ನಯಾ ಹೈ ಯಹ! ಲೈವ್ ಪಂದ್ಯದಲ್ಲಿ ಫೇಸ್ ಪ್ರೊಟೆಕ್ಷನ್ ಹಾಕಿಕೊಂಡು ಬೌಲಿಂಗ್ ಮಾಡಿದ ರಿಷಿ ಧವನ್, ಕಾರಣ ಏನು? ತಿಳಿದುಕೊಳ್ಳಿ!!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಎರಡು ತಂಡಗಳ ನಡುವೆ ಸೋಮವಾರ ಅಂದರೆ ನಿನ್ನೆ ಐಪಿಎಲ್ ನಲ್ಲಿಯ 38 ನೆಯ ಪಂದ್ಯ ಆಡಿಸಲಾಯಿತು. ಮುಂಬೈನ ವಾನಖೇಡೆ ಸ್ಟೇಡಿಯಂ ನಲ್ಲಿ ನಡೆಸಲಾದ ಈ ಪಂದ್ಯದಲ್ಲಿ ಪಂಜಾಬ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿಯೂ ಉತ್ತಮವಾದ ಪ್ರದರ್ಶನ ನೀಡಿ ಮ್ಯಾಚ್ ತನ್ನದಾಗಿಸಿ ಕೊಂಡಿದೆ. ಪಂಜಾಬ್ ನ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ಧವನ್ ಇವರ 200 ನೇ ಐಪಿಎಲ್ ಪಂದ್ಯ ಇದಾಗಿತ್ತು. ಈ ವಿಶೇಷ ಪಂದ್ಯದಲ್ಲಿ ಅವರ ಪ್ರದರ್ಶನ ಕಂಡು ಎಲ್ಲರೂ ಸಹ ಹಾಡಿ ಹೊಗಳಿದ್ದಾರೆ. ಧವನ್ ಹೊರೆತು ಮತ್ತೊಬ್ಬ ಆಟಗಾರ ಈ ಪಂದ್ಯದ ಮುಖ್ಯ ಕೇಂದ್ರಬಿಂದುವಾಗಿ ಕಂಡಿದ್ದರು ಅದು ಯಾರೆಂದರೇ ರಿಷಿ ಧವನ್.
ಐಪಿಎಲ್ 2022 ರಲ್ಲಿ ಪಂಜಾಬ್ ತಂಡದ ಮೂಲಕ ಮೊದಲನೆಯ ಪಂದ್ಯ ವಾಡಲು ಮೈದಾನಕ್ಕಿಳಿದ ವೇಗಿ ಬೌಲರ್ ರಿಷಿ ಧವನ್ ಅವರು ಆಟ ಆಡುವಾಗ ಅಂದರೆ ಬೌಲಿಂಗ್ ಮಾಡುವಾಗ ಫೇಸ್ ಪ್ರೊಟೆಕ್ಷನ್(ಫೇಸ್ ಶೀಲ್ಡ್, Face Protection) ಧರಿಸಿಕೊಂಡು ಬೌಲಿಂಗ್ ಮಾಡಿದರು. ಇದರಿಂದ ಅವರು ಎಲ್ಲ ಪ್ರೇಕ್ಷಕರ ಲಕ್ಷ್ಯವನ್ನು ತಮ್ಮ ಕಡೆಗೆ ಸೆಳೆದು ಕೊಂಡಿದ್ದಾರೆ.
Rishi Dhawan, apparently with a face protection! #CSKvsPBKS pic.twitter.com/MAoauehfXw
— Don’t Yell @ me! 😥 (@gbenhur) April 25, 2022
Rishi Dhawan playing his first IPL match in 6 years. pic.twitter.com/TSpWe4lv2r
— Mufaddal Vohra (@mufaddal_vohra) April 25, 2022
32 ವರ್ಷದ ಧವನ್ ಅವರು ಸುಮಾರು 6 ವರ್ಷಗಳ ನಂತರ ಅಂದರೆ 2016 ರ ನಂತರ ಮೊದಲನೆಯ ಸಲ ಐಪಿಎಲ್ ರಣಾಂಗಣದಲ್ಲಿ ಇಳಿದಿದ್ದರು. ಅವರನ್ನು ಪಂಜಾಬಿನ ಪರ ಐದನೆಯ ಓವರ್ ಬೌಲಿಂಗ್ ಮಾಡಲು ಕಳುಹಿಸಲಾಯಿತು ಆಗ ಇವರು ಎಲ್ಲರ ಗಮನಕ್ಕೆ ಬಂದರು. ಏಕೆಂದರೆ ಅವರು ಬೌಲಿಂಗ್ ಮಾಡುವಾಗ ತಮ್ಮ ಮುಖದ ಮೇಲೆ ಫೇಸ್ ಪ್ರೊಟೆಕ್ಷನ್ ಹಾಕಿಕೊಂಡಿದ್ದರು. ಯಾರಾದರೂ ಬೌಲಿಂಗ್ ಮಾಡುವಾಗ ಗ್ಲಾಸ್ ತರಹ ದಪ್ಪವಾಗಿದ್ದ ಫೇಸ್ ಪ್ರೊಟೆಕ್ಷನ್ ಹಾಕಿಕೊಂಡು ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದು ನೀವೇ ಹೇಳಿ. ಆದರೆ ರಿಷಿ ಧವನ್ ಫೇಸ್ ಪ್ರೊಟೆಕ್ಷನ್ ಹಾಕಿಕೊಂಡು ಬೌಲಿಂಗ್ ಮಾಡಿದ್ದರು. ಅಷ್ಟಕ್ಕೂ ಆ ಫೇಸ್ ಪ್ರೊಟೆಕ್ಷನ್ ಹಾಕಿಕೊಳ್ಳುವ ಹಿಂದಿನ ಕಾರಣ ಏನು ಅಂತ ತಿಳಿದುಕೊಳ್ಳೋಣ ಬನ್ನಿ.
ರಿಷಿ ಧವನ್ ಫೇಸ್ ಪ್ರೊಟೆಕ್ಷನ್ ಹಾಕಿಕೊಳ್ಳುವ ಹಿಂದಿದ ಕಾರಣ.
ಧವನ್ ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಫೇಸ್ ಪ್ರೊಟೆಕ್ಷನ್ ಹಾಕಿಕೊಂಡು ಕ್ರಿಕೆಟ್ ಆಡುವದರ ಹಿಂದೆ ಒಂದು ದೊಡ್ಡ ಕಾರಣ ವಿದೆ. ಧವನ್ ಅವರು ಐಪಿಎಲ್ ಸ್ಟಾರ್ಟ್ ಆಗೋ ಮುನ್ನ ರಣಜಿಯಲ್ಲಿ ಆಡಿದರು ಮತ್ತು ರಣಜಿ ಟ್ರಾಫಿಯ ಎರಡನೆಯ ಸುತ್ತಿನ ಪಂದ್ಯದಲ್ಲಿ ಧವನ್ ಅವರ ಮುಖಕ್ಕೆ ಜೋರಾಗಿ ಚೆಂಡು ತಾಗಿದ್ದರಿಂದ ಅವರ ಮೂಗಿನ ಮೇಲೆ ದೊಡ್ಡ ಪ್ರಕಾರದ ಗಾಯವಾಗಿ ಅವರನ್ನು ಸ್ಕ್ಯಾನ್ ಮಾಡುವ ಸಲುವಾಗಿ ಆಸ್ಪತ್ರೆಯಲ್ಲಿ ಸಹ ಕರೆದುಕೊಂಡು ಹೋಗಲಾಯಿತು. ಇದರಿಂದ ಅವರು ತುಂಬಾನೇ ನೋವು ಸಹನೆ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಕಾರಣದಿಂದ ಪಂಜಾಬ್ ನ ಮೊದಲನೆಯ ನಾಲ್ಕು ಪಂದ್ಯಾವಳಿಯಲ್ಲಿ ಅನುಪಸ್ಥಿತಿಯಲ್ಲಿದ್ದರು. ಹೀಗಾಗಿ ಮತ್ತೆ ಅದೇ ಪ್ರಕಾರದ ಘಟನೆ ನಡೆಯಬಾರದು ಎಂದುಕೊಂಡು ಧವನ್ ಅವರು ನಿನ್ನೆಯ ಪಂದ್ಯಾವಳಿಯಲ್ಲಿ ಫೇಸ್ ಪ್ರೊಟೆಕ್ಷನ್ ಧರಿಸಿಕೊಂಡು ಆಟ ಆಡಿದ್ದಾರೆ. ಧವನ್ ಅವರ ಮೂಗಿಗೆ ಪೆಟ್ಟಾಗಿದ್ದರಿಂದ ಅವರ ಮೂಗಿನ ಶಸ್ತ್ರಕ್ರಿಯೆ ಸಹ ಮಾಡಲಾಯಿತು. ಆದ್ದರಿಂದಲೇ ಅದರ ಮುಂಜಾಗ್ರತೆ ಎಂದುಕೊಂಡು ಅವರು ಚೆನ್ನೈ ನ ವಿರುದ್ಧ ಪಂದ್ಯದಲ್ಲಿ ಫೇಸ್ ಪ್ರೊಟೆಕ್ಷನ್ ಧರಿಸಿಕೊಂಡು ಆಟ ಆಡಿದ್ದಾರೆ ಎಂದು ತಿಳಿದು ಬರುತ್ತದೆ.
What’s more dangerous than a lion? 𝘼 𝙝𝙪𝙣𝙜𝙧𝙮 𝙡𝙞𝙤𝙣. #SherSquad, tune in to this video to find out the reason behind @rishid100‘s initial absence & how he is all set for a roaring comeback now 👊#SaddaPunjab #PunjabKings #IPL2022 #ਸਾਡਾਪੰਜਾਬ #RishiDhawan pic.twitter.com/mnKKULSSrz
— Punjab Kings (@PunjabKingsIPL) April 24, 2022