‘ನನಗೆ ಕೊರೊನಾ ಆಗಿದೆ’ ಎಂದು ಹೇಳಿ ಮನೆ ಬಿಟ್ಟು ಹೋದ ಗಂಡ ಗರ್ಲ್ ಫ್ರೆಂಡ್ ಜೊತೆ ಇಂದೋರ್ ನಲ್ಲಿ ಪತ್ತೆ!
ಮೊನ್ನೆ ಮುಂಬೈ ಹತ್ತಿರದ ನವಿ ಮುಂಬೈಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ತನ್ನ ಪತ್ನಿಗೆ ಗಂಡನೊಬ್ಬ ಕೊರೊನಾ ಆಗಿರುವ ಬಗ್ಗೆ ಸುಳ್ಳು ನೆಪವನ್ನು ಹೇಳಿ ಮುಂಜಾಗ್ರತೆ ಕ್ರಮವಾಗಿ ಕುಟುಂಬವನ್ನು ಸಂಕ್ರಮಣದಿಂದ ದೂರವಿಡುವ ಸಲುವಾಗಿ ಕೋವಿಡ್ ಸೆಂಟರ್ನಲ್ಲಿ ಭರ್ತಿ ಯಾಗುತ್ತೇನೆ ಎಂದು ಹೇಳಿ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಪರಾರಿಯಾಗಿದ್ದಾನೆ.
ಇತ್ತ ಹೆಂಡತಿಯು ಪತಿಯ ಜೊತೆಗೆ ಯಾವುದೇ ರೀತಿಯಲ್ಲಿ ಸಂಪರ್ಕ ವಾಗದ ಕಾರಣದಿಂದಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಪತ್ನಿಯು ಪೊಲೀಸರ ಕಡೆಗೆ ಹೋಗಿ ತನ್ನ ಗಂಡ ಕಳೆದುಹೋಗಿದುದರ ಬಗ್ಗೆ ದೂರು ದಾಖಲಿಸಿದ್ದಾಳೆ. ಆ ನಂತರ ಪೊಲೀಸರು ತನಿಖೆಯಲ್ಲಿ ಆಕೆಯ ಗಂಡನನ್ನು ಮಧ್ಯಪ್ರದೇಶದ ಇಂದೋರ್ ನಲ್ಲಿ ಗರ್ಲ್ ಫ್ರೆಂಡ್ ಜೊತೆಗೆ ಅರೆಸ್ಟ್ ಮಾಡಿದ್ದಾರೆ.
ಹಿಂದಿ ವೃತ್ತ ಪತ್ರ ನವಭಾರತ ಟೈಮ್ ನೀಡಿದ ವರದಿಯ ಪ್ರಕಾರ ಹೆಂಡತಿಗೆ ಫೋನ್ ಮಾಡಿ, ನಾನು ಕೊರನಾ ಪಾಸಿಟಿವ್ ಆಗಿದ್ದೇನೆ. ಮತ್ತು ನಾನು ತುಂಬಾ ನೋವಿನಲ್ಲಿ ಇದ್ದೇನೆ ಅದಕ್ಕಾಗಿ ನಾನು ಸಾಯಲು ಹೊರಟಿದ್ದೇನೆ ಎಂದು ಹೇಳಿದ್ದಾನೆ. ಈ ಮಾತುಗಳನ್ನು ಕೇಳಿ ಆಕೆ ನೋವಿನಿಂದ ಒಂದೇ ಸಮನೆ ಅತ್ತಿದ್ದಾಳೆ. ಆನಂತರ ಆತನು ಫೋನ್ ಕಟ್ ಮಾಡಿದ್ದಾನೆ.
ಸಹಾಯಕ ಪೊಲೀಸ್ ನಿರೀಕ್ಷಕರಾದ ವಿನಾಯಕ್ ವಸ್ತ ಅವರು ಹೇಳುವ ಪ್ರಕಾರ ಮರುದಿನ ವಾಶಿ ರೈಲ್ವೆಸ್ಟೇಷನ್ ಹೊರಗಡೆ ಹೆಂಡತಿಯ ತಮ್ಮನು ತನ್ನ ಮಾವನ ಬೈಕ್ ರಸ್ತೆಯಲ್ಲಿ ಬಿದ್ದದ್ದನ್ನು ಗಮನಿಸಿದ್ದಾನೆ. ಬೈಕ್ ಜೊತೆಗೆ ಹೆಲ್ಮೆಟ್ , ಆಫೀಸ್ ಬ್ಯಾಗ್ ಮತ್ತು ಪರ್ಸ್ ಎಲ್ಲವೂ ಅಲ್ಲಿಯೇ ಬಿಟ್ಟು ಹೋಗಿದ್ದ. ಆಗ ಆತನ ಕುಟುಂಬವು ಈತನ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದೆ.

ದೂರು ದಾಖಲಿಸಿದ ನಂತರ ಪೊಲೀಸರ ಒಂದು ಟೀಮ್ ಆ ವ್ಯಕ್ತಿಯನ್ನು ಹುಡುಕುವ ಸಲುವಾಗಿ ಪ್ರಯತ್ನ ಶುರು ಮಾಡಿದರು. ನವಿ ಮುಂಬೈಯಲ್ಲಿ ವಾಶಿ ರೈಲ್ವೆ ಸ್ಥಾನಕ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನೆಲ್ಲ ಶೋಧಿಸಿದರು. ಆದರೆ ಎಲ್ಲಿಯೂ ಆತನ ಪತ್ತೆ ಹತ್ತಲಿಲ್ಲ. ಎಲ್ಲಾ ಕೋವಿಡ್ ಸೆಂಟರ್ ಗಳಲ್ಲಿ ಚೌಕಾಶಿ ಮಾಡಲಾಯಿತು. ಇಷ್ಟೆಲ್ಲಾ ಆದಮೇಲೆ ಆತನ ಫೋನ್ ಸರ್ವೈಲೆನ್ಸ್ ಮೇಲೆ ಶೋಧ ನಡೆಸಲಾಯಿತು. ಈ ಶೋಧದಲ್ಲಿ ಪೊಲೀಸರಿಗೆ ಕೆಲವು ಸುಳಿವುಗಳು ಸಿಕ್ಕವು.
ಪ್ರಸ್ತುತ ವ್ಯಕ್ತಿ ಮೊದಲು ತನ್ನ ಫೋನ್ ಒಳಗಿಂದ ಸಿಮ್ ತೆಗೆದು ಬಿಸಾಕಿದ್ದಾನೆ. ಆಮೇಲೆ ಅದೇ ಫೋನಿನಲ್ಲಿ ಬೇರೊಂದು ಸಿಮ್ ಹಾಕಿದ್ದಾನೆ. ಹೀಗಾಗಿ ಸರ್ವೈಲೆನ್ಸ್ ಮಾಧ್ಯಮದಿಂದ ತಿಳಿದುಬಂತು ಆ ಮೊಬೈಲ್ ಇಂದೋರ್ ನಲ್ಲಿದೆ ಎಂದು. ಆಗ ಪೊಲೀಸರ ಒಂದು ಟೀಮ್ ಇಂದೋರ್ ಗೆ ಹೋಗಿ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಇಂದೋರ್ ನಲ್ಲಿ ಆತ ತನ್ನ ಹೆಸರು ಮತ್ತು ಗುರುತು ಬದಲಾಯಿಸಿ ಗರ್ಲ್ ಫ್ರೆಂಡ್ ಜೊತೆ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು.