ನಟಿ ಸೆಲಿನಾ ಜೇಟ್ಲಿಗೆ ಆಫರ್ ಬಂದಿದ್ದು ಶಿಲ್ಪಾ ಶೆಟ್ಟಿ ಆ್ಯಪ್ ನಿಂದಲೇ ಹೊರತು ರಾಜ್ ಕುಂದ್ರಾ ಅವರಿಂದಲ್ಲ: ನಟಿಯ ವಕ್ತಾರರ ಸ್ಪಷ್ಟನೆ
ಪ್ರಸ್ತುತ ಮಾಧ್ಯಮಗಳಲ್ಲಿ ಉದ್ಯಮಿ ರಾಜ್ ಕುಂದ್ರಾ ವಿಷಯ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ತಾಜ್ ಕುಂದ್ರ ಅವರು ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸಹಾ ಕೋರ್ಟ್ ವಿಸ್ತರಿಸಿದ್ದು, ತನಿಖೆ ಬಹಳ ಚುರುಕಾಗಿ ಸಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವಿಚಾರಣೆಯು ಮುಂದುವರೆದಂತೆ ಪ್ರತಿದಿನ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿದೆ. ಕೆಲವು ನಟಿಯರ ಹೆಸರು ಇದರೊಂದಿಗೆ ತಳಕು ಹಾಕಿಕೊಳ್ಳುತ್ತಿದೆ. ಇನ್ನೂ ಕೆಲವು ನಟಿಯರು ರಾಜ್ ಕುಂದ್ರಾ ರಿಂದ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೀಗೆ ರಾಜ್ ಕುಂದ್ರಾ ಪ್ರಸ್ತುತ ಎಲ್ಲರ ಮುಂದೆ ವಿಲನ್ ಆಗಿ ಕಾಣುತ್ತಿದ್ದಾರೆ. ಇನ್ನೊಂದು ಕಡೆ ನಟಿ ಶಿಲ್ಪಾ ಶೆಟ್ಟಿ ಈ ಪ್ರಕರಣದ ನಂತರ ಕೆಲವು ಶೋಗಳಿಂದ ಹೊರಗೆ ಬಂದಿದ್ದಾರೆ. ಮಾದ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಅನಾವಶ್ಯಕ ವಿಷಯ ಚರ್ಚೆ ಮಾಡದಂತೆ ಮನವಿ ಸಹಾ ಮಾಡಿದ್ದಾರೆ.
ಆದರೆ ಇವೆಲ್ಲವುಗಳ ನಡುವೆಯೇ ಮತ್ತೊಬ್ಬ ನಟಿ ನೀಡಿದ ಹೇಳಿಕೆ ಮತ್ತೊಮ್ಮೆ ದೊಡ್ಡ ಸುದ್ದಿಯಾಗಿದೆ. ರಾಜ್ ಕುಂದ್ರಾ ಕುರಿತಾಗಿ ಹೊರ ಬರುತ್ತಿರುವ ಹೊಸ ಹೊಸ ವಿಚಾರಗಳ ಭಾಗವಾಗಿ ನಟಿ ಹಾಗೂ ರೂಪದರ್ಶಿಯಾಗಿರುವ ಸಾಗರಿಕಾ ಶೋ ನಾ ಸುಮನ್ ನೀಡಿರುವ ಒಂದು ಹೇಳಿಕೆ ಇದೀಗ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸಾಗರಿಕಾ ಬಾಲಿವುಡ್ ನಲ್ಲಿ ಈಗಾಗಲೇ ದೊಡ್ಡ ಹೆಸರನ್ನು ಮಾಡಿರುವಂತಹ ಕೆಲವು ಸುಪ್ರಸಿದ್ಧ ಸೆಲೆಬ್ರಿಟಿಗಳ ಹೆಸರನ್ನು ಹೇಳಿರುವುದು ಈ ಸಂಚಲನಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹೌದು ಸಾಗರಿಕ ಹೇಳಿರುವ ನಟಿಯರ ಹೆಸರು ಕೇಳಿದಾಗ ಒಂದು ಕ್ಷಣ ಆಶ್ಚರ್ಯ ಹಾಗೂ ಗಾಬರಿಯಾಗುವುದುಂಟು.
ಸಾಗರಿಕ ಹೇಳುವ ಪ್ರಕಾರ ಉದ್ಯಮಿ ರಾಜ್ ಕುಂದ್ರಾ ತಮ್ಮ ಮುಂದಿನ ಪ್ರಾಜೆಕ್ಟ್ ಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಸೆಲಿನಾ ಜೇಟ್ಲಿ, ನೇಹ ದೂಪಿಯಾ, ನೋರ ಫತೇಜಿ, ಕಿಮ್ ಶರ್ಮ ಹಾಗೂ ಹರ್ಷಿಖಾನ್ ರಂತಹ ದಿಗ್ಗಜ ನಟಿಯರನ್ನು ತೊಡಗಿಸಿಕೊಳ್ಳಲು ಬಯಸಿದ್ದರು ಎನ್ನಲಾಗಿದೆ. ಸಾಗರಿಕ ಹೇಳಿದ ಈ ವಿಷಯವು ದೊಡ್ಡ ಸುದ್ದಿ ಆದ ಕೂಡಲೇ ಈ ವಿಚಾರದ ಕುರಿತಾಗಿ ನಟಿ ಸೆಲೀನಾ ಜೇಟ್ಲಿ ಹೇಳಿಕೆ ಹೊರಬಂದಿದ್ದು, ಸೆಲೀನಾ ಜೇಟ್ಲಿ ಅವರ ವಕ್ತಾರರು ಸಾಗರಿಕಾ ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕುತ್ತಾ, ಸೆಲಿನಾ ಅವರಿಗೆ ನಟಿ ಶಿಲ್ಪಾ ಶೆಟ್ಟಿ ಅವರ ಜೆ ಎಲ್ ಸ್ಟ್ರೀಂ ಆ್ಯಪ್ ಗಾಗಿ ಸಂಪರ್ಕಿಸಲಾಗಿತ್ತೇ ಹೊರತು ರಾಜ್ ಕುಂದ್ರಾ ಅವರ ಹಾಟ್ ಶಾಟ್ ಗಾಗಿ ಅಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಸೆಲೀನಾ ಅವರ ವಕ್ತಾರರು ನಟಿ ಶಿಲ್ಪಾ ಶೆಟ್ಟಿ ಅವರು ಸೆಲೀನಾ ಅವರನ್ನು ಒಮ್ಮೆ ಸಂಪರ್ಕಿಸಿದ್ದರು. ಶಿಲ್ಪಾಶೆಟ್ಟಿ ಹಾಗೂ ಸೆಲೀನಾ ಜೇಟ್ಲಿ ಬಹಳ ವರ್ಷಗಳಿಂದಲೂ ಸಹಾ ಉತ್ತಮ ಸ್ನೇಹಿತೆಯರಾಗಿದ್ದಾರೆ. ಅಲ್ಲದೇ ಶಿಲ್ಪ ಶೆಟ್ಟಿ ಅವರು ತಾವು ನಡೆಸುತ್ತಿರುವ ಬಂದು ಪ್ರಭಾವಶಾಲಿಯಾಗಿರುವ ಜೆ ಎಲ್ ಆ್ಯಪ್ ಗಾಗಿ ಸೆಲೀನಾ ಅವರಿಗೆ ಆಫರ್ ನೀಡಿದ್ದರು. ರಾಜ್ ಕುಂದ್ರಾ ಅವರ ಹಾಟ್ ಶಾಟ್ ಆ್ಯಪ್ ಗಾಗಿ ಯಾವುದೇ ಆಫರ್ ಬಂದಿಲ್ಲ ಹಾಗೂ ಸೆಲೀನಾ ಅವರಿಗೆ ಅದರ ಕುರಿತಾಗಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಸೆಲೀನಾ ಅವರು ಶಿಲ್ಪ ಶೆಟ್ಟಿ ಅವರ ಆಫರನ್ನು ಸ್ವೀಕರಿಸಿದರೆ ಎನ್ನುವ ವಿಚಾರವಾಗಿ ಮಾತನಾಡಿರುವ ಸೆಲೀನಾ ಜೇಟ್ಲಿ ಅವರ ವಕ್ತಾರರು, ನಟಿ ಸೆಲೀನಾ ಅವರು ಈಗಾಗಲೇ ಕೆಲವು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿರುವ ಕಾರಣ ಅವರು ಅದಕ್ಕೆ ಬದ್ಧರಾಗಿದ್ದಾರೆ. ಆ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಆದ ಕಾರಣ ಅವರು ಶಿಲ್ಪಾ ಶೆಟ್ಟಿ ಅವರು ನೀಡಿದ ಆಫರನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅಲ್ಲದೇ ಬಾಲಿವುಡ್ ನ ಹಲವು ನಟಿಯರಿಗೆ ಶಿಲ್ಪಾ ಶೆಟ್ಟಿ ಅವರ ಆ್ಯಪ್ ನಲ್ಲಿ ಪಾಲ್ಗೊಳ್ಳುವುದಕ್ಕೆ ಆಹ್ವಾನವನ್ನು ನೀಡಲಾಗಿದೆ ಎಂದು ಸರಿನಾ ಜೇಟ್ಲಿ ಅವರ ವಕ್ತಾರರು ತಿಳಿಸಿದ್ದಾರೆ.