ನಟಿಯೊಬ್ಬಳ ಆ… ಪ್ಯಾಕೆಟ್ ಓಪನ್ ಮಾಡುವಾಗಿನ ಫೋಟೋ ವೈರಲ್…
ನಟ ನಟಿಯರು ಯಾವ ವಿಷಯಕ್ಕೆ ಒಮ್ಮೆಲೆ ಪ್ರಸಿದ್ಧಿ ಪಡೆಯುತ್ತಾರೆ ಎಂಬುದು ಹೇಳಲು ಬರುವುದಿಲ್ಲ. ಏಕೆಂದರೆ ಇವರು ಪ್ರತಿಯೊಂದು ವಿಷಯವನ್ನು ಸಹಜವಾಗಿಯೇ ತೆಗೆದುಕೊಳ್ಳುವ ಗುಣವನ್ನು ಹೊಂದಿದವರಾಗಿರುತ್ತಾರೆ. ಇಲ್ಲಿ ಎಲ್ಲವೂ ನಾರ್ಮಲ್ ಆಗಿ ನಡೆದಿದೆ ಎಂಬಂತೆ ತೋರಿಸಲು ಇಚ್ಚಿಸುತ್ತಾರೆ.
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋ ಒಂದನ್ನು ಇತ್ತೀಚೆಗೆ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕಾರಣ ಫೋಟೋದಲ್ಲಿ ಅವರ ಕೈಯಲ್ಲಿ ಕಾಂಡೋಮ್ ನ ಹರಿದ ಪ್ಯಾಕೆಟ್ ಕಂಡುಬರುತ್ತಿದೆ. ಅದರ ಮೇಲೆ ‘ಛತ್ರಿವಾಲಿ’ ಅಂತ ಬರೆದಿದ್ದಾರೆ.
ಈ ಫೋಟೋ ಶೇರ್ ಮಾಡುವಾಗ ನಟಿ ರಕುಲ್ ಪ್ರೀತ್ ಸಿಂಗ್ ಅವರು ಹೀಗೆ ಬರೆದಿದ್ದಾರೆ, ‘ಯಾವುದೇ ಹವಾಮಾನದ ಮುನ್ಸೂಚನೆ ಇಲ್ಲದೆ ಮಳೆ ಬೀಳಬಹುದು. ನಿಮ್ಮ ಕೊಡೆ ತಯಾರಿಡಿ. ‘ಛತ್ರಿವಾಲಿ’ಯ ಫಸ್ಟ್ ಲುಕ್ ಸಾದರಪಡಿಸುತ್ತಿದ್ದೇನೆ’.
ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಅವರ ಹೊರತಾಗಿ ಸುಮಿತ್ ವ್ಯಾಸ, ಸತೀಶ್ ಕೌಶಿಕ್, ರಾಜೇಶ ತೈಲಂಗ್, ಪ್ರಾಚೀ ಶಹಾ ಮತ್ತು ರಿವಾ ಅರೋರ ಈ ಕಲಾಕಾರರು ಕಾಣಲಿದ್ದಾರೆ. ಛತ್ರಿವಾಲಿ ಚಿತ್ರದ ನಿರ್ಮಿತಿಯನ್ನು ರಾಣಿ ಸ್ಕ್ರೂವಾಲಾ ಮಾಡುತ್ತಿದ್ದು ಲಕ್ನೋ ನಲ್ಲಿ ಅದರ ಶೂಟಿಂಗ್ ಭರ್ಜರಿಯಾಗಿ ನಡೆದಿದೆ.