ದೇವಾಲಯದಲ್ಲಿ ಕಳ್ಳತನ ಮಾಡಿದ ನಂತರ ದೇವರು ನೀಡಿದನು ಇನ್ಸ್ಟಂಟ್ ಶಿಕ್ಷೆ ! ನೋಡಿ ಅಲ್ಲಿ ನಿಜಕ್ಕೂ ನಡೆದಿದ್ದೇನು ಈ ವಿಡಿಯೋದಲ್ಲಿ…
ದೇವರು ಎಲ್ಲ ಕಡೆಯೂ ಇದ್ದಾನೆ ಮತ್ತು ಆತನು ಎಲ್ಲವನ್ನು ವೀಕ್ಷಿಸುತ್ತಾನೆ ಎಂದು ಹೇಳುತ್ತಾರೆ, ಅಪರಾಧ ಮತ್ತು ಪಾಪಗಳನ್ನು ಮಾಡುವವರಿಗೆ ದೇವರು ಸರಿಯಾದ ಸಮಯಕ್ಕೆ ಶಿಕ್ಷೆ ನೀಡುತ್ತಾನೆ ಎಂಬುದು ತುಂಬಾ ಜನರಿಗೆ ವಿಶ್ವಾಸವಿದೆ. ಇದಕ್ಕೆ ಪುಷ್ಟಿ ನೀಡುವಂಥ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಿಂದ ವರದಿಯಾಗಿದೆ. ದೇವಾಲಯದಲ್ಲಿ ಕಳ್ಳತನ ಮಾಡಲು ಹೋದ ಕಳ್ಳನಿಗೆ ದೇವರು ತಕ್ಷಣ ಅಲ್ಲಿಯೇ ಶಿಕ್ಷೆ ನೀಡಿದ್ದಾನೆ. ಆತನಿಗೆ ದೊರೆತ ಶಿಕ್ಷೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ.
ಅಲ್ಲಿ ನಡೆದದ್ದೇನು?
ಪಾಪಾ ರಾವ್ ಹೆಸರಿನ ಕಳ್ಳ ಕುಡಿತದ ಚಟಕ್ಕಾಗಿ ಊರಲ್ಲಿರುವ ‘ಜಾಮಿ ಎಲ್ಲಮ್ಮ’ ತಾಯಿಯ ಮಂದಿರದಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಒಳಗೆ ಸೇರಿದ್ದಾನೆ. ದೇವಾಲಯದ ಮುಖ್ಯದ್ವಾರಕ್ಕೆ ಬೀಗವಿರುವುದರಿಂದ ಗೋಡೆಗೆ ಇರುವ ಚಿಕ್ಕ ಕಿಟಕಿಯನ್ನು ಒಡೆದು ಒಳ ಸೇರಿದ್ದಾನೆ.
ದೇವಸ್ಥಾನದ ಗರ್ಭಗುಡಿಯಲ್ಲಿರುವ ಸುಮಾರು 20 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಮತ್ತೆ ಅದೇ ಒಳಗೆ ನುಸುಳಿ ಬಂದ ಕಿಟಕಿಯಿಂದ ಹೊರಬೀಳಲು ಯತ್ನಿಸಿದ್ದಾನೆ. ಆದರೆ ಈ ಪ್ರಯತ್ನದಲ್ಲಿ ಆತನಿಗೆ ಯಶಸ್ಸು ಲಭಿಸಿಲ್ಲ. ಯಾವ ಕಿಟಕಿಯಿಂದ ಒಳಗೆ ನುಸುಳಿದ್ದನೋ ಅದಕ್ಕೆ ಕಿಟಕಿಯಿಂದ ವಾಪಸ್ ಹೊರಗೆ ಬರಲು ಸಾಧ್ಯವಾಗಿಲ್ಲ. ತದನಂತರ ಸಹಾಯಕ್ಕಾಗಿ ಕಿರುಚಿಕೊಂಡಾಗ ಸ್ಥಾನಿಕರು ಕೂಡಿಕೊಂಡಿದ್ದಾರೆ. ಆತ ಸಿಲುಕಿಕೊಂಡಿರುವ ವಿಚಿತ್ರ ಪರಿಸ್ಥಿತಿಯನ್ನು ನೋಡಿ ಜನರು ಪ್ರಸ್ತುತ ಪ್ರಕರಣದ ಬಗ್ಗೆ ತಿಳಿದುಕೊಂಡಿದ್ದಾರೆ.
ವಿಡಿಯೋ ಆಯ್ತು ವೈರಲ್…
ಈತ ಸಿಲುಕಿಕೊಂಡಿರುವ ಈ ಪರಿಸ್ಥಿತಿಯನ್ನು ನೋಡಿ ಊರಿನ ಕೆಲವರು ವಿಡಿಯೋ ಆತನ ಮಾಡಿಕೊಂಡರೆ, ಇನ್ನು ಕೆಲವರು ಆತನನ್ನು ಕಿಟಕಿಯಿಂದ ಮುಕ್ತ ಮಾಡಿದ್ದಾರೆ. ಪಾಪಾ ರಾವನು ತನ್ನ ಸೆರೆಯ ಚಟಕ್ಕಾಗಿ ಈ ರೀತಿ ಮಾಡಿದ್ದಾನೆಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಈತ ಇದಕ್ಕೂ ಮೊದಲು ಸ್ವಂತ ಮನೆಯಲ್ಲಿಂದಲೇ ಸಿಲಿಂಡರ್ ಕಳ್ಳತನ ಮಾಡಿ ಮಾರಾಟ ಮಾಡಿದ್ದನು. ದೇವರು ಈತನಿಗೆ ಸರಿಯಾಗಿ ಮತ್ತು ತಕ್ಷಣ ಶಿಕ್ಷೆ ನೀಡಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ವಿಡಿಯೋ ನೋಡಿ
A burglar trapped in the act at Jhadupudi Jami Yellamma #Temple in Kanchili mandal of Srikakulam dist. Enters through a small ventilation window, but just couldn’t get out.#AndhraPradesh #Kanchili #Jhadupudi #Srikakulam #Burglar #Funny #JamiYellammaTemple pic.twitter.com/XF6SGG9LYI
— Surya Reddy (@jsuryareddy) April 5, 2022