ದೊಡ್ಡ ಶಕ್ತಿಯ ಜೊತೆ ದೊಡ್ಡ ಜವಾಬ್ದಾರಿ ಕೂಡಾ ಬರುತ್ತದೆ ಎಂದು ಎಲ್ಲರಿಗೂ ತಿಳಿಸುವ ಆನೆಯ ಈ Video : ಅತ್ಯುತ್ತಮ ಸಂದೇಶವಿದು

ನಾವು ಹೆಜ್ಜೆಯನ್ನು ಇಡುವಾಗ ಸಾಮಾನ್ಯವಾಗಿಯೇ ನಮ್ಮ ಹಿರಿಯರು, ಇಡುವ ಹೆಜ್ಜೆಯನ್ನು ಎಚ್ಚರಿಕೆಯಿಂದ ಹಾಗೂ ಆಲೋಚನೆ ಮಾಡಿ ಇಡಬೇಕು ಎಂದು ಹೇಳುತ್ತಾರೆ. ಇದರರ್ಥ ಮಾಡುವ ಯಾವುದೇ ಕೆಲಸವನ್ನಾಗಲೀ ಕೂಡಾ ಆಲೋಚಿಸಿ, ವಿಚಾರಿಸಿ, ವಿಮರ್ಶಿಸಿ ಮಾಡಬೇಕು ಎನ್ನುವ ಅರ್ಥವನ್ನು ನೀಡುತ್ತದೆ. ಇದೆಲ್ಲವೂ ಕೂಡಾ ಅವರ ಅನುಭವದಿಂದ ಬಂದಂತಹ ಮಾತಾಗಿರುತ್ತದೆ. ಅಲ್ಲದೇ ಜೀವನದಲ್ಲಿ ನಾವು ಕೂಡಾ ಅನುಭವಗಳನ್ನು ಪಡೆಯುತ್ತಾ ಹೋದ ಹಾಗೆ ನಮ್ಮ ಅರಿವಿಗೂ ಕೂಡಾ ಈ ವಿಷಯಗಳು ಒಂದೊಂದಾಗಿ ಬರಲು ಆರಂಭಿಸುತ್ತದೆ. ನಿಜಕ್ಕೂ ಯಾವುದೇ ಕೆಲಸವನ್ನು ಮಾಡುವಾಗ ಮಾತ್ರವೇ ಅಲ್ಲ, ನಾವು ನಡೆಯುವಾಗಲೂ ಕೂಡಾ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರವಾಗಿದ್ದರೆ ನಾವು ಎಡುವುದಿಲ್ಲ ಎನ್ನುವುದು ಕೂಡಾ ವಾಸ್ತವ. ಆದರೆ ಇಂತಹ ಒಂದು ಎಚ್ಚರಿಕೆಯನ್ನು ಪ್ರಾಣಿಗಳು ಕೂಡಾ ಅನುಸರಿಸುತ್ತವೆಯೇ? ಅವುಗಳಿಗೆ ಕೂಡಾ ಹೆಜ್ಜೆ ಇಡುವಾಗ ಎಚ್ಚರಿಕೆಯಿಂದ ಇಡಬೇಕು ಎಂದು ಹೇಳಲು ಸಾಧ್ಯವಿದೆಯೇ?

ಇಂತಹ ಪ್ರಶ್ನೆಗಳು ಬಂದಾಗ ಸಹಜವಾಗಿಯೇ ನಾವು ಇಲ್ಲ ಎನ್ನಬಹುದು. ಪ್ರಾಣಿಗಳಿಗೆ ಯಾರೂ ಕೂಡಾ ಇಂತಹುದೊಂದು ಸಲಹೆಯನ್ನು ನೀಡುವುದು ಸಾಧ್ಯವಿಲ್ಲ. ‌ಆದರೆ ಅನೇಕ ಸಂದರ್ಭಗಳಲ್ಲಿ ಪ್ರಾಣಿಗಳು ಸಹಜವಾಗಿಯೇ, ಪ್ರಕೃತಿಯಲ್ಲೇ ಇಂತಹ ಗುಣಗಳನ್ನು ಕಲಿತಿರುತ್ತವೆ ಎನ್ನುವುದು ಕೂಡಾ ವಾಸ್ತವ‌. ಆಶ್ಚರ್ಯ ಆಗುತ್ತಿದೆಯೇ? ಅಲ್ಲದೇ ಕೆಲವೊಮ್ಮೆ ಪ್ರಾಣಿಗಳನ್ನು ಪಳಗಿಸಿ ಅವುಗಳಿಗೆ ಬುದ್ದಿ ಕಲಿಸುವಾಗಲೂ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಅವುಗಳಿಗೆ ತರಬೇತಿ ನೀಡುವುದು ಅಪರೂಪ ಎನ್ನಬಹುದು. ಆದರೆ ಇಡುವ ಹೆಜ್ಜೆಯ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ ಪ್ರಾಣಿಯೊಂದು ಮುಂದೆ ನಡೆದರೆ ಅದು ನಿಜವಾಗಿಯೂ ಕೂಡಾ ಬಹಳ ಆಶ್ಚರ್ಯಕರ ಎನಿಸುತ್ತದೆ.

ಹೌದು ನಾವು ಹೇಳಲು ಹೊರಟಿರುವುದು ಅಂತಹುದೇ ಒಂದು ವಿಚಾರವನ್ನು. ವೈರಲ್ ಆಗಿರುವ ವೀಡಿಯೋ ಒಂದರಲ್ಲಿ ವನ್ಯ ಜೀವಿಯೊಂದು ತಾನು ಕಾಲೆತ್ತಿಡುವಾಗ ತೆಗೆದುಕೊಂಡ ಜಾಗರೂಕತೆ ಗಮನಿಸಿದಾಗ ನಮಗೂ ಒಂದು ಕ್ಷಣ ಅದ್ಭುತ ಎನಿಸುತ್ತದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವೀಡಿಯೋ ಶೇರ್ ಮಾಡಿಕೊಂಡಿದ್ದು ಈ ವೀಡಿಯೋವನ್ನು ಗಮನಿಸಿದಾಗ ಭಾರೀ ಗಾತ್ರ ಹಾಗೂ ತೂಕವನ್ನು ಹೊಂದಿರುವ ಆನೆಯೊಂದು ತಾನು ನಡೆಯುವಾಗ ತನ್ನ ಕಾಲಿಗೆ ಅಡ್ಡವಾಗಿದ್ದ ಮರದ ನಿರ್ಮಾಣವೊಂದನ್ನು ನೋಡಿ ಅದರ ಮೇಲೆ ತಾನು ಕಾಲಿಟ್ಟರೆ ಅದು ಮುರಿಯುತ್ತದೆ ಎಂಬ ಕಾಳಜಿಯಿಂದ ಆನೆ ಬಹಳ ಎಚ್ಚರಿಕೆಯಿಂದ ತನ್ನ ಕಾಲನ್ನು ಎತ್ತಿಟ್ಟು ಅದನ್ನು ದಾಟಿ ಮುಂದೆ ಹೋಗಿದೆ.

ಈ ವೀಡಿಯೋವನ್ನು ಶೇರ್ ಮಾಡಿಕೊಂಡು ಸುಶಾಂತ್ ನಂದ ಅವರು ವೀಡಿಯೋ ಜೊತೆಗೆ,
“ದೊಡ್ಡ ಶಕ್ತಿಯೊಂದಿಗೆ ಹೆಚ್ಚಿನ ಜವಾಬ್ದಾರಿ ಕೂಡಾ ಬರುತ್ತದೆ. ಈ ಆನೆಯು ತನ್ನ ಸಾಮಾನ್ಯ ನಡಿಗೆಯಿಂದ ಅಲ್ಲಿರುವ ವಸ್ತುವಿಗೆ ಹಾನಿಯಾಗಬಾರದೆಂದು ಬಹಳ ನಾಜೂಕಾಗಿ ಹೆಜ್ಜೆ ಹಾಕುವಷ್ಟು ಜವಾಬ್ದಾರಿಯನ್ನು ಹೊಂದಿದೆ.
ಪ್ರಾಣಿ ಜೀವನದಿಂದ ಹಂಚಿಕೊಳ್ಳಲಾದ ಉತ್ತಮ ವಿಷಯ” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ವೀಡಿಯೋ ಗಮನಿಸಿದಾಗ ಆನೆ ತನ್ನ ಮುಂಗಾಲು ಹಾಗೂ ಹಿಂಗಾಲುಗಳಿಂದ ಆ ಮರದ ನಿರ್ಮಾಣಕ್ಕೆ ತೊಂದರೆ ಆಗಬಾರದೆಂದು ಕಾಲೆತ್ತಿ ಇಡುವುದನ್ನು ನಾವು ನೋಡಬಹುದು.

ಆನೆಯ ಈ ಸುಂದರ ವೀಡಿಯೋ ವನ್ನು 28 ಸಾವಿರ ಜನರು ವೀಕ್ಷಣೆಯನ್ನು ಮಾಡಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ಅದನ್ನು ಲೈಕ್ ಮಾಡಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರು ಆನೆಗೆ
ಸಾರ್ವಜನಿಕ ಆಸ್ತಿಯನ್ನು ನಾಶ ಮಾಡದಿರುವ ಬಗ್ಗೆ ಉತ್ತಮ ಮತ್ತು ಹೆಚ್ಚಿನ ನಾಗರೀಕತೆ ಪ್ರದರ್ಶಿಸಿದ್ದು, ಮಾನವರು ಅವನಿಂದ ಕಲಿಯಬೇಕಿದೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬರು
ಆನೆಗಳು ಭೂಮಿಯ ಮೇಲಿನ ಅತ್ಯಂತ ಪ್ರೀತಿಯ ಪ್ರಾಣಿಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಆನೆಗಳು ಅದಕ್ಕೆ ಹೊರತಾಗಿಲ್ಲ. ಈ ದೈ ತ್ಯಾ ಕಾರದ, ಸುಂದರವಾದ ಪ್ರಾಣಿಯ ಕೆಲವು ಉತ್ತಮ ವಿಷಯಗಳನ್ನು ಈ ವೀಡಿಯೋ ಬಹಿರಂಗಪಡಿಸಿದೆ ಎಂದಿದ್ದಾರೆ.