“ಧೋನಿ ಅವರನ್ನು ನೋಡಿದಾಗ ನನಗೆ ನನ್ನ ಪತಿ ಶೋಎಬ್ ಮಲಿಕ್ ನೆನಪು ಬರುತ್ತದೆ” – ಸಾನಿಯಾ ಮಿರ್ಜಾ
ಧೋನಿಯವರು ಕ್ರಿಕೆಟ್ ನಿಂದ ಸನ್ಯಾಸತ್ವವನ್ನು ಸ್ವೀಕರಿಸುವುದೇ ತಡ ಅವರ ಅಭಿಮಾನಿಗಳು ತಮ್ಮ ತಮ್ಮ ವಿಚಾರಗಳನ್ನು ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಆಗಸ್ಟ್ 15 ರಂದು ಸಾಯಂಕಾಲ 7:29 ನಿಮಿಷಕ್ಕೆ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಾದ ಧೋನಿ ಅವರು ಕ್ರಿಕೆಟ್ ನಿಂದ ನಿವೃತ್ತರಾಗುವ ಘೋಷಣೆಯನ್ನು ಮಾಡಿದರು. ಈ ಸುದ್ದಿಯನ್ನು ಧೋನಿ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಒಂದು ಹಿಂದಿ ಚಲನಚಿತ್ರದ ಹಳೆಯ ಹಾಡಿನ ಗೀತೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಿ ಹೇಳಿದರು.

ಇದೇ ಸಂದರ್ಭದಲ್ಲಿ ಭಾರತದ ಟೆನ್ನಿಸ್ ಸ್ಟಾರ್ ಆದ ಸಾನಿಯಾ ಮಿರ್ಜಾ ಅವರು ಎಂಎಸ್ ಧೋನಿ ಅವರಿಗೆ ವಿಶೇಷವಾದ ರೀತಿಯಲ್ಲಿ ಹೊಗಳಿದ್ದಾರೆ. ಈ ಹೊಗಳಿಕೆಯಲ್ಲಿ ಎಂಎಸ್ ಧೋನಿ ಮತ್ತು ತಮ್ಮ ಪತಿಯಾದ ಶೋಯೆಬ್ ಮಲಿಕ್ ಅವರಲ್ಲಿರುವ ಗುಣಗಳು ಸಮಾನವಾಗಿರುವ ಬಗ್ಗೆ ಹೇಳಿದ್ದಾರೆ.

ಒಂದು ಇಂಟರ್ವ್ಯೂನಲ್ಲಿ ಸಾನಿಯಾ ಅವರು ಹೇಳುತ್ತಾರೆ, ಧೋನಿಯವರು ನನಗೆ ನನ್ನ ಗಂಡನ ನೆನಪನ್ನು ತಂದುಕೊಡುತ್ತಾರೆ. ಏಕೆಂದರೆ ಮೈದಾನದಲ್ಲಿ ಯಾವಾಗಲೂ ಶಾಂತವಾಗಿ ಮತ್ತು ಕೂಲಾಗಿ ಇರುತ್ತಾರೆ. ಇವೇ ಗುಣಗಳನ್ನು ನಾನು ನನ್ನ ಪತಿಯಲ್ಲಿ ಕಾಣುತ್ತೇನೆ. ನನ್ನ ಪತಿಯು ಸಹಿತ ಧೋನಿಯವರ ಹಾಗೆ ಯಾವತ್ತು ಶಾಂತ ಮತ್ತು ಕೂಲ್ ಆಗಿರುತ್ತಾರೆ. ತಮ್ಮ ಹೇಳಿಕೆಯಲ್ಲಿ ಸಾನಿಯಾ ಅವರು ಹೇಳುತ್ತಾರೆ, ಧೋನಿಯವರು ತಮ್ಮ ಸ್ವಭಾವದ ಪ್ರಕಾರ ನಿವೃತ್ತಿಯ ಘೋಷಣೆಯನ್ನು ಸಹಿತ ಕೂಲ್ ಆಗಿಯೇ ಮಾಡಿದ್ದಾರೆ. ಮುಂಬರುವ ಪೀಳಿಗೆಯ ಮೇಲೆ ಧೋನಿಯವರು ತುಂಬಾ ಒಳ್ಳೆಯ ಛಾಪನ್ನು ಮೂಡಿಸಿದ್ದಾರೆ. ದೇಶಕ್ಕಾಗಿ ಧೋನಿಯವರು ಅನೇಕ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ.
#DHONI what a legend you are .. one of my all time fav athletes and personalities on and off the field .. thank you for everything you have done and good luck with the future .. it’s been an honor to be an athlete in the same era as you from the same country 🙏🏽
— Sania Mirza (@MirzaSania) August 16, 2020
ಇದೇ ಸಂದರ್ಭದಲ್ಲಿ ಸಾನಿಯಾ ಅವರು ತಮ್ಮ ಹಾಗೂ ತಮ್ಮ ಪತಿಯ ಆಟಗಳ ಬಗ್ಗೆಯೂ ವಿವರಿಸಿದರು. ಎರಡು ಆಟಗಳು ತುಂಬಾ ಪ್ರೆಷರ್ ದಿಂದ ಕೂಡಿವೆ. ಆಟದಲ್ಲಿ ಏನಾದರೂ ಕಳಪೆ ಪ್ರದರ್ಶನವಾದರೆ ಮರಳಿ ಮನೆಗೆ ಬಂದಾಗ ಮನೆಯಲ್ಲಿ ಶಾಂತವಾಗಿರುವುದು ತುಂಬಾ ಮುಖ್ಯವಾಗಿರುತ್ತದೆ. ಈ ಕಾರಣದಿಂದ ನಾನು ಸೈಕಾಲಜಿಸ್ಟ್ ಜೊತೆಗೆ ಕೆಲಸ ಮಾಡುತ್ತೇನೆ. ಮನೆಯ ವಾತಾವರಣ ತುಂಬಾ ಸಂತೋಷದಿಂದಿರಲು ಅಂದವಾಗಿರಲು ನಾನು ಸೈಕಾಲಜಿಸ್ಟ್ ಳ ಸಹಾಯ ತೆಗೆದುಕೊಳ್ಳುತ್ತೇನೆ.