ದ್ರಾವಿಡ್ ಬ್ಯಾಟಿಂಗ್ ಮೇಲೆ ICC ಫುಲ್ ಫಿದಾ! ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದೆ ದ್ರಾವಿಡ್ ಅವರ ಅಪರೂಪದ ದಾಖಲೆ!
ಭಾರತದ ಮಾಜಿ ನಾಯಕ ‘ದ ವಾಲ್’ ಎಂದೇ ಖ್ಯಾತಿ ಪಡೆದ ಅದ್ಭುತ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡರ ಜಗತ್ತಿನ ಅತ್ತ್ಯುತ್ತಮ ಬ್ಯಾಟ್ಸ್ಮನ್ ಗಳಲ್ಲಿ ಗಣನೆಯಾಗುತ್ತದೆ. ಆ ಸಮಯದಲ್ಲಿ ಅಗ್ರಮಾನ್ಯ ಬೌಲರ್ ಗಳ ಬೆವರ ಹನಿ ಇಳಿಸಿದ ರಾಹುಲ್ ದ್ರಾವಿಡ್ ಅವರ ಫ್ಯಾನ್ಸ್ ಗಳು ಜಗತ್ತಿನ ತುಂಬ ಇದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪರಿಷತ್ತು ಅರ್ಥಾತ್ ICC ಯೂ ಸಹಿತ ರಾಹುಲ್ ದ್ರಾವಿಡ್ ಅವರ ಫ್ಯಾನ್ ಲಿಸ್ಟ್ ನಲ್ಲಿ ಸೇರಿದೆ.
ಇತ್ತೀಚೆಗೆ ರಾಹುಲ್ ಅವರ ಒಂದು ದುರ್ಲಭವಾದ ರೆಕಾರ್ಡ್ ನ್ನು ICC ಶೇರ್ ಮಾಡುತ್ತ ಅವರನ್ನು ಹೊಗಳಿದೆ. ಈ ರೆಕಾರ್ಡ್ ಮಾಡಿದವರು ಜಗತ್ತಿನಲ್ಲಿ ಬರೀ ರಾಹುಲ್ ಒಬ್ಬರೇ ಮತ್ತು ಅವರೇ ಮೊದಲ ಬ್ಯಾಟ್ಸ್ಮನ್ ಇದ್ದಾರೆ. ICC ತನ್ನ ಟ್ವೀಟರ್ ಹ್ಯಾಂಡಲ್ ನಲ್ಲಿ ರಾಹುಲ್ ದ್ರಾವಿಡ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ಬಾಲ್ ಗಳನ್ನು ಎದುರಿಸಿದ ರೆಕಾರ್ಡ್ ಶೇರ್ ಮಾಡಿದ್ದಾರೆ. ಇದಕ್ಕೂ ಮೊದಲು ಈ ರೀತಿಯ ರೆಕಾರ್ಡ್ ಇಲ್ಲಿಯವರೆಗೆ ಯಾವ ಆಟಗಾರನಿಗೂ ಸಾಧ್ಯವಾಗಿಲ್ಲ.
ICC ತನ್ನ ಟ್ವೀಟ್ ನಲ್ಲಿ ಹೀಗೆ ಹೇಳಿದೆ, ‘ರಾಹುಲ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 31,258 ಬಾಲ್ ಗಳನ್ನು ಎದುರಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಒಂದು ಜಾಗತಿಕ ದಾಖಲೆಯಾಗಿದೆ.
ರಾಹುಲ್ ಹೊರತಾಗಿ ಬೇರೆ ಯಾವ ಬ್ಯಾಟ್ಸ್ಮನ್ ನು ಸಹಿತ 30 ಸಾವಿರ ಬಾಲ್ ಗಳನ್ನು ಎದುರಿಸಿಲ್ಲ. ರಾಹುಲ್ ಅವರು ಪ್ರತಿ ಟೆಸ್ಟ್ ನಲ್ಲಿ ಸರಾಸರಿ 190.6 ಬಾಲ್ ಗಳನ್ನು ಎದುರಿಸಿದ್ದಾರೆ.
3️⃣1️⃣,2️⃣5️⃣8️⃣ – Rahul Dravid has faced more balls than anyone else in Test cricket.
— ICC (@ICC) July 11, 2020
No other batsman has even crossed 30,000 deliveries!
Dravid faced an average of 190.6 balls per Test match across his career 👏#ICCHallOfFame pic.twitter.com/G4D6LWBqLV
ರಾಹುಲ್ ದ್ರಾವಿಡ್ ಜಾಗತಿಕ ಕ್ರಿಕೆಟ್ ನಲ್ಲಿ ‘ದ ವಾಲ್’ ಈ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಅವರು 1996 ರಿಂದ 2012 ರ ವರೆಗೆ ಭಾರತದ ತಂಡದಲ್ಲಿಯ ಮಹತ್ವದ ಆಟಗಾರರಾಗಿದ್ದರು. ಭಾರತ ಅನೇಕ ಐತಿಹಾಸಿಕ ಗೆಲವುಗಳನ್ನು ದಾಖಲಿಸುವಲ್ಲಿ ರಾಹುಲ್ ಅವರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇದರ ಜೊತೆಗೆ ICC ಯು ರಾಹುಲ್ ದ್ರಾವಿಡ್ ಅವರ ಬಗ್ಗೆ ವೆಸ್ಟ್ ಇಂಡೀಜ್ ದೈತ್ಯ ಬ್ಯಾಟ್ಸ್ಮನ್ ಬ್ರಿಯನ್ ಲಾರಾ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ್ದಾರೆ. ಲಾರಾ ಅವರು ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ಕೌಶಲ್ಯವನ್ನು ಹೊಗಳುತ್ತ ಹೀಗೆ ಹೇಳುತ್ತಾರೆ. ‘ನನಗೆ ಜೀವನವಿಡೀ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ನೋಡಲು ಇಷ್ಟವಾಗುತ್ತದೆ’.