ದೇಹದಿಂದ ಬಾಣದಂತೆ ಬಿಡುತ್ತದೆ ಮುಳ್ಳುಗಳನ್ನು! ಫುಟ್ಬಾಲ್ ತರ ಕಾಣುವ ಈ ವಿಚಿತ್ರ ಮೀನಿನ ವಿಡಿಯೋ ನೋಡಿ ಹೇಗಿದೆ.
ಸಮುದ್ರದಲ್ಲಿ ಸಣ್ಣ ಮೀನುಗಳಿಂದ ಹಿಡಿದು ದೊಡ್ಡ ದೊಡ್ಡ ಮೀನುಗಳು ಕಂಡು ಬರುತ್ತವೆ. ಈ ರೀತಿಯ ಅನೇಕ ವೀಡಿಯೊಗಳನ್ನು ನೀವು ಸೋಷಿಯಲ್ ಮೀಡಿಯಾಗಳಲ್ಲಿ ನೋಡಿರಬೇಕು. ಆದರೆ ಸದ್ಯ ವೈರಲ್ ಆಗುತ್ತಿರುವ ಒಂದು ಮೀನು ನೀವು ಈ ಮೊದಲು ನೋಡಿಯೇ ಇಲ್ಲ. ಕಾರಣ ಈ ಮೀನು ಎಲ್ಲ ಮೀನುಗಳಿಗಿಂತ ತುಂಬಾ ವಿಚಿತ್ರ ಮತ್ತು ವಿಶೇಷ ಮೀನಾಗಿದೆ.
ಈ ಮೀನಿನ ದೇಹ ರಚನೆ ತುಂಬಾ ಭಿನ್ನವಾಗಿದೆ. ಇದರ ಆಕಾರ ಒಂದು ಫುಟ್ಬಾಲ್ ತರ ಇದೆ. ಇದೇನು ಚಂಡೋ ಅಥವಾ ಮೀನು ಎಂಬುದು ಬೇಗನೆ ತಿಳಿದು ಬರುವದಿಲ್ಲ. ಈ ಮೀನಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ ಜೊತೆಗೆ ಇದರ ಬಗ್ಗೆ ಚರ್ಚೆಯೂ ಕೂಡ ಜಾಸ್ತಿಯಾಗುತ್ತಿದೆ. ಈ ಮೀನು ವಿಚಿತ್ರ ಆಕಾರದ ಜೊತೆಗೆ ತುಂಬಾ ವಿಷಕಾರಿಯೂ ಆಗಿದೆ. ಈ ಮೀನು ತನಗೆ ಏನಾದರೂ ಅಪಾಯ ಕಾದಿದೆ ಎಂದು ತಿಳಿದರೆ ತನ್ನ ಮೈಯನ್ನು ಬಲೂನಿನಂತೆ ಉಬ್ಬಿಸಿಕೊಳ್ಳುವದು. ಒಮ್ಮೊಮ್ಮೆ ದೇಹದಿಂದ ಮುಳ್ಳುಗಳನ್ನು ಸಹ ಹೊರಗೆ ಹಾಕುತ್ತದೆ. ಹೀಗಾಗಿ ಯಾರು ಇದನ್ನು ಹಿಡಿಯುವ ಸಾಹಸ ಮಾಡುವದಿಲ್ಲ. ಒಬ್ಬ ವ್ಯಕ್ತಿ ಇದನ್ನು ಹಿಡಿಯಲು ಪ್ರಯತ್ನಿಸಿದಾಗ ತನ್ನ ಮುಳ್ಳುಗಳನ್ನು ಹೊರಗೆ ತೆಗೆದು ಹೇಗೆ ಪ್ರತಿಕ್ರಿಯಿಸಿದೆ ನೋಡಿ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ mrosegrech ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ 39 ಮಿಲಿಯನ್ ಜನರು ನೋಡಿದ್ದು 9 ಲಕ್ಷಕ್ಕೂ ಮೇಲ್ಪಟ್ಟು ಜನರು ಲೈಕ್ ಮಾಡಿದ್ದಾರೆ.