ನಟ್ಟ ನಡು ಕಾಡಲ್ಲಿ ಹಸು ಕರುವೊಂದನ್ನು ಹೆತ್ತಿತು, ಆದರೆ ಮನೆಯವರೆಗೆ ಎತ್ತಿಕೊಂಡು ಹೋಗಲು ಸಾಧ್ಯವಾಗುವದಿಲ್ಲ ವೆಂದು ಈ ಹಸು ಮಾಡಿದ್ದೆನು? ವಿಡಿಯೋ ನೋಡಿ…..!

ಪ್ರಾಣಿಗಳನ್ನು ಸಾಕಿದ ಜನರು ಪ್ರತಿಯಾಗಿ ಅವುಗಳಿಂದ ಏನನ್ನೂ ನಿರೀಕ್ಷಿಸದೆ ಅವುಗಳನ್ನು ಪ್ರೀತಿಸುವುದು ಬಹಳ ಮುಖ್ಯವೆಂದು ತಿಳಿದುಕೊಳ್ಳುತ್ತಾರೆ. ಅಲ್ಲದೇ ಅವರು ತಮ್ಮ ಮನೆಯಲ್ಲಿ ಪ್ರಾಣಿಯನ್ನು ಮನೆಯಲ್ಲಿಯ ಒಬ್ಬ ಪ್ರಮುಖ ವ್ಯಕ್ತಿಯ ತರ ನೋಡಿಕೊಳ್ಳುತ್ತಾರೆ. ಜನರು ಬೆಕ್ಕುಗಳು, ನಾಯಿಗಳು, ಕುದುರೆಗಳು, ಆನೆಗಳಂತಹ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ಹಳ್ಳಿಯಲ್ಲಿ ಹಸು, ಎಮ್ಮೆ, ಮೇಕೆಗಳನ್ನೂ ಹಾಲು ಕರೆಯಲು ಸಾಕುತ್ತಾರೆ. ನಮ್ಮ ಧರ್ಮದಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ. ಬಾಲ್ಯದಿಂದಲೂ ಗೋವಿನ ಹೊಟ್ಟೆಯಲ್ಲಿ ಮೂವತ್ಮೂರು ಕೋಟಿ ದೇವತೆಗಳಿದ್ದಾರೆ ಎಂದು ಹೇಳಿಕೊಟ್ಟಿದ್ದಾರೆ. ಹಸುವನ್ನು ಹೊಂದಿರುವವರು ಅದರ ಹಾಲು ಮತ್ತು ಸಗಣಿಯನ್ನು ವ್ಯಾಪಾರ ಮಾಡುತ್ತಾರೆ ಮತ್ತು ಆದ್ದರಿಂದಲೇ ಅವರು ಹಸುವನ್ನು ತುಂಬು ಹೃದಯದಿಂದ ಪ್ರೀತಿಸುತ್ತಾರೆ.

ಇಂದು ಇದೆಲ್ಲ ನಿಮಗೆ ನೆನಪು ಮಾಡಿ ಕೊಡಲು ಮುಖ್ಯ ಕಾರಣವೆಂದರೆ ನಾವು ನೋಡಿರುವ ಈ ವೀಡಿಯೊ, ಇದರಲ್ಲಿ ಹಸು ತನ್ನ ಮಾಲೀಕನ ಮೇಲಿಟ್ಟ ಪ್ರೀತಿ ಮತ್ತು ಮಾಲೀಕ ತನ್ನ ಹಸುವಿನ ಮೇಲಿಟ್ಟ ಪ್ರೀತಿಯನ್ನು ನೀವು ನೋಡಬಹುದು. ನಮ್ಮ ನಾಡಿನ ದಕ್ಷಿಣ ಭಾಗದ ಹಳ್ಳಿಯೊಂದರಲ್ಲಿ ನಡೆದ ಘಟನೆ ಇದಾಗಿದೆ. ದಿನನಿತ್ಯದಂತೆ ಶಿವ ಸದ್ಗುರು ಗೋಶಾಲೆಯಲ್ಲಿಯ ಎಲ್ಲ ಗೋವುಗಳು ಕಾಡಿನಲ್ಲಿ ಹುಲ್ಲು ಮೇಯ್ದು ಮರಳಿ ಗೋಶಾಲೆಗೆ ಬಂದಿದ್ದವು ಆದರೆ ಅದರಲ್ಲಿ ಒಂದು ಹಸು ಮಾತ್ರ ಬಂದಿರಲಿಲ್ಲ ಹೀಗಾಗಿ ಅಲ್ಲಿ ಗೊಂ#ದಲದ ವಾತಾವರಣ ನಿರ್ಮಾಣವಾಯಿತು. ಏಕೆಂದರೆ ಆ ಹಸು ತುಂಬು ಗರ್ಭಿಣಿಯಾಗಿದ್ದು ದಿನಗಳು ಸಹ ತುಂಬಿದ್ದವು ಹೀಗಾಗಿ ಹಸು ಹಾಗೂ ಕರುವಿನ ಕುರಿತು ಎಲ್ಲರೂ ಚಿಂತಿಸತೊಡಗಿದರು.

ಅಷ್ಟರಲ್ಲಿ ಹೊರಗಡೆಯಿಂದ ಹಸುವಿನ ಕೂಗಿನ ಧ್ವನಿಯು ಕೇಳಿ ಬಂದಿತು. ಅಷ್ಟರಲ್ಲಿ ಆ ಗೋಶಾಲೆಯ ಮಾಲೀಕ ತನ್ನ ಹಸುವೆ ಇರಬಹುದು ಎಂದು ಗಾಬರಿಯಾಗಿ ಹೊರಗೆ ಬಂದು ನೋಡಿದರು. ಅಷ್ಟರಲ್ಲಿ ಹಸು ತನ್ನನ್ನು ಹಿಂಬಾಲಿಸುವಂತೆ ಸೂಚನೆ ನೀಡಿತು. ಏಕೆಂದರೆ ಆ ಹಸು ತನ್ನ ಕರುವಿಗೆ ಜನ್ಮ ನೀಡಿತ್ತು. ಆದರೆ ಕರು ಮಾತ್ರ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮಾತ್ರ ಹಸು ತಾನು ಹೆತ್ತು ಇಟ್ಟ ಸ್ಥಳ ತನ್ನ ನೆನಪಿನಲ್ಲಿ ಇಟ್ಟುಕೊಂಡು ಈ ಗೋಶಾಲೆಗೆ ಬಂದಿತು. ಸುಮಾರು ಸಮಯದ ವರೆಗೆ ಹಸು ಹೇಳುವ ಭಾಷೆ ಯಾರಿಗೂ ಅರ್ಥವಾಗಲಿಲ್ಲ ಆದರೆ ಕೊನೆಗೆ ಹಸು ತನ್ನ ಹಿಂಬಾಲಿಸುವಂತೆ ಸನ್ನೆ ಮಾಡುತ್ತಿದೆ ಎಂದು ಅರಿತು ಅದರ ಹಿಂದುಗಡೆ ಹೋಗಲು ಪ್ರಾರಂಭ ಮಾಡಿದರು.

ಅಷ್ಟಕ್ಕೂ ಅಲ್ಲಿ ನಡೆದದ್ದು ಏನೆಂದರೆ, ಹಸು ದಿನನಿತ್ಯದ ಹಾಗೆ ಹುಲ್ಲು ಮೇಯಲು ಕಾಡಿಗೆ ಹೋಯಿತು. ಆದರೆ ಅದು ತುಂಬು ಗರ್ಭಧರಿಸಿದ್ದರಿಂದ ಮಧ್ಯದಲ್ಲೇ ಹೇರಿಗೆಯಾಗಲು ಪ್ರಾರಂಭವಾಯಿತು ಆದರೆ ಪಾಪ ಯಾರು ಇಲ್ಲದ ಈ ಜಾಗದಲ್ಲಿ ಏನು ಮಾಡಬೇಕು ಎಂಬುದು ಅರಿಯದೆ ಹಸು ತಾನು ಇದ್ದ ಜಾಗದಲ್ಲೇ ಕರುವಿಗೆ ಜನ್ಮ ನೀಡಿತು. ನೀಡಿದ ತಕ್ಷಣ ಇದನ್ನು ಮನೆಗೆ ಹೇಗೆ ಕರೆದುಕೊಂಡು ಹೋಗುವದು ಎಂದು ವಿಚಾರ ಮಾಡಿ ಜನ್ಮ ನೀಡಿದ ತಕ್ಷಣ ಆ ಕರುವನ್ನು ಇದ್ದ ಸ್ಥಳದಲ್ಲಿಯೇ ಬಿಟ್ಟು ಗೋಶಾಲೆಯ ಕಡೆಗೆ ಹೊರಟಿತು.

ತನ್ನ ಕರುವನ್ನು ಬಿಟ್ಟು ಗೋಶಾಲೆಯ ಕಡೆಗೆ ಬಂದು ಅಲ್ಲಿದ್ದ ಜನರಿಗೆ ತಾನು ಹೆತ್ತಿದ್ದ ಕರುವಿನ ಕುರಿತು ಹೇಳಲು ತುಂಬಾ ಪ್ರಯತ್ನ ಮಾಡಿತು ಆದರೆ ಕೊನೆಯಲ್ಲಿ ಗೋಶಾಲೆಯ ಮಾಲೀಕ ಬಹುಶಃ ಈ ಹಸು ತನ್ನ ಕರುವನ್ನು ಹೆತ್ತು ಕಾಡಿನಲ್ಲಿಯೇ ಬಿಟ್ಟು ಬಂದಿರಬಹುದು ಎಂದು ಭಾವಿಸಿ ಅದರ ಹಿಂದೆ ಹೋಗಲು ತಯಾರಾಗುತ್ತಾರೆ. ಹಸು ಸುಮಾರು ಸಮಯದ ವರೆಗೆ ನಡೆದುಕೊಂಡು ಹೋಗಿ ಕೊನೆಗೆ ಒಂದು ದಟ್ಟವಾದ ಕಾಡಿನ ಮಧ್ಯದಲ್ಲಿ ಹೋಗಲು ಪ್ರಾರಂಭ ಮಾಡುತ್ತದೆ ಅದನ್ನು ಹಿಂಬಾಲಿಸುತ್ತ ಈ ಮಹಿಳೆಯು ಸಹ ಹೋಗುತ್ತಾಳೆ. ಮಹಿಳೆಯ ಜೊತೆಗೆ ಒಂದು ನಾಯಿ ಸಹ ಈ ಹಸುವನ್ನು ಹಿಂಬಾಲಿಸುತ್ತ ಕಾಡಿನತ್ತ ಸಾಗುತ್ತದೆ.

ಸುಮಾರು ಸಮಯದ ನಂತರ ಕಾಡಿನ ಮಧ್ಯದಲ್ಲಿ ಹೋಗಿ ಹಸು ನಿಲ್ಲುತ್ತದೆ. ಹಸು ಏಕೆ ನಿಂತಿತು ಎಂದು ಭಾವಿಸಿ ನಿಂತಿದ್ದ ಸ್ಥಳದಲ್ಲಿ ಹೋಗಿ ನೋಡಿದಾಗ ಅಲ್ಲಿ ಒಂದು ಸುಂದರವಾದ ಮುದ್ದು ಕರು ಕಾಣುತ್ತೆ. ಇದನ್ನು ಕಂಡು ಎಲ್ಲರೂ ಸಂತಸ ಪಡುತ್ತಾರೆ. ನಂತರ ಆ ಕರುವನ್ನು ಎತ್ತಿಕೊಂಡು ಮೈಯನ್ನು ಸವರಿ ಹಸುವಿನ ಹಾಲು ಕುಡಿಯಲು ಬಿಡುತ್ತಾರೆ. ಹಸುವಿನ ಕರು ಹಾಲು ಕುಡಿದು ಕೊನೆಗೆ ಗೋಶಾಲೆಯ ಕಡೆಗೆ ಕರೆದುಕೊಂಡು ಬರುತ್ತಾರೆ. ಈ ಮನಕುಲುಕುವ ದೃಶವನ್ನು ಒಬ್ಬ ವ್ಯಕ್ತಿ ತನ್ನ ಮೊಬೈಲ್ ಕ್ಯಾಮೆರಾ ಮುಖಾಂತರ ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ನೀವು ಸಹ ವಿಡಿಯೋ ನೋಡಿ.