ದೇವಸ್ಥಾನದಲ್ಲಿ ಕಳ್ಳತನ ಮಾಡುವ ಮೊದಲು ಕಳ್ಳನು ಪಡೆದನು ದೇವರ ಆಶೀರ್ವಾದ! ವಿಡಿಯೋ ವೈರಲ್….

ಯಾವುದೇ ಕೆಲಸ ಮಾಡುವ ಮುನ್ನ ದೇವರ ಆಶೀರ್ವಾದವನ್ನು ಪಡೆಯುವುದು ಪರಂಪರೆ. ಆದರೆ ಕಳ್ಳನೊಬ್ಬ ದೇವರ ಆಶೀರ್ವಾದವನ್ನು ಪಡೆದ ನಂತರ ಕಳ್ಳತನ ಮಾಡಿದ ವಿಡಿಯೋ ಎಲ್ಲಾದರೂ ನೋಡಿದ್ದೀರಾ? ನೋಡಿಲ್ಲವಾದರೆ ಅಂಥ ವೀಡಿಯೋ ಇಲ್ಲಿ ನೋಡಬಹುದು.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ಶೇರ್ ಆಗುತ್ತಿದೆ. ಪ್ರಸ್ತುತ ಪ್ರಕರಣವು ಮಹಾರಾಷ್ಟ್ರದ ಠಾಣೆ ಜಿಲ್ಲೆಯಿಂದ ವರದಿಯಾಗಿದೆ. ಈ ವಿಡಿಯೋ ನೋಡಿದ ನಂತರ ಕಳ್ಳ ತುಂಬಾ ಆದರ್ಶ ಹಾಗೂ ದೇವರ ಭಕ್ತನಾಗಿದ್ದಾನೆಂದು ನಿಮಗೂ ಅನಿಸಬಹುದು. ವೈರಲ್ ಆಗುತ್ತಿರುವ ಈ ವಿಡಿಯೋ ಸಿಸಿಟಿವಿ ಫುಟೇಜ್ ಆಗಿದೆ. ಇದರಲ್ಲಿ ಕಳ್ಳನೊಬ್ಬ ಮಂದಿರದಲ್ಲಿ ಕಾಣಿಕೆಯ ಪೆಟ್ಟಿಗೆಯನ್ನು ಕಳ್ಳತನ ಮಾಡುತ್ತಿರುವುದು ಕಂಡುಬರುತ್ತಿದೆ.

ವಿಡಿಯೋದಲ್ಲಿ ವ್ಯಕ್ತಿಯು ಮಂದಿರದ ಪ್ರವೇಶ ದ್ವಾರದ ಮುಖಾಂತರ ಒಳಗೆ ಬಂದು ಅತ್ತಿತ್ತ ನೋಡುತ್ತಾನೆ. ತದನಂತರ ದೇವರ ಚರಣಗಳಿಗೆ ಸ್ಪರ್ಶ ಮಾಡುತ್ತಾನೆ ಮತ್ತು ನಂತರ ಗುಡಿಯಲ್ಲಿ ಇಟ್ಟ ಕಾಣಿಕೆ ಪೆಟ್ಟಿಗೆಯನ್ನು ತೆಗೆದುಕೊಂಡು ಅಲ್ಲಿಂದ ಓಡಿ ಹೋಗುತ್ತಾನೆ. ಸಿಸಿಟಿವಿ ಫುಟೇಜ್ ನಲ್ಲಿ ಆತನ ಜೊತೆಗಾರ ದೇವಸ್ಥಾನದ ಹೊರಗೆ ನಿಂತಿರುವುದು ಕಂಡುಬರುತ್ತದೆ. ದೊರೆತ ಮಾಹಿತಿಯ ಪ್ರಕಾರ ದೇವಸ್ಥಾನದ ಪೂಜಾರಿ ಹೊರಗೆ ಹೋದ ನಂತರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಾನು ಮರಳಿ ಬರುವಷ್ಟರಲ್ಲಿ ಕಾಣಿಕೆಯ ಪೆಟ್ಟಿಗೆ ಅಲ್ಲಿರಲಿಲ್ಲ ಎಂದು ಪೂಜಾರಿ ಹೇಳಿದ್ದಾರೆ. ಅದರಲ್ಲಿ ಸುಮಾರು ಸಾವಿರಾರು ರೂಪಾಯಿಗಳ ಇರಬಹುದೆಂದು ಅಂದಾಜು ವ್ಯಕ್ತ ಮಾಡಲಾಗಿದೆ.

ನೋಡಿ ಈ ವಿಡಿಯೋ….

ಪ್ರಸ್ತುತ ಈ 30 ಸೆಕೆಂಡಿನ ವಿಡಿಯೋವನ್ನು ಫೇಸ್ಬುಕ್ ನಲ್ಲಿ Rationalist ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ‘ಕಾಣಿಕೆ ಪೆಟ್ಟಿಗೆಯನ್ನು ಕಳ್ಳತನ ಮಾಡುವ ಮೊದಲು ಕಳ್ಳನು ದೇವರ ಮೂರ್ತಿಯ ಪಾದಗಳಿಗೆ ಸ್ಪರ್ಶ ಮಾಡಿದ್ದಾನೆಂದು’ ಕ್ಯಾಪ್ಷನ್ ನೀಡಲಾಗಿದೆ. ಈ ತಮಾಷೆ ವೀಡಿಯೋವನ್ನು ನೋಡಿ ಸಾಕಷ್ಟು ಜನರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘ನನಗಂತೂ ಈ ಕಳ್ಳ ತುಂಬಾ ತತ್ವನಿಷ್ಠನಾಗಿದ್ದಾನೆಂದು ಅನಿಸುತ್ತಿದೆ’ ಎಂದು ಒಬ್ಬ ಯೂಸರ್ ಹೇಳಿದ್ದಾನೆ. ಇನ್ನೊಬ್ಬನು ಈ ಕಳ್ಳ ಕಳ್ಳತನ ಮಾಡುವ ಮೊದಲು ದೇವರಿಗೆ ಕ್ಷಮೆ ಕೇಳುತ್ತಿದ್ದಾನೆ, ನಿಶ್ಚಿತವಾಗಿಯೂ ಈತನಿಗೆ ಏನಾದರೂ ಅನಿವಾರ್ಯ ಪ್ರಸಂಗ ಎದುರಾಗಿರಬೇಕು ಎಂದಿದ್ದಾನೆ.

ಸ್ಥಾನಿಕ ಪೊಲೀಸ್ ಠಾಣೆಯ ವರಿಷ್ಠ ಪೊಲೀಸ್ ನಿರೀಕ್ಷಕರಾದ ಸಂಜಯ್ ಧುಮಾಳ್ ಅವರು ಹೇಳುವ ಪ್ರಕಾರ, ಈ ಪ್ರಕರಣದಲ್ಲಿ ಸ್ಥಾನಿಕ ವ್ಯಕ್ತಿಯಾದ ಕೇಜಸ್ ಮಸದೆ ಹೆಸರಿನ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.