ನದಿಗೆ ಹಾರಿದ ಆಯೇಷಾಳ ಈ ಸಾವಿಗೆ ಕಾರಣನಾದ ಆಕೆಯ ಪತಿ ಯಾರು? ನದಿಗೆ ಹಾರಿದ ಆಯೇಷಾಳ ಪೂರ್ಣ ಕಥೆ ಇಲ್ಲಿದೆ!
ಗುಜರಾತಿನ ಅಹಮದಾಬಾದ್ ನ ಆಯೆಷಾ ದೇಶದೆಲ್ಲೆಡೆ ಸುದ್ದಿಯಾಗಿದ್ದು ತನ್ನ ಕೊನೆಯ ಕ್ಷಣಗಳಿಂದಾಗಿ, ಆಕೆ ಕೊನೆಯ ಕ್ಷಣಗಳ ವೀಡಿಯೋ ವೈರಲ್ ಆದ ಮೇಲೆ ಆಕೆ ನಗು ನಗುತ್ತಲೇ ತನ್ನ ಜೀವನಕ್ಕೊಂದು ಕೊನೆ ಹಾಡಿದರೂ ಕೂಡಾ ಆಕೆಯ ವೀಡಿಯೋ ಅಸಂಖ್ಯಾತ ಜನರು ಕಂಬನಿ ಮಿಡಿಯುವಂತೆ ಮಾಡಿತ್ತು. ಆಯೆಷಾ ವೀಡಿಯೋ ಇಡೀ ದೇಶದಲ್ಲಿ ವೈರಲ್ ಆಗಿ ಆಕೆಯ ನೋ ವಿ ಗೆ ಮಿಡಿದಿದ್ದರು ಹೃದಯವುಳ್ಳ ಪ್ರತಿಯೊಬ್ಬರು ಕೂಡಾ. ಆಯೆಷಾ ವೀಡಿಯೋ ಜನರ ಭಾವನೆಗಳ ಜೊತೆ ಬೆರೆತು ಹೋಯಿತು, ಜನರು ಇಂತಹ ನಗುವಿನ ಹುಡುಗಿಯ ಜೀವನ ಹೀಗೆ ಅಂ ತ್ಯ ವಾಗಲು ಕಾರಣವಾದ ಆಕೆಯ ಪತಿ ಯಾರು ಎನ್ನುವುದನ್ನು ತಿಳಿಯಲು ಬಯಸಿದ್ದು ಮಾತ್ರವೇ ಅಲ್ಲದೇ ಆತನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಜನರು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.

ಆಯೆಷಾಳ ಪತಿ ಆರಿಫ್ ಖಾನ್ ತನ್ನ ತಂದೆ ಬಾಬು ಖಾನ್ ಅವರ ಜೊತೆಗೆ ಜಲೌನ್ ನ ಒಂದು ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾನೆ. ಇನ್ನು ತಮ್ಮ ಪೂರ್ವಜರ ಮನೆಯ ಮುಂದೆ ಎರಡು ಅಂಗಡಿಗಳನ್ನು ಕೂಡಾ ಬಾಡಿಗೆಗೆ ನೀಡಿದ್ದಾನೆ. ಆರಿಫ್ ಗ್ರಾನೈಟ್ ಫ್ಯಾಕ್ಟರಿ ಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಆತನ ತಂದೆ ಒಂದು ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಆಯೇಷಾಗೆ ಬಾಲ್ಯದಿಂದಲೂ ಕೂಡಾ ಜಲೌರ್ ಎಂದರೆ ಬಹಳ ಪ್ರೀತಿ ಎನ್ನಲಾಗಿದೆ. ಆಕೆ ಶಾಲೆಯ ರಜಾ ದಿನಗಳು ಬಂದರೆ ಸಾಕು ಜಲೌರ್ ನ ತನ್ನ ತಾತನ ಮನೆಗೆ ಬಂದು ಬಿಡುತ್ತಿದ್ದಳು ಎನ್ನಲಾಗಿದೆ. ಆಯೇಷಾಳ ಜಲೌರ್ ಮೇಲಿನ ಪ್ರೀತಿ ನೋಡಿಯೇ ಆಕೆಯ ತಂದೆ ತಾಯಿ ಅವಳಿಗೆ ಜಲೌರ್ ನಲ್ಲೇ ವಿವಾಹ ಮಾಡಿದ್ದರು ಎಂದಿದ್ದಾರೆ ಅವರ ಮಾವ ಅಮರುದ್ದೀನ್.

ಆಯೇಷಾ ಜಲೌರ್ ನ ನಿವಾಸಿಯಾದ ಬಾಬು ಖಾನ್ ಅವರ ಮಗ ಆರಿಫ್ ಖಾನ್ ಅವರನ್ನು 2018 ರಲ್ಲಿ ವಿವಾಹವಾಗಿದ್ದರು. ಆಯೇಷಾ ಅವರ ಸೋದರ ಮಾವ ಹೇಳುವ ಹಾಗೆ ಆಯೆಷಾ ಅವರ ಪತಿ ಹಾಗೂ ಅವರ ಮನೆಯವರು ಮದುವೆಯ ನಂತರ ಆಕೆಯನ್ನು ವರದಕ್ಷಿಣೆಗಾಗಿ ಪೀ ಡಿ ಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಸಾಕಷ್ಟು ನೊಂದಿದ್ದ ಆಯೆಷಾ ಕೊನೆಗೆ ಇದಕ್ಕೆ ಪರಿಹಾರ ಎನ್ನುವಂತೆ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಆಯೆಷಾ ಅವರ ಮಾವ ಹೇಳುವಂತೆ ಆಕೆಗೆ ಬಾಲ್ಯದಿಂದಲೂ ಜಲೌರ್ ಮೇಲಿದ್ದ ಪ್ರೀತಿಯ ಕಾರಣದಿಂದಾಗಿ ಆಕೆ ಆಗಾಗ ಅಲ್ಲಿಗೆ ಬಂದು ಹೋಗುವುದು ಮಾಡುತ್ತಿದ್ದಳು. ಹೀಗೆ ಬರುವಾಗ ಆಕೆಗೆ ಇಲ್ಲಿ ಆರಿಫ್ ನ ಪರಿಚಯವಾಗಿದೆ.

ಅವರ ಪರಿಚಯ ಸ್ನೇಹ ವಾಗಿ, ದಿನ ಕಳೆದಂತೆ ಅದು ಪ್ರೀತಿಯಾಗಿದೆ. ಅವರ ನಡುವಿನ ಈ ಪ್ರೀತಿಯ ವಿಷಯವನ್ನು ತಿಳಿದುಕೊಂಡ ಎರಡೂ ಕುಟುಂಬಗಳ ಹಿರಿಯರು ಬಹಳ ಸಂತೋಷದಿಂದಲೇ ಅವರ ಮದುವೆಯನ್ನು ಮಾಡಿಕೊಟ್ಟಿದ್ದಾರೆ. ಆದರೆ ಮದುವೆಯ ಒಂದೂವರೆ ವರ್ಷದ ನಂತರ ಪ್ರೀತಿಯು ದ್ವೇ ಷವಾಗಿ ಪರಿವರ್ತನೆ ಆಗ ತೊಡಗಿತು. ಇಬ್ಬರ ನಡುವೆ ಪ್ರತಿ ದಿನ ಜಗಳಗಳು ನಡೆಯುತ್ತಿದ್ದವು. ಇದರಿಂದಾಗಿ ಆಯೆಷಾ ಜಲೌರ್ ಅನ್ನು ಬಿಟ್ಟು ಅಹಮದಾಬಾದ್ ಗೆ ವಾಪಸ್ಸು ಹೊರಟು ಹೋದಳು ಎನ್ನಲಾಗಿದೆ. ಇಷ್ಟೆಲ್ಲಾ ನಡೆದ ಮೇಲೂ ಕೂಡಾ ಆಯೆಷಾ ತನ್ನ ಸಂಸಾರವನ್ನು ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನವನ್ನು ಮಾಡುತ್ತಳೇ ಬಂದಿದ್ದಳು ಎಂದಿದ್ದಾರೆ. ಆದರೆ ಆರಿಫ್ ಖಾನ್ ಮಾತ್ರ ಅದನ್ನು ತಿರಸ್ಕರಿಸುತ್ತಲೇ ಬಂದಿದ್ದ ಎನ್ನಲಾಗಿದೆ.

ಹೀಗೆ ಪತಿಯು ತನ್ನ ಜೊತೆ ಬಾಳಲು ಬಯಸುತ್ತಿಲ್ಲ ಎನ್ನುವ ಸತ್ಯವನ್ನು ಅರಿತ ಮೇಲೆ ಆಯೇಷಾ ತನ್ನ ಜೀವನವನ್ನೇ ಮುಗಿಸಲು ನಿರ್ಧಾರವೊಂದನ್ನು ಮಾಡಿದ್ದಾಳೆ. ಆಯೆಷಾ ಕೊನೆಯ ಬಾರಿ ತನ್ನ ಪತಿಗೆ ಕರೆ ಮಾಡಿದಾಗ ಆತ ಆಕೆಯನ್ನು ಸಾಯುವುದಾದರೆ ಸಾಯಿ ಎಂದು ಹೇಳಿದ್ದ. ಪತಿಯು ಹೇಳಿದ ಮಾತನ್ನು ನಡೆಸಿಕೊಟ್ಟ ಆಯೇಷಾ ನದಿಗೆ ಹಾರಿ ತನ್ನ ಪ್ರಾಣವನ್ನು ಬಿಟ್ಟಿದ್ದಾಳೆ. ಇನ್ನು ಆಯೆಷಾ ಕೊನೆಯ ಬಾರಿ ವೀಡಿಯೋವನ್ನು ಮಾಡಿ ನಗುತ್ತಾ ಸಂತೋಷದಿಂದ ಮಾತನಾಡಿ, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳುತ್ತಲೇ ಆ ವೀಡಿಯೋವನ್ನು ತನ್ನವರಿಗೆ ಕಳುಹಿಸಿ ನದಿಗೆ ಹಾರಿದ್ದಳು. ಆದರೂ ಘಟನೆಯ ನಂತರ ಆಕೆಯ ಪತಿಯನ್ನು ಅರೆಸ್ಟ್ ಮಾಡಿದ್ದಾರೆ.

ಆಯೆಷಾ ಅವರ ಮಾವ ಹೇಳುವಂತೆ ಆಕೆ ಆರಿಫ್ ನನ್ನು ಬಹಳ ಪ್ರೀತಿಸುತ್ತಿದ್ದಳು ಹಾಗೂ ಬೇರೆ ಮದುವೆಯಾಗಲು ಇಷ್ಟ ಪಟ್ಟಿರಲಿಲ್ಲ ಎಂದಿದ್ದಾರೆ. ಪತಿಯೊಡನೆ ಜಗಳ ಮಾಡಿಕೊಂಡು ತವರಿಗೆ ಬಂದ ಮೇಲೆ ಆಯೆಷಾ ತನ್ನ ತಂದೆ ತಾಯಿಯ ಸಲಹೆಯ ಮೇರೆಗೆ ಆಕೆ ಒಂದು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಳು ಎಂದಿದ್ದಾರೆ. ಆಯೆಷಾ ತನ್ನ ವೀಡಿಯೋದಲ್ಲಿ ತನಗೆ ಪತಿಯ ಮೇಲೆ ಕೋಪವಿಲ್ಲ, ಆತನ ಎಲ್ಲಾ ತಪ್ಪುಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿದಳಾದರೂ ಆಯೆಷಾ ಅವರ ತಂದೆ ಮಾತ್ರ ತನ್ನ ಮಗಳ ಸಾವಿಗೆ ಕಾರಣರಾದ ಎಲ್ಲರಿಗೂ ಶಿ ಕ್ಷೆಯಾಗಬೇಕೆಂದು ಹೇಳಿದ್ದಾರೆ. ತನ್ನ ಮಗಳ ಈ ಪರಿಸ್ಥಿತಿಗೆ ಅಂದರೆ ಆ ತ್ಮ ಹತ್ಯೆಗೆ ಕಾರಣ ಆಕೆಯ ಪತಿಯೇ ಎಂದು ಆಯೆಷಾ ಅವರ ತಂದೆ ದೂರಿದ್ದಾರೆ.


