಶವಗಳನ್ನು ತಗೆದುಕೊಂಡು ಬರುತ್ತಾನೆ ಇದ್ದಾರೆ ಇದರಿಂದ ಈ ಸ್ಮಶಾನಭೂಮಿಯಲ್ಲಿ ಶವಸಂಸ್ಕಾರ ಮಾಡಲು ಸ್ಥಳವೇ ಇಲ್ಲದಂತಾಗಿದೆ.
ಇದೆ ಸಂದರ್ಭಕ್ಕೆ ಅನುಸರಿಸಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಘಟ್ಟಕ್ಕೆ ಬರುವ ಶವಗಳ ಒಂದು ಭಯಾನಕ ವೀಡಿಯೊ ಒಂದು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
पंजाबी बाग शमशान घाट, दिल्ली
— Kapil Mishra (@KapilMishra_IND) June 11, 2020
भयावह …
यहां विज्ञापन लगवाइए केजरीवाल जी
सबसे ज्यादा लोग यहीं आ रहे हैं आजकल pic.twitter.com/cEHuYgLohX
ಆಸ್ಪತ್ರೆಗಳ ವಿರುದ್ಧ ನಿರ್ಲಕ್ಷ್ಯತನದ ಆರೋಪ.
ಒದ್ದೆಯಾದ ಕಣ್ಣುಗಳಿಂದ ತಂದೆಗೆ ವಿದಾಯ ಹೇಳುತ್ತಾ, ಮೋನಿಕಾ ತನ್ನ ತಂದೆಯನ್ನು ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಿದ್ದಳು. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ತಂದೆ ಮೃತಪಟ್ಟಿದ್ದಾರೆ ಎಂದು ಮೋನಿಕಾ ಆರೋಪಿಸಿದ್ದಾರೆ. ಬೆಳಿಗ್ಗೆ ತನ್ನ ತಂದೆಯ ಮೃತ ದೇಹವನ್ನು ತಗೆದುಕೊಂಡು ಹೋಗುವ ಸಲುವಾಗಿ ಆಸ್ಪತ್ರೆಗೆ ತಲುಪಿದಾಗ ಆಸ್ಪತ್ರೆಯಲ್ಲಿಯ ಸಿಬ್ಬಂದಿಗಳು ಇನ್ನೊಬ್ಬ ವ್ಯಕ್ತಿಯ ಮೃತ ದೇಹವನ್ನು ಅವರಿಗೆ ನೀಡಿದರು. ಮೋನಿಕಾ ಅವರ ತೊಂದರೆ ಇಲ್ಲಿಗೆ ಮುಗಿಯಲಿಲ್ಲ ತದನಂತರ ಅವರ ಮೃತದೇಹವನ್ನು ಶವಸಂಸ್ಕಾರ ಮಾಡಲು ನಿಗಂಬೋಧ್ ಘಾಟ್ ನಲ್ಲಿ ತಲುಪಿದರು ಅಲ್ಲಿ ಪ್ಲೇಟ್ ಫಾರ್ಮ್ ಖಾಲಿ ಇರದ ಕಾರಣ ಅವರು ಸುಮಾರು ನಾಲ್ಕೈದು ಗಂಟೆಗಳ ಕಾಲ ಅಲ್ಲಿ ಕಾಯಬೇಕಾಯಿತು.

ಇದೇ ಪ್ರಕಾರದ ಅವಸ್ಥೆ ಪಂಜಾಬಿ ಬಾಗ ಕ್ರಿಮೇಷನ್ ಮೈದಾನದಿದೆ ಅದು ದೆಹಲಿಯ ಕೋರೊನಾ ರೋಗಿಗಳಿಂದ ತುಂಬಿದ ಏಕೈಕ ಮೈದಾನವಿದೆ. ಈ ಘಾಟ್ ನಲ್ಲಿ 4 ಸಿಎನ್ ಜಿ ಮುಖಾಂತರ ಮತ್ತು 71 ಕಟ್ಟಿಗೆಯಿಂದ ದಹನ ಮಾಡುವ ವ್ಯವಸ್ಥೆ ಇದೆ. ಗ್ರೌಂಡ್ ನ ಎಲ್ಲ ಪ್ಲೇಟ್ ಫಾರ್ಮ್ ಗಳಲ್ಲಿ ಒಂದೇ ಸಮಯದಲ್ಲಿ ಶವಗಳನ್ನು ಸುಡುವ ಕಾರ್ಯ ನಡೆಸುತ್ತಿದ್ದಾರೆ, ಇದನ್ನು ನೋಡಿದರೆ ತುಂಬಾ ಭಯಪಡುವಂತಹ
ಸಂಗತಿಯಾಗಿರುತ್ತದೆ.