ನದಿಯಲ್ಲಿ ಮೀನು ಹಿಡಿಯುವ ಮಕ್ಕಳ ಕಾಲಿಗೆ ಏನೋ ತಟ್ಟಿತು; ತೆಗೆದು ನೋಡಿದರೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತು!
ಉತ್ತರ ಪ್ರದೇಶದಲ್ಲಿಂದ ಒಂದು ಆಶ್ಚರ್ಯಕರ ಸುದ್ದಿ ಬಂದಿದೆ. ಉತ್ತರ ಪ್ರದೇಶದ ಖೋದರೊ ಕ್ಷೇತ್ರದಲ್ಲಿ ಹರಿಯುವ ಕುಆನೋ ನದಿಯ ದಂಡೆಯಲ್ಲಿ ಕೆಲವು ಮಕ್ಕಳು ಮೀನು ಹಿಡಿಯುತ್ತಿದ್ದರು, ಆ ಸಮಯದಲ್ಲಿ ಅವರ ಕಾಲುಗಳು ಯಾವುದೋ ವಸ್ತುವಿಗೆ ತಾಗಿದವು. ತದನಂತರ ಆ ವಸ್ತುವನ್ನು ಹೊರಗಡೆ ತಗೆದು ನೋಡಿದಾಗ ಅದು ಕೋಟಿ ರೂಪಾಯಿ ಬೆಲೆಯುಳ್ಳ ಒಂದು ಮೂರ್ತಿ ಯಾಗಿತ್ತು.
ದೊರೆತ ಮಾಹಿತಿಯ ಅನುಸಾರ, ದೊರೆತ ಮೂರ್ತಿಯು ಅಷ್ಟಧಾತುಗಳಿಂದ ತಯಾರಿಸಲಾಗಿದ್ದು, ಅಲ್ಲದೆ ಅದು ಅತ್ಯಂತ ಬೆಲೆಯುಳ್ಳ ಮೂರ್ತಿಯಾಗಿದೆ. ”ಈ ಮೂರ್ತಿಯು ಯಾರಾದರೂ ಕದ್ದುಕೊಂಡು ಇದನ್ನು ನದಿಯಲ್ಲಿ ಎಸೆದಿರಬಹುದು” ಎಂದು ಪೊಲೀಸರು ಹೇಳಿದ್ದಾರೆ.

ಈ ಮೂರ್ತಿಯು ಅಷ್ಟಧಾತುಗಳಿಂದ ತಯಾರಿಸಲಾಗಿದೆ, ಮೂರ್ತಿಯ ತೂಕ 18 kg ಇದೆ ಯಂದು ಹೇಳುತ್ತಿದ್ದಾರೆ. ಇದು ಸೀತಾ ಮಾತೆಯ ಮೂರ್ತಿಯಾಗಿದ್ದು, ಅಂತರರಾಷ್ಟ್ರೀಯ ಮಾರ್ಕೆಟ್ ನಲ್ಲಿ ಈ ಮೂರ್ತಿಯ ಬೆಲೆ ಕೋಟಿ ರೂಪಾಯಿ ಇದ್ದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಪ್ರಸ್ತುತ ಸಮಯದಲ್ಲಿ ಪೊಲೀಸರು ಈ ಮೂರ್ತಿ ಇಲ್ಲಿಗೆ ಎಲ್ಲಿಂದ ಬಂದಿರಬುದು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಈ ಮೂರ್ತಿಯನ್ನು ಯಾವ ದೇವಸ್ಥಾನದಲ್ಲಿ ಸ್ಥಾಪಿಸಲಾಗಿತ್ತು, ಅದನ್ನು ಎಲ್ಲಿಂದ ಕಳವು ಮಾಡಿದ್ದಾರೆ? ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ನದಿಯ ದಂಡೆಯಲ್ಲಿ ಈ ಮೂರ್ತಿ ಸಿಕ್ಕಿದ್ದರಿಂದ ಸುತ್ತಮುತ್ತಲಿನ ಸ್ಥಳಗಳಲ್ಲಿ ಎಷ್ಟೋ ಪ್ರಕಾರದ ವದಂತಿಗಳು ಹರಡುತ್ತಿವೆ. ಈ ಮೂರ್ತಿಯನ್ನು ನೋಡುವ ಸಲುವಾಗಿ ಅಲ್ಲಿಯ ಸ್ಥಾನಿಕ ಜನರು ನದಿಯ ದಂಡೆಯಲ್ಲಿ ಒಗ್ಗೂಡಿದ್ದಾರೆ.
ಮೂರ್ತಿಯ ಕುರಿತು ಪೊಲೀಸ ವರಿಷ್ಠಾಧಿಕಾರಿ ಅವರು ಹೇಳಿದ್ದೇನೆಂದರೆ, ‘ಈ ಮೂರ್ತಿಯು ಸೀತಾ ಮಾತೆಯ ಮೂರ್ತಿಯಾಗಿದ್ದು ಇದರ ಬೆಲೆ ಅಂತಾರಾಷ್ಟ್ರೀಯ ಮರುಕಟ್ಟೆಯಲ್ಲಿ ಸುಮಾರು ಕೋಟಿ ರೂಪಾಯಿಗಳಷ್ಟು ಇದೆ. ಪ್ರಸ್ತುತ ಈ ಮೂರ್ತಿಯು ಯಾವ ದೇವಸ್ಥಾನದಿಂದ ಕದಿಯಲಾಗಿದೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ” ಎಂದು ಪೊಲೀಸ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮಾಹಿತಿಯ ಅನುಸಾರ, ಕುಆನೋ ನದಿಯ ಚಂದ್ರದೀಪ ದಂಡೆಯಲ್ಲಿ ಕೆಲ ಮಕ್ಕಳು ಮೀನು ಹಿಡಿಯುತ್ತಿದ್ದರು, ಆ ಸಮಯದಲ್ಲಿ ಈ ಮೂರ್ತಿ ಮಕ್ಕಳ ಕಾಲಿನಲ್ಲಿ ಚುಚ್ಚಿತು. ಅದರ ನಂತರ ಇದನ್ನು ಹೊರಗಡೆ ತಗೆಯಲಾಯಿತು ಹಾಗೂ ಜನರಿಗೆ ಇದರ ಕುರಿತು ಮಾಹಿತಿ ನೀಡಲಾಯಿತು. ಈ ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಘಟನಾಸ್ಥಳಕ್ಕೆ ಬಂದು ಅಲ್ಲಿದ್ದ ಮೂರ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.