ನನ್ನ ಮೊದಲಿನ ಮೂರು ಚಿತ್ರಗಳಲ್ಲಿ ಹಿಂದೂ ವಿಲೆನ್ ಇದ್ದಾಗ ಕೇಳದೆ ಇದ್ದ ಪ್ರಶ್ನೆ ಈಗ ಯಾಕೆ? ರೋಹಿತ್ ಶೆಟ್ಟಿಯ ಮರುಪ್ರಶ್ನೆ….
ರೋಹಿತ್ ಶೆಟ್ಟಿ ಯವರ ಸೂರ್ಯವಂಶಿ ಚಿತ್ರ ಈಗಷ್ಟೇ ಚಿತ್ರ ಮಂದಿರಗಳಲ್ಲಿ ತೆರೆ ಕಂಡಿತು. ಚಿತ್ರ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯೂ ಆಯಿತು. ಅಕ್ಷಯ್ ಮತ್ತು ಕತರಿನಾ ಮುಖ್ಯ ಪಾತ್ರಗಳಲ್ಲಿ ಕಂಡು ಬಂದರೆ ಅಜಯ್ ದೇವಗನ್ ಮತ್ತು ರಣವೀರ್ ಸಿಂಹ ಕ್ಯಾಮಿಯೋ ರೋಲ್ ನಲ್ಲಿ ಕಾಣಿಸಿದ್ದಾರೆ.
ರೋಹಿತ್ ಶೆಟ್ಟಿ ಇತ್ತೀಚೆಗೆ ಕ್ವಿಂಟ್ ವೆಬ್ ಚಾನೆಲ್ ಗೆ ನೀಡಿದ ಒಂದು ಸಂದರ್ಶನದಲ್ಲಿ ತಮ್ಮ ಚಿತ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿತ್ರವನ್ನು OTT ಮೇಲೆ ಪ್ರದರ್ಶಿಸದೆ ಥಿಯೇಟರ್ ನಲ್ಲಿ ಏಕೆ ಪ್ರದರ್ಶನ ಮಾಡಲಾಯಿತು ಎಂಬುದರ ಬಗ್ಗೆಯೂ ಹೇಳಿದರು. ಈ ಚಿತ್ರದಲ್ಲಿ ಒಳ್ಳೆಯ ಮತ್ತು ಕೆಟ್ಟ ಮುಸ್ಲಿಂ ಹೀಗೆ ಎರಡು ಬದಿಗಳನ್ನು ತೋರಿಸಲಾಗಿದೆ. ಮುಸ್ಲಿಂ ವಿಲೇನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ರೋಹಿತ್ ಅವರು ಈ ಮೊದಲು ನನ್ನ ಚಿತ್ರಗಳಲ್ಲಿ ಹಿಂದೂ ವಿಲೆನ್ ಇದ್ದರೂ ಆ ಬಗ್ಗೆ ಆ ಸಮಯದಲ್ಲಿ ಯಾರು ಕೇಳಿರಲಿಲ್ಲ ಈಗಲೇ ಯಾಕೆ ಈ ಸಮಸ್ಯೆ, ಈಗಲೇ ಯಾಕೆ ಈ ಪ್ರಶ್ನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ರೋಹಿತ್ ಅವರ ತೆರೆಕಂಡ ಚಿತ್ರ ‘ಸೂರ್ಯವಂಶಿ’ಯಲ್ಲಿ ಒಳ್ಳೆಯ ಮುಸ್ಲಿಂ ಮತ್ತು ಕೆಟ್ಟ ಮುಸ್ಲಿಂ ಪ್ರೆಸೆಂಟ್ ಮಾಡಲಾಗಿದೆ ಎಂದು ಕೆಲವು ನ್ಯೂಸ್ ರಿಪೋರ್ಟ್ ಗಳಲ್ಲಿ ಹೇಳಲಾಗಿದೆ. ಚಿತ್ರ ತಯಾರಿಸುವಾಗ ನಾವು ಈ ರೀತಿಯ ವಿಚಾರವನ್ನೇ ಮಾಡುವದಿಲ್ಲ ಅಂದಾಗ ಜನ ಯಾಕೆ ಈ ರೀತಿ ವಿಚಾರ ಮಾಡುತ್ತಾರೆ ಎಂಬುದೇ ನನಗೆ ಅರ್ಥವಾಗುವುದಿಲ್ಲ, ಹಾಗೆಯೇ ಒಬ್ಬ ವ್ಯಕ್ತಿ ಒಳ್ಳೆಯ ಅಥವಾ ಕೆಟ್ಟ ವ್ಯಕ್ತಿ ಇದ್ದರೆ ಆತನ ಜಾತಿ ಅಥವಾ ಧರ್ಮದ ಬಗ್ಗೆ ಸಂಬಂಧ ಕೂಡಿಸಬಾರದು ಎನ್ನುತ್ತಾರೆ ರೋಹಿತ್ ಶೆಟ್ಟಿ.
ಈ ಚಿತ್ರವು 2020 ರಲ್ಲಿಯೇ ತೆರೆ ಕಾಣಬೇಕಾಗಿತ್ತು, ಆದರೆ ಕೊರೋನಾ ಕಾರಣದಿಂದಾಗಿ ಈಗ ತೆರೆ ಕಾಣುತ್ತಿದೆ. ಈ ಚಿತ್ರವನ್ನು ಥಿಯೇಟರ್ ನಲ್ಲಿಯೇ ರಿಲೀಸ್ ಮಾಡುವ ಉದ್ದೇಶ ನಮ್ಮದಾಗಿತ್ತು ಎನ್ನುತ್ತಾರೆ ರೋಹಿತ್.