ನದಿಯಲ್ಲಿ ನೀರು ಕುಡಿಯುತ್ತಿತ್ತು ಚಿರತೆ; ನೋಡು ನೋಡುವಷ್ಟರಲ್ಲೇ ಮೊಸಳೆ ಬಾಯಿಗೆ ತುತ್ತಾಯಿತು! ಬೆ`ಚ್ಚಿ ಬೀಳಿಸುವ Viral Video
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಕೂಡ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ವನ್ಯ ಜೀವಿಗಳ ಜೀವನ ಹಾಗೂ ಅವುಗಳ ಹೋ ರಾ ಟದ ಬದುಕಿನ ರೋಚಕ ಕ್ಷಣಗಳನ್ನು ಸೆರೆಹಿಡಿದ ವೀಡಿಯೊಗಳು ಬಹಳ ವಿಶೇಷವಾಗಿ ಜನರ ಗಮನವನ್ನು ಸೆಳೆಯುವುದು ಮಾತ್ರವೇ ಅಲ್ಲದೆ, ಅದು ಜನರ ಮನಸ್ಸನ್ನು ಕೂಡ ಗೆಲ್ಲುತ್ತವೆ ಮತ್ತು ಒಂದು ಅದ್ಭುತ ಅನುಭವವನ್ನು ನೀಡುತ್ತವೆ. ಅದಕ್ಕೆ ಇಂತಹ ವಿಡಿಯೋಗಳು ಮೀಡಿಯಾಗಳಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ವೈರಲ್ ಆಗುತ್ತದೆ. ವನ್ಯಜೀವಿಗಳ ಹೋರಾಟದ ಕ್ಷಣಗಳು ಎಂದರೆ ಇಲ್ಲಿ ವಿಶೇಷವಾಗಿ ಬೇಟೆಯ ದೃಶ್ಯಗಳು ರೋಚಕ ಎನಿಸುತ್ತದೆ. ಕ್ಷಣ ಕ್ಷಣಕ್ಕೂ ಕೂಡಾ ಒಂದು ವಿಸ್ಮಯವನ್ನು ಹುಟ್ಟಿಸುತ್ತದೆ.
ಸಾಮಾನ್ಯವಾಗಿ ಹುಲಿ , ಸಿಂಹ , ಚಿರತೆ ಗಳಂತಹ ಪ್ರಾಣಿಗಳು ಜಿಂಕೆ , ಕಾಡೆಮ್ಮೆಗಳು, ಜಿರಾಫೆ ಹಾಗೂ ಇನ್ನಿತರೆ ಪ್ರಾಣಿಗಳನ್ನು ಬೇಟೆಯಾಡುವುದು ನಾವೆಲ್ಲರೂ ನೋಡಿಯೇ ಇರುತ್ತೇವೆ. ಅವುಗಳಲ್ಲಿ ಅಪರೂಪಕ್ಕೊಮ್ಮೆ ಎನ್ನುವಂತೆ ಅದೃಷ್ಟವಶಾತ್ ಸಾಧು ಪ್ರಾಣಿಗಳು ತಮ್ಮ ಮೇಲೆ ಆ ಕ್ರ ಮಣ ಮಾಡಿದ ಕ್ರೂ ರ ಪ್ರಾಣಿಗಳಿಂದ ಜಿಂಕೆಗಳು ಹಾಗೂ ತಪ್ಪಿಸಿಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಬೇ ಟೆಯ ವಿಡಿಯೋ ನೋಡುಗರನ್ನು ಸೆಳೆಯುವುದು ಮಾತ್ರವಲ್ಲದೆ ನೋಡುಗರಿಗೆ ರೋಮಾಂಚನವನ್ನು ಕೂಡಾ ಉಂಟು ಮಾಡಿದೆ. ಅನಿರೀಕ್ಷಿತ ಅಪಾಯವು ಹೇಗೆ ಬೇ ಟೆ ಗಾ ರ ನ ಪ್ರಾಣಕ್ಕೆ ಸಂ ಚ ಕಾರ ವಾಯಿತು ಎನ್ನುವುದನ್ನು ತಿಳಿಸುವಂತೆ ಕಂಡುಬಂದಿದೆ
ಈ ರೋಚಕ ವಿಡಿಯೋ ಕೆಲವೇ ಸೆಕೆಂಡುಗಳದ್ದೇ ಆದರೂ ಕೂಡಾ ನೋಡುಗನಿಗೆ ಒಂದು ಕ್ಷಣ ಭ ಯ ವನ್ನು ಹುಟ್ಟಿಸುವುದು ಖಂಡಿತ. ಇಷ್ಟಕ್ಕೂ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಂತಹ ಅನಿರೀಕ್ಷಿತ, ಅಸಾಧಾರಣ ಹಾಗೂ ರೋಚಕ ಎನಿಸುವುದು ಏನಿದೆ ಎನ್ನುವುದಾದರೆ, ಇಲ್ಲಿ ಸಾಧು ಪ್ರಾಣಿಗಳನ್ನು ಬೆನ್ನಟ್ಟಿ ಬೇ ಟೆಯಾಡುವ ಚಿರತೆಯೊಂದನ್ನು ಮೊಸಳೆ ಬೇ ಟೆ ಯಾಡಿದ, ದಿಗ್ಭ್ರಮೆ ಹುಟ್ಟಿಸುವಂತಹ ಸನ್ನಿವೇಶವನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಕೆಲವು ಕ್ಷಣಗಳಲ್ಲಿ ನೋಡುಗನು ಕೂಡಾ ಓ ಮೈ ಗಾಡ್ ಇದೇನಾಯ್ತು ಎಂದು ಉದ್ಗಾರ ತೆಗೆಯುವಂತೆ ಮಾಡುತ್ತಿದೆ ಈ ವೀಡಿಯೋ.
ವಿಡಿಯೋದಲ್ಲಿ ಬಾಯಾರಿದ ಚಿರತೆಯೊಂದು ತನ್ನ ದಾಹವನ್ನು ನೀಗಿಸಿಕೊಳ್ಳಲು ಕಾಡಿನಲ್ಲಿರುವ ಒಂದು ನೀರಿನ ಹೊಂಡದ ಬಳಿಗೆ ಬಂದಿದೆ. ಚಿರತೆ ಬಹಳ ಎಚ್ಚರಿಕೆಯಿಂದ ನೀರನ್ನು ಕುಡಿಯುತ್ತಿರುವ ಸಂದರ್ಭದಲ್ಲೇ ಅನಿರೀಕ್ಷಿತ ಅ ಪಾ ಯ ವು ಅದನ್ನು ಹಿಡಿದು ಬಿಟ್ಟಿದೆ. ನೀರಿನೊಳಗೆ ಯಾವುದೇ ಸದ್ದು ಸೂಚನೆಯಿಲ್ಲದೆ ಬಂದ ಮೊಸಳೆಯೊಂದು ತನ್ನ ಬಾಯಿಯನ್ನು ತೆರೆದು ಚಿರತೆಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ನೀರಿನೊಳಕ್ಕೆ ರಭಸವಾಗಿ ಎಳೆದು ಕೊಂಡು ಹೋಗಿದೆ. ಅನಿರೀಕ್ಷಿತ ಆ ಕ್ರ ಮ ಣವನ್ನು ಊಹಿಸಿರದ ಚಿರತೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಮೊಸಳೆಗೆ ಆಹಾರವಾಗಿದೆ. ಟ್ವಿಟರ್ನಲ್ಲಿ ವಿಡಿಯೋ ಶೇರ್ ಆದ ಎರಡೇ ದಿನಗಳಲ್ಲಿ 59 ಸಾವಿರಕ್ಕಿಂತ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.
ವಿಡಿಯೋ ನೋಡಿ
Gone in 60 seconds !!
— SAKET (@Saket_Badola) December 4, 2020
Predator becomes prey. Ways of jungle. #Forward @susantananda3 pic.twitter.com/XkJSTuadsM
4 ಸಾವಿರಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದರೆ, ಎಂಟು ನೂರಕ್ಕಿಂತ ಅಧಿಕ ಮಂದಿ ವಿಡಿಯೋ ರಿಟ್ವೀಟ್ ಮಾಡಿದ್ದಾರೆ. ಬಹಳಷ್ಟು ಜನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಪ್ರತಿಕ್ರಿಯೆ ನೀಡಿದ ಮಂದಿ ಚಿರತೆಯನ್ನು ಮೊಸಳೆ ಹಿಡಿದ ದೃಶ್ಯ ಭೀ ಕ ರ ವಾಗಿದೆ ಎಂದಿದ್ದಾರೆ. ಇನ್ನು ಕೆಲವರು ಇದೆಲ್ಲ ಪ್ರಕೃತಿಯ ನಿಯಮ ಎಂದಿದ್ದಾರೆ. ಮತ್ತೆ ಕೆಲವೊಬ್ಬರು ಇದನ್ನು ವಿಡಿಯೋ ಮಾಡಿದ ವ್ಯಕ್ತಿ ಚಿರತೆಯ ಗಮನವನ್ನು ಡೈವರ್ಟ್ ಆಗುವ ಹಾಗೆ ಮಾಡಿದ, ಅದಕ್ಕೆ ಆ ಚಿರತೆ ಮೊಸಳೆಗೆ ಬ ಲಿ ಯಾಯಿತು ಎಂದಿದ್ದಾರೆ. ಆದರೆ ಹೀಗೆ ಇತರೆ ಪ್ರಾಣಿಗಳನ್ನು ಬೇ ಟೆ ಯಾಡುವ ಚಿರತೆಯೊಂದು ಕೆಲವೇ ಕ್ಷಣಗಳಲ್ಲಿ ಮೊಸಳೆಗೆ ಆಹಾರವಾಗಿದ್ದು ಮಾತ್ರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.