“ನನಗಾಗಿ ಯಾರಾದರೂ ‘ವರ’ ಹುಡುಕಿ”, 42 ವರ್ಷದ ‘ಈ’ ನಟಿಗೆ ಮದುವೆಯಾಗುವುದಿದೆಯಂತೆ!

ತೆಳ್ಳನೆಯ ಸುಂದರ ನಟಿ ಶಿಲ್ಪಾ ಶೆಟ್ಟಿಯವರ ಸಹೋದರಿ ಹಾಗೂ ಬಾಲಿವುಡ್ ಬೆಡಗಿ ಶಮಿತಾ ಶೆಟ್ಟಿ ಈಗ 42 ವರ್ಷದವರಿದ್ದಾರೆ. ಅಭಿಮಾನಿಗಳು ಎಷ್ಟೋ ಸಲ ಶಮಿತಾ ಅವರಿಗೆ ಮದುವೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಕೊನೆಗೆ ಮೇಲಿಂದ ಮೇಲೆ ತನಗೆ ಕೇಳುವ ಈ ಪ್ರಶ್ನೆಗಳಿಗೆ ಶಮಿತಾ ಈಗ ಉತ್ತರವನ್ನು ನೀಡಿದ್ದಾರೆ. ಶಮಿತಾ ಕೊನೆಗೂ ತಾನು ಮದುವೆಯಾಗದೆ ಹಾಗೆಯೇ ಜೀವನವಿಡೀ ಇರುತ್ತೇನೆ ಎಂದು ಹೇಳಿದ್ದಾರೆ.

ಶಮಿತಾ ಶೆಟ್ಟಿ ಬಾಲಿವುಡ್ ನಲ್ಲಿಯ ಒಂದು ಸಮಯದ ಬೇಡಿಕೆಯ ನಟಿ ಇದ್ದರು. ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಬಿಟ್ಟು ಈಗ ದೂರವಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮುಖಾಂತರ ಅವರು ತಮ್ಮ ಅಭಿಮಾನಿಗಳೊಂದಿಗೆ ಯಾವತ್ತೂ ಸಂಪರ್ಕದಲ್ಲಿರುತ್ತಾರೆ. ಶಮಿತಾ ಅವರ ವಯಸ್ಸು 42 ಇದೆ. ಇದೇ ಕಾರಕ್ಕಾಗಿ ಅವರ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ? ಮತ್ತು ಯಾರ ಜೊತೆಗೆ ಎಂದು ಮೇಲಿಂದ ಮೇಲೆ ಅವರಿಗೆ ಗೋಳು ಹೊಯ್ಯುತ್ತಿರುತ್ತಾರೆ. ಹೀಗಾಗಿ ಶಮಿತಾ ಅವರು ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ನಾನು ಮದುವೆಯೇ ಆಗುವುದಿಲ್ಲ ಎಂದು ನೇರ ಉತ್ತರವನ್ನು ಕೊಟ್ಟಿದ್ದಾರೆ. ಅದಕ್ಕೆ ಕಾರಣವನ್ನು ಸಹ ಹೇಳಿದ್ದಾರೆ, ಏನದು ನೋಡಿ…

ಹಿಂದುಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಶಮಿತಾ ಅವರು ತಮ್ಮ ಕರಿಯರ್ ಬಗ್ಗೆ ಮಾತನಾಡಿದ್ದಾರೆ. ಅದರ ಜೊತೆಗೆ ತಾವು ಅವಿವಾಹಿತೆಯಾಗಿ ಇರುವ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ನನಗೆ ಮದುವೆಯಾಗುವ ಆಸೆ ಇದೆ, ಇದಕ್ಕೆ ಸಂಬಂಧ ಪಟ್ಟಂತೆ ಕಳೆದ ಕೆಲವು ದಿನಗಳಿಂದ ಮದುವೆಯ ತಯಾರಿಯನ್ನು ಸಹ ಮಾಡುತ್ತಿದ್ದೇನೆ. ಆದರೆ ನನಗೆ ಮದುವೆಯಾಗುವ ಹುಡುಗ ಸದ್ಯಕ್ಕೆ ಎಲ್ಲಿದ್ದಾನೆ ಎಂಬುದು ನನಗೆ ಗೊತ್ತಿಲ್ಲ. ನಾನು ಜೀವನವಿಡೀ ಸಂತೋಷವಾಗಿರಬೇಕು ಅಂಥ ವ್ಯಕ್ತಿಯ ಜೊತೆಗೆ ನನಗೆ ಮದುವೆಯಾಗುವುದಿದೆ. ಇಂಥ ವ್ಯಕ್ತಿ ಇಲ್ಲಿಯವರೆಗೆ ನನಗೆ ಸಿಕ್ಕಿಲ್ಲ. ನಿಮ್ಮ ಹತ್ತಿರ ಇಂಥ ವ್ಯಕ್ತಿ ಏನಾದರೂ ಇದ್ದರೆ ನನಗೆ ಹೇಳಿ ಎನ್ನುತ್ತಾರೆ ಶಮಿತಾ.